-->
Sec 376 Karnataka HC | ಸಂತ್ರಸ್ತೆ ರಾಜಿಯಾದರೆ ಅತ್ಯಾಚಾರ ಪ್ರಕರಣವನ್ನೂ ಕೊನೆಗೊಳಿಸಬಹುದು: ಕರ್ನಾಟಕ ಹೈಕೋರ್ಟ್‌

Sec 376 Karnataka HC | ಸಂತ್ರಸ್ತೆ ರಾಜಿಯಾದರೆ ಅತ್ಯಾಚಾರ ಪ್ರಕರಣವನ್ನೂ ಕೊನೆಗೊಳಿಸಬಹುದು: ಕರ್ನಾಟಕ ಹೈಕೋರ್ಟ್‌

ಸಂತ್ರಸ್ತೆ ರಾಜಿಯಾದರೆ ಅತ್ಯಾಚಾರ ಪ್ರಕರಣವನ್ನೂ ಕೊನೆಗೊಳಿಸಬಹುದು: ಕರ್ನಾಟಕ ಹೈಕೋರ್ಟ್‌

ಅತ್ಯಾಚಾರ ಪ್ರಕರಣವನ್ನು ರಾಜಿ ಮೂಲಕ ಮುಕ್ತಾಯಗೊಳಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ದೂರುದಾರರು ಮತ್ತು ಆರೋಪಿಗಳ ನಡುವೆ ರಾಜಿ ಏರ್ಪಟ್ಟರೆ ಪ್ರಕರಣ ರದ್ದುಗೊಳಿಸಬಹುದು ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


ಸಂತ್ರಸ್ತೆಯ ಒಪ್ಪಿಗೆ ಮೇರೆಗೆ, ಎರಡೂ ಪಕ್ಷಕಾರರು ಸಹಿ ಹಾಕಿದ ಜಂಟಿ ಜ್ಞಾಪನವನ್ನು ಪರಿಗಣಿಸಿದ ಹೈಕೋರ್ಟ್ ಮಹಿಳೆಯೊಬ್ಬರು ತಮ್ಮ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿತು.


ಪ್ರಕರಣ: ಸತೀಶ್ ಕೆ ಮತ್ತಿರರು Vs ಕರ್ನಾಟಕ

ಕರ್ನಾಟಕ ಹೈಕೋರ್ಟ್, CP 4172/2022 Dated 23-05-2022


ಸಂತ್ರಸ್ತೆ ದೂರುದಾರೆ ವಿವಾಹಿತರಾಗಿದ್ದು, ಪತಿಯ ಜೊತೆಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಆರೋಪಿಗಳು ದೂರುದಾರ ಕುಟುಂಬ ಸದಸ್ಯರೇ ಆಗಿದ್ದಾರೆ. ಆದ್ದರಿಂದ ಆರೋಪಿಗಳು ಮತ್ತು ದೂರುದಾರರು ಸಲ್ಲಿಸಿರುವ ಮೊಮೊವನ್ನು ಪರಿಗಣಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿತು.


ತಾವು ಸಲ್ಲಿಸಿದ ದೂರನ್ನು ಹಿಂಪಡೆಯಲು ದೂರುದಾರರು ಒಪ್ಪಿದ್ದಾರೆ ಎಂಬುದಾಗಿ ತಿಳಿಸಿ ಜಂಟಿ ಮೊಮೊ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿದ ಹೈಕೋರ್ಟ್, ಒಂದು ವೇಳೆ, ಪಕ್ಷಕಾರರು ರಾಜಿಯಾದರೆ ಅತ್ಯಾಚಾರ ಪ್ರಕರಣವನ್ನು ಮುಕ್ತಾಯಗೊಳಿಸಲು ನ್ಯಾಯಾಲಯ ಅಧಿಕಾರ ವ್ಯಾಪ್ತಿ ಹೊಂದಿದೆ. ಹಾಗಾಗಿ, ಈ ಪ್ರಕರಣವನ್ನು ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.


ಇದಕ್ಕೂ ಮೊದಲು, ಈ ಜಂಟಿ ಮೊಮೊಗೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಆರೋಪಿಗಳ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪವಿದೆ. ಆ ಕಾರಣ, ಪ್ರಕರಣವನ್ನು ರಾಜಿ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಬಾರದು ಎಂದು ಪೀಠವನ್ನು ಕೋರಿದರು.


ಆಗ, ರಾಜಿ ಮೂಲಕ ಅತ್ಯಾಚಾರ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು ಎಂಬುದಕ್ಕೆ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳ ಪ್ರತಿಯನ್ನು ಅರ್ಜಿದಾರರ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.


ಸತೀಶ್ ವಿರುದ್ಧ ಅತ್ಯಾಚಾರ ಹಾಗೂ ಉಳಿದ ಮೂವರು ಆರೋಪಿಗಳ ವಿರುದ್ಧ ಜೀವ ಬೆದರಿಕೆ, ಅವಮಾನ ಮತ್ತು ವಸೂಲಿ ಆರೋಪ ಮಾಡಿದ್ದ ಮಹಿಳೆಯೊಬ್ಬರು 2022ರ ಫೆಬ್ರವರಿ 16ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


Read Judgement

ಸತೀಶ್ ಕೆ ಮತ್ತಿರರು Vs ಕರ್ನಾಟಕ

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200