-->
Live In Relationship - ಸಹಬಾಳ್ವೆಯಲ್ಲಿ ಜನಿಸಿದ ಮಗುವಿಗೆ ಆಸ್ತಿ ಪಾಲು ಹಕ್ಕು: ಸುಪ್ರೀಂ ಮಹತ್ವದ ತೀರ್ಪು

Live In Relationship - ಸಹಬಾಳ್ವೆಯಲ್ಲಿ ಜನಿಸಿದ ಮಗುವಿಗೆ ಆಸ್ತಿ ಪಾಲು ಹಕ್ಕು: ಸುಪ್ರೀಂ ಮಹತ್ವದ ತೀರ್ಪು

ಸಹಬಾಳ್ವೆಯಲ್ಲಿ ಜನಿಸಿದ ಮಗುವಿಗೆ ಆಸ್ತಿ ಪಾಲು ಹಕ್ಕು: ಸುಪ್ರೀಂ ಮಹತ್ವದ ತೀರ್ಪು

ಸುದೀರ್ಘ ಸಮಯದ ವರೆಗೆ ಒಂದೇ ಸೂರಿನಲ್ಲಿ ಗಂಡು-ಹೆಣ್ಣು ಒಂದಾಗಿ ಬಾಳ್ವೆ ನಡೆಸಿದರೆ ಯಾ ಸಹಬಾಳ್ವೆಯ ಜೀವನ ನಡೆಸಿದ್ದರೆ ಅದನ್ನು ವೈವಾಹಿಕ ಸಂಬಂಧ ಎಂದೇ ಪರಿಗಣಿಸಲು ಬಲವಾದ ಕಾರಣಗಳಿವೆ. ಇಂತಹ ದಾಂಪತ್ಯದಿಂದ ಜನಿಸಿದ ಮಕ್ಕಳಿಗೆ ಆಸ್ತಿಯಲ್ಲಿ ಪಾಲನ್ನು ನಿರಾಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.


ಆದಾಗ್ಯೂ, ಸಹಬಾಳ್ವೆಯಲ್ಲಿ ಮದುವೆಯ ಊಹೆಯು ನಿರಾಕರಿಸಬಹುದಾದರೂ, ಯಾವುದೇ ಮದುವೆ ನಡೆಯಲಿಲ್ಲ ಎಂಬುದನ್ನು ಸಾಬೀತುಪಡಿಸುವ ಭಾರೀ ಹೊರೆ ಅವನ ಮೇಲೆ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.


ಪ್ರಕರಣ: Kattukandi Edathil Krishnan vs Kattukandi Edathil Valsan

ಸುಪ್ರೀಂ ಕೋರ್ಟ್, CA 6406, 6407/2010 Dated 13-06-2022


ಹೆತ್ತವರು ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಮಗುವಿಗೆ ಆಸ್ತಿಯಲ್ಲಿ ಹಕ್ಕಿಲ್ಲ ಎಂದು ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಪ್ರಕರಣದ ಅರ್ಜಿದಾರರು ತಮ್ಮ ಪೋಷಕರು ಅಧಿಕೃತವಾಗಿ ಮದುವೆ ಆಗದಿದ್ದರೂ, ಸುದೀರ್ಘ ಸಮಯದ ವರೆಗೆ ಪತಿ-ಪತ್ನಿಯಂತೆ ಸಹಬಾಳ್ವೆ ನಡೆಸಿದ್ದರು ಎಂದು ವಾದಿಸಿದ್ದರು.ಮದುವೆ ಆಗಿಲ್ಲ ಎಂಬುದಕ್ಕೆ ಯಾವುದೇ ದಾಖಲೆಯನ್ನು ನ್ಯಾಯಪೀಠದ ಮುಂದೆ ಇಡದಿದ್ದರೂ, ವಿಚಾರಣಾ ನ್ಯಾಯಾಲಯದಲ್ಲಿ ಪೋಷಕರು ಸಹಬಾಳ್ವೆ ನಡೆಸಿದ್ದರು ಎಂಬದನ್ನು ನಿರಾಕರಿಸುವ ಪ್ರಯತ್ನ ನಡೆಸಿಲ್ಲ. ಹಾಗಾಗಿ, ದಂಪತಿ ಮದುವೆಯಾಗದಿದ್ದರೂ ಒಂದಾಗಿ ಸಹಬಾಳ್ವೆ ನಡೆಸಿದ್ದರು ಎಂಬ ಪೂರ್ವಭಾವನೆಯನ್ನು ನಿರಾಕರಿಸಿಲ್ಲ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಗಮನಿಸಿತು.


ಅರ್ಜಿದಾರರು, ತಮ್ಮನ್ನು ತಂದೆಯ ಆಸ್ತಿಯಿಂದ ವಂಚಿತರನ್ನಾಗಿ ಮಾಡಲಾಗಿದ್ದು, ಅಕ್ರಮ ಸಂತಾನ ಎಂಬ ಕಾರಣ ಹೇಳಿ ಆಸ್ತಿ ಹಕ್ಕು ನಿರಾಕರಿಸಲಾಗಿದೆ ಎಂದು ವಾದಿಸಿದ್ದರು. ಪೋಷಕರಿಗೆ ಮದುವೆ ಆಗದ ಕಾರಣ ಅರ್ಜಿದಾರರಿಗೆ ಹೆತ್ತವರ ಆಸ್ತಿಯಲ್ಲಿ ಹಕ್ಕಿಲ್ಲ ಎಂಬುದಾಗಿ ಕೇರಳ ಹೈಕೋರ್ಟ್ 2009ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. 

Ads on article

Advertise in articles 1

advertising articles 2

Advertise under the article