-->
Min Wage Considered for MACT Claim- ರಸ್ತೆ ಅಪಘಾತ ಪ್ರಕರಣ: ಕನಿಷ್ಟ ವೇತನ ಪರಿಗಣಿಸಿಯೇ ಪರಿಹಾರ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

Min Wage Considered for MACT Claim- ರಸ್ತೆ ಅಪಘಾತ ಪ್ರಕರಣ: ಕನಿಷ್ಟ ವೇತನ ಪರಿಗಣಿಸಿಯೇ ಪರಿಹಾರ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ರಸ್ತೆ ಅಪಘಾತ ಪ್ರಕರಣ: ಕನಿಷ್ಟ ವೇತನ ಪರಿಗಣಿಸಿಯೇ ಪರಿಹಾರ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಕೆಲಸ ವೇಳೆ ಯಾ ಕರ್ತವ್ಯದಲ್ಲಿ ಇರುವಾಗ ನಡೆದ ರಸ್ತೆ ಅಪಘಾತದಲ್ಲಿ ಸಾವು-ನೋವಿಗೆ ತುತ್ತಾದರೆ, ಆಗ ಸಂತ್ರಸ್ತರು ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಪಡೆಯುತ್ತಿದ್ದರೂ, ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಪರಿಗಣಿಸಿಯೇ ಅರ್ಜಿದಾರರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಮೈಸೂರಿನ ನಾಗೇಂದ್ರ ಎಂಬವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಏರೂರ್‌ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಮಾಡಿದೆ.ಪ್ರಕರಣ: ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್‌ ಕಂಪೆನಿ Vs ನಾಗೇಂದ್ರ ಮತ್ತಿತರರು

ಕರ್ನಾಟಕ ಹೈಕೋರ್ಟ್ (MFA 8801/2018) Dated 12-04-2022ಘಟನೆಯ ವಿವರ

ಮೈಸೂರು ನಿವಾಸಿ ನಾಗೇಂದ್ರ ಎಂಬುವರು ಮಹದೇವಪ್ಪ ಎಂಬುವರಲ್ಲಿ ಜೀಪ್‌ ಚಾಲಕನಾಗಿದ್ದರು. 1-5-2011ರಂದು ನಾಗೇಂದ್ರ ಚಲಾಯಿಸುತ್ತಿದ್ದ ಜೀಪ್‌ಗೆ ಮತ್ತೊಂದು ವಾಹನ ಡಿಕ್ಕಿಯಾಗಿ ಎಡಗಣ್ಣಿನ ದೃಷ್ಟಿ ಸಾಮರ್ಥ್ಯ ಸಂಪೂರ್ಣ ಕಳೆದುಕೊಂಡಿದ್ದರು. ಇದರಿಂದ ಉದ್ಯೋಗ ನಷ್ಟವಾಗಿತ್ತು.ಮಹಾದೇವಪ್ಪ ಅವರು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧಿಕರಣ, ಅರ್ಜಿದಾರ ಎಡಗಣ್ಣಿನ ದೃಷ್ಟಿ ಕಳೆದುಕೊಂಡು ಉದ್ಯೋಗ ವಂಚಿತನಾಗಿದ್ದು, ಶೇ. 100ರಷ್ಟು ಆದಾಯ ಸಂಪಾದನೆ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಹಾಗಾಗಿ, ಸಂತ್ರಸ್ತರಿಗೆ ಒಟ್ಟು ರೂ. 7.88 ಪರಿಹಾರ ಘೋಷಿಸಿತು.ಈ ತೀರ್ಪು ಪ್ರಶ್ನಿಸಿ ವಿಮಾ ಕಂಪನಿ ಹಾಗೂ ಹೆಚ್ಚಿನ ಪರಿಹಾರ ಕೋರಿ ನಾಗೇಂದ್ರ ಹೈಕೋರ್ಟ್ ಗೆ ಪ್ರತ್ಯೇಕ ಮೇಲ್ಮನವಿ ಅರ್ಜಿಗಳನ್ನು ಸಲ್ಲಿಸಿದ್ದರು.ಹೈಕೋರ್ಟ್ ತೀರ್ಪು ಏನು?

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರಾದ ನಾಗೇಂದ್ರ 2011ರ ಅಪಘಾತದಲ್ಲಿ ಎಡಗಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಂಡಿದ್ದು, ಉದ್ಯೋಗವನ್ನೂ ಕಳೆದುಕೊಂಡಿದ್ದಾರೆ. ಆದ್ದರಿಂದ ಅರ್ಜಿದಾರರು ಶೇ. 100ರಷ್ಟು ಆದಾಯ ಸಂಪಾದನೆ ಸಾಮರ್ಥ್ಯ ಕಳೆದುಕೊಡಿದ್ದಾರೆ ಎಂದೇ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಟ್ಟಿತು.ಅಪಘಾತ ಸಂಭವಿಸಿದಾಗ ಅವರಿಗೆ 25 ವರ್ಷವಿದ್ದು, 6000/- ಮಾಸಿಕ ವೇತನ ಘೋಷಿಸಿದ್ದರು. 2010ರಲ್ಲಿ ಕೇಂದ್ರ ಸರ್ಕಾರ ಕನಿಷ್ಠ ವೇತನವನ್ನು 4000/-ದಿಂದ 8000/-ಕ್ಕೆ ನಿಗದಿಪಡಿಸಿದೆ. ಇದರ ಆಧಾರದಲ್ಲಿ ಪರಿಹಾರ ನಿಗದಿಪಡಿಸಬೇಕಿದೆ ಎಂದು ಹೇಳಿ, ಪರಿಹಾರ ಮೊತ್ತವನ್ನು ರೂ. 7.88 ಲಕ್ಷದಿಂದ ರೂ. 10.41ಕ್ಕೆ ಹೆಚ್ಚಿಸಿ ಆದೇಶ ನೀಡಿತು.


"ಪರಿಹಾರ ಕ್ಲೇಮು ಮಾಡುವಾಗ ಅಪಘಾತ ಸಂಭವಿಸಿದ ವೇಳೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಪ್ರಮಾಣಕ್ಕಿಂತ ಕಡಿಮೆ ವೇತನ ಇತ್ತು ಎಂದು ಬಾಧಿತರು ತಿಳಿಸಿದ್ದರೂ, ಪರಿಹಾರ ನಿಗದಿಗೆ ಕನಿಷ್ಠ ವೇತನ ಪ್ರಮಾಣವನ್ನೇ ಪರಿಗಣಿಸುವುದು ನ್ಯಾಯಾಲಯದ ಕರ್ತವ್ಯ" ಎಂದು ಹೈಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.For Judgement: 

ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್‌ ಕಂಪೆನಿ Vs ನಾಗೇಂದ್ರ ಮತ್ತಿತರರು

Ads on article

Advertise in articles 1

advertising articles 2

Advertise under the article