-->
Consumer Case- ಗ್ರಾಹಕ ನ್ಯಾಯಾಲಯದ ತೀರ್ಪು: 7 ರೂ. ಕ್ಯಾರಿ ಬ್ಯಾಗ್‌ ನೀಡಿದ ಪ್ರತಿಷ್ಠಿತ ಕಂಪೆನಿಗೆ 5000/- ದಂಡ

Consumer Case- ಗ್ರಾಹಕ ನ್ಯಾಯಾಲಯದ ತೀರ್ಪು: 7 ರೂ. ಕ್ಯಾರಿ ಬ್ಯಾಗ್‌ ನೀಡಿದ ಪ್ರತಿಷ್ಠಿತ ಕಂಪೆನಿಗೆ 5000/- ದಂಡ

ಗ್ರಾಹಕ ನ್ಯಾಯಾಲಯದ ತೀರ್ಪು: 7 ರೂ. ಕ್ಯಾರಿ ಬ್ಯಾಗ್‌ ನೀಡಿದ ಪ್ರತಿಷ್ಠಿತ ಕಂಪೆನಿಗೆ 5000/- ದಂಡ






ಗ್ರಾಹಕನಿಗೆ ಕ್ಯಾರಿಬ್ಯಾಗ್ ನೀಡಿ ಅದಕ್ಕೆ ಶುಲ್ಕ ವಿಧಿಸಿದ ತಪ್ಪಿಗೆ ಪ್ರತಿಷ್ಠಿತ ಕಂಪನಿಯೊಂದಕ್ಕೆ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ. 5000/- ದಂಡ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ, ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ ದೂರುದಾರರಿಗೆ 3000/- ದಾವಾ ಖರ್ಚು ನೀಡುವಂತೆ ಕಂಪೆನಿಗೆ ನಿರ್ದೇಶಿಸಿದೆ.



ದಾವಣಗೆರೆಯ ಶಾಮನೂರು ರಸ್ತೆಯಲ್ಲಿರುವ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರಿಟೇಲ್ ಲಿಮಿಟೆಡ್ ಕಂಪೆನಿಯ 'ಪ್ಯಾಂಟಲೂನ್ಸ್' ಮಳಿಗೆಯಲ್ಲಿ ಗ್ರಾಹಕರೊಬ್ಬರು ಎರಡು ಜೊತೆ ಶೂ ಹಾಗೂ ಬ್ಯಾಗ್ ಖರೀದಿಸಿದ್ದರು. ಆದರೆ ಆ ಗ್ರಾಹಕರ ಅನುಮತಿ ಇಲ್ಲದೇ ಮಳಿಗೆದಾರರು ಕ್ಯಾರಿಬ್ಯಾಗ್ ನೀಡಿದ್ದಲ್ಲದೆ, ಅದರ ಶುಲ್ಕ ಎಂದು ರೂ. 7 ಅನ್ನು ಬಿಲ್ ಜೊತೆಗೆ ಸೇರಿಸಿದ್ದರು. ಈ ಸಂಬಂಧ ಸ್ವತಃ ವಕೀಲರೂ ಆದ ಗ್ರಾಹಕರು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದರು.




ಸದ್ರಿ ಗ್ರಾಹಕರಿಗೆ ನೀಡಲಾಗಿದ್ದ ಕ್ಯಾರಿ ಬ್ಯಾಗ್ ಮೇಲೆ ಕಂಪನಿ ಹೆಸರು ಪ್ರಿಂಟ್ ಮಾಡಿದ್ದರಿಂದ ಬ್ಯಾಗ್‌ನ ಶುಲ್ಕ ವಾಪಸ್ ನೀಡುವಂತೆ ಗ್ರಾಹಕರು ಮನವಿ ಮಾಡಿದ್ದರು. ಆ ಮನವಿಗೆ ಮಳಿಗೆಯ ಅಧಿಕಾರಿಗಳು ಕಿವಿಗೊಡಲಿಲ್ಲ. ಬದಲಾಗಿ ಉಳಿದ ಗ್ರಾಹಕರ ಎದುರಿನಲ್ಲೇ ಅಪಹಾಸ್ಯ ಮಾಡಿದ್ದರು. ಹೀಗಾಗಿ ಗ್ರಾಹಕರು 2020ರ ಮೇ ತಿಂಗಳಿನಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.


ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ ಹಾಗೂ ಸದಸ್ಯ ಸಿ.ಎಸ್. ತ್ಯಾಗರಾಜನ್, ಕಂಪನಿ ಸೇವಾಲೋಪ ಎಸಗಿದೆ ಎಂದು ತೀರ್ಪು ನೀಡಿ, ಎದುರುದಾರರಾದ ಮುಂಬೈನ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರಿಟೇಲ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಂಪನಿಯ ದಾವಣಗೆರೆಯ ಮಳಿಗೆಯ ಪ್ರಧಾನ ವ್ಯವಸ್ಥಾಪಕ ಅವರು ಕ್ಯಾರಿಬ್ಯಾಗ್‌ಗೆ ವಿಧಿಸಿದ್ದ 7 ರೂ.ನ್ನು ವಾಪಸ್ ನೀಡಬೇಕು. ಜೊತೆಗೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡಿರುವುದಕ್ಕೆ ದಾವೆ ವೆಚ್ಚವಾಗಿ 3 ಸಾವಿರ ಹಾಗೂ ದಂಡನಾತ್ಮಕ ಹಾನಿಗಾಗಿ ರೂ.5 ಸಾವಿರವನ್ನು 30 ದಿನಗಳ ಒಳಗೆ ನೀಡಬೇಕು. ಸಕಾಲಕ್ಕೆ ಪಾವತಿಸದಿದ್ದರೆ ಶೇ. 6ರಷ್ಟು ಬಡ್ಡಿ ಸಹಿತ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ.



Ads on article

Advertise in articles 1

advertising articles 2

Advertise under the article