-->
PLA has adjudicatory Powers-SC - ಖಾಯಂ ಲೋಕ ಅದಾಲತ್‌ ನ್ಯಾಯತೀರ್ಪು ಮಹತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

PLA has adjudicatory Powers-SC - ಖಾಯಂ ಲೋಕ ಅದಾಲತ್‌ ನ್ಯಾಯತೀರ್ಪು ಮಹತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಖಾಯಂ ಲೋಕ ಅದಾಲತ್‌ ನ್ಯಾಯತೀರ್ಪು ಮಹತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್





#  ಖಾಯಂ ಲೋಕ ಅದಾಲತ್‌ಗೂ ನ್ಯಾಯತೀರ್ಪು ಮಾಡುವ ಅಧಿಕಾರ ಇದೆ

#  ರಾಜಿ ಸಂಧಾನ ಮಾಡುವ, ತೀರ್ಪು ನೀಡುವ ಎರಡೂ ಅಧಿಕಾರ ಇದೆ

#  ಮೊದಲು ರಾಜಿ ಸಂಧಾನಕ್ಕೆ ಪ್ರಯತ್ನಿಸಬೇಕು

#  ಖಾಯಂ ಲೋಕ ಅದಾಲತ್ ಅರ್ಹತೆ ಆಧಾರದಲ್ಲಿ ತೀರ್ಪು ನೀಡಲಾಗದು

#  ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು


ಪರ್ಮನೆಂಟ್ ಲೋಕ ಅದಾಲತ್ (ಖಾಯಂ ಲೋಕ ಅದಾಲತ್-PLA) ನೀಡುವ ತೀರ್ಪಿಗೆ ಮಹತ್ವ ನೀಡುವ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, PLAಗೆ ಪಕ್ಷಕಾರರ ಜೊತೆ ರಾಜಿ ಸಂಧಾನ ಮಾಡುವ ಹಕ್ಕು ಇದೆ. ಅದೇ ರೀತಿ, ಪ್ರಕರಣದ ಕುರಿತು ತೀರ್ಪು ನೀಡುವ ಅಧಿಕಾರವೂ ಇದೆ ಎಂದು ಸುಪ್ರೀಂ ನ್ಯಾಯಪೀಠ ಹೇಳಿದೆ.


ಪ್ರಕರಣ: ಕೆನರಾ ಬ್ಯಾಂಕ್ Vs ಜಿ ಎಸ್ ಜಯರಾಮ

ಸುಪ್ರೀಂ ಕೋರ್ಟ್, Civil Appeal- 3872/2022 Dated 19-05-2022


ಖಾಯಂ ಲೋಕ ಅದಾಲತ್‌ಗಳಿಗೆ ನ್ಯಾಯತೀರ್ಪು ಮಾಡುವ ಅಧಿಕಾರ ಇಲ್ಲ ಎಂದು ಮಾನ್ಯ ಕರ್ನಾಟಕ ಹೈಕೋರ್ಟ್ ಏಕ ಸದಸ್ಯಪೀಠ 3-7-2019ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ 6-3-2021ರಂದು, ಖಾಯಂ ಲೋಕ ಅದಾಲತ್‌ಗಳು ರೆಗ್ಯೂಲರ್ ಸಿವಿಲ್ ಕೋರ್ಟ್‌ ರೀತಿ ಕಾರ್ಯನಿರ್ವಹಿಸಲಾಗದು ಎಂದು ಹೇಳಿತ್ತು.


ಈ ತೀರ್ಪನ್ನು ಪ್ರಶ್ನಿಸಿ ಕೆನರಾ ಬ್ಯಾಂಕ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಖಾಯಂ ಲೋಕ ಅದಾಲತ್‌ಗಳು ಮೊದಲು ವಿವಾದ ಇತ್ಯರ್ಥಪಡಿಸಲು ಪ್ರಯತ್ನಿಸಬೇಕು. ಕಕ್ಷಿದಾರರ ನಡುವೆ ಯಾವುದೇ ಒಪ್ಪಂದ ಏರ್ಪಡದಿದ್ದಾಗ ಮಾತ್ರ ಅರ್ಹತೆಯ ಆಧಾರದ ಮೇಲೆ ಪ್ರಕರಣ ನಿರ್ಧರಿಸಲು ಮುಂದಾಗಬೇಕು ಎಂಬ ಐತಿಹಾಸಿಕ ತೀರ್ಪು ಪ್ರಕಟಿಸಿತು.


