-->
CrPC 437: ವಿಶೇಷ ಸಂದರ್ಭಗಳಲ್ಲಿ ಆರೋಪಿಗೆ ಜಾಮೀನು ನೀಡಬಹುದು- ಕರ್ನಾಟಕ ಹೈಕೋರ್ಟ್‌

CrPC 437: ವಿಶೇಷ ಸಂದರ್ಭಗಳಲ್ಲಿ ಆರೋಪಿಗೆ ಜಾಮೀನು ನೀಡಬಹುದು- ಕರ್ನಾಟಕ ಹೈಕೋರ್ಟ್‌

CrPC 437: ವಿಶೇಷ ಸಂದರ್ಭಗಳಲ್ಲಿ ಆರೋಪಿಗೆ ಜಾಮೀನು ನೀಡಬಹುದು- ಕರ್ನಾಟಕ ಹೈಕೋರ್ಟ್‌





ದಂಡ ಪ್ರಕ್ರಿಯಾ ಸಂಹಿತೆ(IPC)ಯ ಸೆಕ್ಷನ್ 437ರಲ್ಲಿ ಹಾಕಲಾದ ಅರ್ಜಿಯನ್ನು ವಿಶೇಷ ಸಂದರ್ಭಗಳಲ್ಲಿ ಪುರಸ್ಕರಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಜೀವಾವಧಿ ಯಾ ಮರಣ ದಂಡನೆ ಶಿಕ್ಷೆ ವಿಧಿಸಬಹುದಾದ ಅಪರಾಧ ಕೃತ್ಯದಲ್ಲಿ ಭಾಗಿಯಾದ ಆರೋಪಿಗೂ CrPC ಸೆಕ್ಷನ್ 437ರ ಅರ್ಜಿ ಪ್ರಕಾರ ವಿಶೇಷ ಸಂದರ್ಭಗಳಲ್ಲಿ ಜಾಮೀನು ನೀಡಬಹುದು ಎಂದು ನ್ಯಾಯಪೀಠ ಹೇಳಿದೆ.


ಪ್ರಕರಣ: ನೇತ್ರ Vs ಕರ್ನಾಟಕ ರಾಜ್ಯ

ಕರ್ನಾಟಕ ಹೈಕೋರ್ಟ್- CRL.P 2306/2022 dated 12-05-2022


ಬೆಂಗಳೂರಿನ ರಿಯಲ್ಟಿ ಉದ್ಯಮಿ ಪತಿಯನ್ನು ಕೊಲೆ ಮಾಡಿದ್ದ ಆರೋಪದಡಿ ಬಂಧನದಲ್ಲಿದ್ದ ನೇತ್ರಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಮಾಡಿದೆ.


ಅರ್ಜಿದಾರ ಮಹಿಳೆ ವಿರುದ್ಧ ಗಂಭೀರ ಆರೋಪ ಇದೆ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ನೀಡಬಹುದಾದ ಅಪರಾಧ ಕೃತ್ಯದ ಆರೋಪವಿದೆ. ಈ ಕಾರಣದಿಂದ ಸೆಷನ್ಸ್ ಕೋರ್ಟ್ ಕೂಡ ಜಾಮೀನು ನೀಡಿಲ್ಲ. ಆದರೆ, ಮರಣ ದಂಡನೆ ಯಾ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಬೇಕು ಎಂದೇನೂ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಆರೋಪಿಯು 16 ವರ್ಷಕ್ಕಿಂತ ಕಡಿಮೆ ವಯೋಮಾನದವರಾಗಿದ್ದರೆ, ಯಾ ಮಹಿಳೆಯಾಗಿದ್ದರೆ, ಯಾ ರೋಗಿಯಾಗಿದ್ದರೆ, ದುರ್ಬಲನಾಗಿದ್ದರೆ, ಇಂತಹ ಪರಿಸ್ಥಿತಿಯಲ್ಲಿ ಆರೋಪಿಗೆ ಜಾಮೀನು ನೀಡಲು ಅವಕಾಶವಿದೆ ಎಂದು ನ್ಯಾಯಪೀಠ ಹೇಳಿದೆ.


ಮೃತ ಪತಿ ಬೇರೆ ಹುಡುಗಿಯರ ಜೊತೆ ಸುತ್ತುತ್ತಿದ್ದ ಎಂಬ ಕಾರಣಕ್ಕೂ ಹಾಗೂ ತನ್ನ ಸ್ನೇಹಿತನ ಜತೆ ಲೈಂಗಿಕ ಸಂಬಂಧ ಇರಿಸುವಂತೆ ಪತ್ನಿಗೆ ಹೇಳಿದ್ದಾನೆ ಎಂಬ ಕಾರಣಕ್ಕೂ ದಂಪತಿ ನಡುವೆ ಜಗಳ ನಡೆದಿತ್ತು ಎನ್ನಲಾಗುತ್ತಿದೆ.


ಗಂಡನ ಸಾವಿನ ಬಳಿಕ ಆರೋಪಿ ಪತ್ನಿ ಪೊಲೀಸರಿಗೆ ಶರಣಾಗಿದ್ದಾರೆ. ಈ ಪ್ರಕರಣದ ಕುರಿತು ಪೊಲೀಸರು ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಜೊತೆಗೆ, ಆರೋಪಿ ಮಹಿಳೆಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ. ಈ ಕಾರಣಗಳಿಂದ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ತೀರ್ಪು ನೀಡಿದ ನ್ಯಾಯಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿದೆ. 



ತೀರ್ಪಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೇತ್ರ Vs ಕರ್ನಾಟಕ ರಾಜ್ಯ


Ads on article

Advertise in articles 1

advertising articles 2

Advertise under the article