-->
Postitution is Legal, says SC- ವೇಶ್ಯಾವೃತ್ತಿಗೆ ಸುಪ್ರೀಂ ಮನ್ನಣೆ, ವೇಶ್ಯೆಯರಿಗೆ ಕಿರುಕುಳ ಕೊಟ್ಟರೆ ಪೊಲೀಸರ ವಿರುದ್ಧವೇ ಕ್ರಮ ಎಂದ ನ್ಯಾಯಪೀಠ

Postitution is Legal, says SC- ವೇಶ್ಯಾವೃತ್ತಿಗೆ ಸುಪ್ರೀಂ ಮನ್ನಣೆ, ವೇಶ್ಯೆಯರಿಗೆ ಕಿರುಕುಳ ಕೊಟ್ಟರೆ ಪೊಲೀಸರ ವಿರುದ್ಧವೇ ಕ್ರಮ ಎಂದ ನ್ಯಾಯಪೀಠ

ವೇಶ್ಯಾವೃತ್ತಿಗೆ ಸುಪ್ರೀಂ ಮನ್ನಣೆ, ವೇಶ್ಯೆಯರಿಗೆ ಕಿರುಕುಳ ಕೊಟ್ಟರೆ ಪೊಲೀಸರ ವಿರುದ್ಧವೇ ಕ್ರಮ ಎಂದ ನ್ಯಾಯಪೀಠ





ವೇಶ್ಯಾವಾಟಿಕೆ ಎಂಬುದೂ ಒಂದು ವೃತ್ತಿ. ಕಾನೂನಿನ ಅಡಿಯಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನೂ ಗೌರವಯುತವಾಗಿ ನೋಡಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


'ವೇಶ್ಯಾವಾಟಿಕೆ' ಕಾನೂನು ಬದ್ಧ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರನ್ನು ಗೌರವಯುತವಾಗಿ ಕಾಣಬೇಕು ಎಂದು ತಾಕೀತು ಮಾಡಿದೆ. ಜತೆಗೆ ಪೊಲೀಸರು ಮಧ್ಯಪ್ರವೇಶ ಮಾಡಿ ತೊಂದರೆ ಕೊಟ್ಟರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂಬ ಎಚ್ಚರಿಕೆ ಸುಪ್ರೀಂ ಕೋರ್ಟ್‌ ನೀಡಿದೆ.


ಪ್ರಕರಣ: Budhadev Karmaskar Vs State of West Bengal And Ors

ಸುಪ್ರೀಂ ಕೋರ್ಟ್- CrA 135/2010 Dt 19-05-2022


ವೇಶ್ಯಾವಾಟಿಕೆ ಚಟುವಟಿಕೆ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡವಂತಿಲ್ಲ. ಒಂದು ವೇಳೆ, ಅವರ ಮೇಲೆ ಕ್ರಮ ಕೈಗೊಂಡರೆ ಪೊಲೀಸರ ವಿರುದ್ಧವೇ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.


ನ್ಯಾ ಎಲ್‌ ನಾಗೇಶ್ವರ ರಾವ್‌ ನೇತೃತ್ವದ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ.


ತೀರ್ಪಿನಲ್ಲಿ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ರಕ್ಷಣೆ ಬಗ್ಗೆ ಆರು ನಿರ್ದೇಶನಗಳನ್ನು ರೂಪಿಸಿದ್ದು, ವೇಶ್ಯೆಯರಿಗೆ ಸಮಾಜದ ಪ್ರತಿಯೊಬ್ಬರಿಗೂ ಸಿಗಬೇಕಾದ ರಕ್ಷಣೆಯ ಹಕ್ಕಿದೆ. ಕ್ರಿಮಿನಲ್‌ ಮೊಕದ್ದಮೆ ಹೂಡುವಾಗ ಅವರ ವಯಸ್ಸು ಮತ್ತು ಅವರು ಸ್ವ ಇಚ್ಚೆಯಿಂದ ಭಾಗಿಯಾಗಿದ್ದಾರ ಎಂಬ ಬಗ್ಗೆ ತಿಳಿದುಕೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.

"ಒಂದು ವೇಳೆ, ಸ್ವ ಇಚ್ಚೆಯಿಂದ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಅಥವಾ ಕ್ರಿಮಿನಲ್‌ ಮೊಕದ್ದಮೆ ಹೂಡುವ ಹಕ್ಕು ಪೊಲೀಸರಿಗೂ ಇಲ್ಲ. ವೃಥಾ ಮಧ್ಯಪ್ರವೇಶ ಮಾಡುವುದನ್ನು ನ್ಯಾಯಪೀಠ ಸಹಿಸುವುದಿಲ್ಲ. ವೇಶ್ಯಾವಾಟಿಕೆಯೂ ಒಂದು ವೃತ್ತಿ. ದೇಶದ ಪ್ರತಿ ನಾಗರಿಕನಿಗೆ ಸಿಗುವ ರಕ್ಷಣೆ, ಹಕ್ಕು ಮತ್ತು ಗೌರವ ಅವರಿಗೂ ದೊರೆಯಬೇಕು" ಎಂದು ನ್ಯಾಯಪೀಠ ತನ್ನ ಐತಿಹಾಸಿಕ ತೀರ್ಪಿನಲ್ಲಿ ಹೇಳಿದೆ.


"ಈ ವೃತ್ತಿಯಲ್ಲಿ ಭಾಗಿಯಾಗುತ್ತಿರುವ ವ್ಯಕ್ತಿ 18 ವರ್ಷ ಮೇಲ್ಪಟ್ಟವರು, ಸ್ವ-ಇಚ್ಚೆಯಿಂದ ವೃತ್ತಿಯಲ್ಲಿ ಭಾಗಿಯಾಗಿದ್ದಾರೆ ಎಂದಾದರೆ ಅದು ಕಾನೂನಾತ್ಮಕವಾಗಿ ತಪ್ಪಲ್ಲ. ಪೊಲೀಸರು ಮಧ್ಯಪ್ರವೇಶ ಮಾಡುವುದಾಗಲೀ, ಕೇಸು ದಾಖಲಿಸುವುದಾಗಲೀ ಮಾಡಿದರೆ ಅದು ಕಾನೂನು ಬಾಹಿರ" ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.


ಲೈಂಗಿಕ ಕಾರ್ಯಕರ್ತರ ಮಕ್ಕಳನ್ನು ಕೇವಲ ಹೆತ್ತವರು ವೇಶ್ಯೆ ಎಂಬ ಕಾರಣಕ್ಕೆ ದೂರ ಮಾಡುವಂತಿಲ್ಲ. ಅವರು 'ಸೆಕ್ಸ್‌' ಇಂಡಸ್ಟ್ರಿಯಲ್ಲಿ ದುಡಿಯುತ್ತಿದ್ದಾರೆ. ಇತರ ಉದ್ಯಮಗಳಂತೆ ಅದೂ ಒಂದು ಉದ್ಯಮ/ವೃತ್ತಿ ಎಂದಿರುವ ನ್ಯಾಯಪೀಠ, ಮೂಲಭೂತ ಮಾನವೀಯ ಹಕ್ಕು, ಗೌರವ ಮತ್ತು ರಕ್ಷಣೆ ವೇಶ್ಯೆಯರು ಮತ್ತವರ ಮಕ್ಕಳಿಗೆ ಸಿಗಬೇಕು ಎಂದು ಹೇಳಿದೆ.


Click here for Judgment

Budhadev Karmaskar Vs State of West Bengal And Ors

Ads on article

Advertise in articles 1

advertising articles 2

Advertise under the article