G.S. ಜಯರಾಮ ಅವರಿಗೆ ಸಾಲದ ಬಾಕಿ ಮೊತ್ತವನ್ನು ಮರುಪಾವತಿಸಲು ಆದೇಶ ನೀಡಬೇಕೆಂದು ಕೋರಿ ಮೇಲ್ಮನವಿದಾರ ಕೆನರಾ ಬ್ಯಾಂಕ್‌ ಈ ಹಿಂದೆ ಲೋಕ ಅದಾಲತ್‌ಗೆ ಅರ್ಜಿ ಸಲ್ಲಿಸಿತ್ತು. ಈ ನ್ಯಾಯವಿಚಾರಣೆಯಲ್ಲಿ ಸುಸ್ತಿದಾರ ಜಯರಾಂ ಹಾಜರಾಗದ ಕಾರಣ ಅವರನ್ನು ಶಿವಾಯಿ ಮಾಡಿ ಪ್ರಕರಣವನ್ನು ಏಕಪಕ್ಷೀಯ ಎಂದು ಘೋಷಿಸಿ ಅರ್ಜಿದಾರರ ಪರ ಆದೇಶ (ಎಕ್ಸ್‌ ಪಾರ್ಟೆ ಆರ್ಡರ್) ಹೊರಡಿಸಿತ್ತು.


ಈ ಎಕ್‌ಪಾರ್ಟೆ ಆದೇಶವನ್ನು ಪ್ರಶ್ನಿಸಿ ಜಯರಾಮ್ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮಾನ್ಯ ಹೈಕೋರ್ಟ್‌ ಜಯರಾಂ ಪರ ತೀರ್ಪು ನೀಡಿತು. ಕೆನರಾ ಬ್ಯಾಂಕ್‌ ವಿಭಾಗೀಯ ಪೀಠಕ್ಕೆ ತನ್ನ ಮೇಲ್ಮನವಿ ಸಲ್ಲಿಸಿತು. ಅಲ್ಲೂ ನ್ಯಾಯಪೀಠ ಏಕಸದಸ್ಯ ಪೀಠದಂತೆಯೇ ತೀರ್ಪು ನೀಡಿ ಕೆನರಾ ಬ್ಯಾಂಕಿನ ಮೇಲ್ಮನವಿಯನ್ನು ವಜಾಗೊಳಿಸಿತು. ಅಂತಿಮವಾಗಿ ಬ್ಯಾಂಕ್‌, ಸುಪ್ರೀಂ ಕೋರ್ಟ್‌ ಮೊರೆ ಹೋಯಿತು.


ಕೆನರಾ ಬ್ಯಾಂಕ್‌ ಮನವಿ ಆಲಿಸಿದ ಸರ್ವೋಚ್ಚ ನ್ಯಾಯಾಲಯ

ಐತಿಹಾಸಿ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್, "ಖಾಯಂ ಲೋಕ ಅದಲಾತ್‌ಗೆ ತೀರ್ಪು ನೀಡುವ ಅಧಿಕಾರ ಇಲ್ಲ ಎಂಬ ಹೈಕೋರ್ಟ್‌ ತೀರ್ಪು ಸರಿಯಲ್ಲ. ಪ್ರಸ್ತುತ ಪ್ರಕರಣದಲ್ಲಿ ಅದಾಲತ್‌ ರಾಜಿ ಸಂಧಾನ ಪಾಲಿಸದೇ ಅದು ನೇರವಾಗಿ ಅರ್ಹತೆಯ ಆಧಾರದ ಮೇಲೆ ಪ್ರಕರಣ ನಿರ್ಧರಿಸಿದೆ. ಕಾಯಿದೆಯ ಪ್ರಕಾರ ರಾಜಿ ಸಂಧಾನದ ಹಂತವು ಕಡ್ಡಾಯವಾಗಿದ್ದು ಅದನ್ನು ತಪ್ಪಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿತು.


ಇದೇ ವೇಳೆ, ಖಾಯಂ ಲೋಕ ಅದಾಲತ್ ಮೊದಲು ರಾಜಿ ಸಂಧಾನಕ್ಕೆ ಪ್ರಯತ್ನ ನಡೆಸಬೇಕು. ಆ ಪ್ರಕ್ರಿಯೆ ಮಾಡದೆ ನೇರವಾಗಿ ಪ್ರಕರಣದ ನ್ಯಾಯ ತೀರ್ಮಾನ ಮಾಡಿರುವುದು ತಪ್ಪು ಎಂಬ ಹೈಕೋರ್ಟ್‌ನ ತೀರ್ಪಿನ ಅಂಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿಯಿತು. 


Click here for the Judgement-

ಕೆನರಾ ಬ್ಯಾಂಕ್ Vs ಜಿ ಎಸ್ ಜಯರಾಮ


Ads on article

Advertise in articles 1

advertising articles 2

Advertise under the article