-->
ಚಾರ್ಜ್ ಶೀಟ್ ಹಾಕಲು ACB ನಿರ್ಲಕ್ಷ್ಯ: ಜಾಮೀನು ಪಡೆದ ಭ್ರಷ್ಟ ಆರೋಪಿ ಅಧಿಕಾರಿ, ACB ವಿರುದ್ಧ ಹರಿಹಾಯ್ದ ಹೈಕೋರ್ಟ್‌

ಚಾರ್ಜ್ ಶೀಟ್ ಹಾಕಲು ACB ನಿರ್ಲಕ್ಷ್ಯ: ಜಾಮೀನು ಪಡೆದ ಭ್ರಷ್ಟ ಆರೋಪಿ ಅಧಿಕಾರಿ, ACB ವಿರುದ್ಧ ಹರಿಹಾಯ್ದ ಹೈಕೋರ್ಟ್‌

ಚಾರ್ಜ್ ಶೀಟ್ ಹಾಕಲು ACB ನಿರ್ಲಕ್ಷ್ಯ: ಜಾಮೀನು ಪಡೆದ ಭ್ರಷ್ಟ ಆರೋಪಿ ಅಧಿಕಾರಿ, ACB ವಿರುದ್ಧ ಹರಿಹಾಯ್ದ ಹೈಕೋರ್ಟ್‌ದೇಶದಲ್ಲೇ ಸಂಚಲನ ಮೂಡಿಸಿದ ಬೆಂಗಳೂರು ಡಿಸಿ ಕಚೇರಿ ಭ್ರಷ್ಟಾಚಾರ ಪ್ರಕರಣದಲ್ಲಿ ACB ಆರೋಪ ಪಟ್ಟಿ ಸಲ್ಲಿಸದೆ ಆರೋಪಿಗೆ ಜಾಮೀನು ಸಿಗುವಂತೆ ಮಾಡಿದೆ. ಉಪ ತಹಶೀಲ್ದಾರ್ ಪಿ.ಎಸ್. ಮಹೇಶ್ ಬಂಧನ ಆಗಿ 60 ದಿನ ಕಳೆದಿದ್ದರೂ ಎಸಿಬಿ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಈ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಆರೋಪಿಗೆ ಡಿಫಾಲ್ಟ್ ಜಾಮೀನು ಮಂಜೂರು ಮಾಡಿದೆ.ಈ ಹಿನ್ನೆಲೆಯಲ್ಲಿ ಮಹೇಶ್ ಪರ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಯನ್ನು ಆರೋಪಿ ಪರ ವಕೀಲರು ಹಿಂದಕ್ಕೆ ಪಡೆದಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಚ್.ಪಿ. ಸಂದೇಶ್, ವಕೀಲರ ವಾದ ಆಲಿಸಿ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅನುಮತಿಸಿದರು.ಬೆಳಿಗ್ಗೆ ನಡೆದ ಕಲಾಪದಲ್ಲಿ ಎಸಿಬಿ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ ಸಂದೇಶ್, ಭ್ರಷ್ಟ ಅಧಿಕಾರಿಗಳಿಗೆ ಪರೋಕ್ಷ ಸಹಕಾರ ನೀಡುವ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡರು.

ಎಸಿಬಿ ರಚಿಸಿರುವ ಉದ್ದೇಶವೇನು..? ನೀವು ಮಾಡುತ್ತಿರುವುದೇನು...? ಎಂದು ನೇರವಾಗಿ ಪ್ರಶ್ನಿಸಿದ ಸಂದೇಶ್, ಭ್ರಷ್ಟಾಚಾರ ಮಾಡುವ ಅಧಿಕಾರಿಗಳಿಗೆ ಬೆಂಬಲ ನೀಡುವ ನಿಮಗೆ ನಾಚಿಕೆಯಾಗಬೇಕು ಎಂದು ಮಾತಿನಲ್ಲೇ ಚಾಟಿ ಬೀಸಿದರು.ಕಲಾಪ ಶುರುವಾಗುತ್ತಲೇ ಎಸಿಬಿ ವಕೀಲರನ್ನು ಹಿಗ್ಗಾಮುಗ್ಗಾ ಜಾಡಿಸಿದ ನ್ಯಾ. ಎಚ್.ಪಿ. ಸಂದೇಶ್, ACB ಪ್ರಾಮಾಣಿಕತೆ ಬಗ್ಗೆ ವಾದ ಮಾಡಿದ್ರಲ್ಲಾ...? ಚಾರ್ಜ್ ಶೀಟ್ ಸಲ್ಲಿಸದೇ ಪರೋಕ್ಷವಾಗಿ ಆರೋಪಿಗೆ ಏಕೆ ಬೆಂಬಲ ನೀಡಿದಿರಿ ? ನೀವೇಕೆ 60 ದಿನಗಳಾದರೂ ಆರೋಪ ಪಟ್ಟಿ ಸಲ್ಲಿಸಿಲ್ಲ? ಆರೋಪ ಪಟ್ಟಿ ಸಲ್ಲಿಸಲು ಕಾಲಮಿತಿ ಏನು?” ಎಂದು ಸಂದೇಶ್ ಗುಡುಗಿದರು.ಎಸಿಬಿ ವಕೀಲರು ಫಾರೆನ್ಸಿಕ್‌ ರಿಪೋರ್ಟ್‌ ಸಿಕ್ಕಿರಲಿಲ್ಲ ಎಂದು ನೆಪ ಹೇಳಿದಾಗ ಮತ್ತೆ ಕೆಂಡಾಮಂಡಲವಾದ ನ್ಯಾ. ಸಂದೇಶ್, ಮೊದಲಿಗೆ ಆರೋಪ ಪಟ್ಟಿ ಸಲ್ಲಿಸಿ, CrPC ಸೆಕ್ಷನ್‌ 173 (8) ಅರ್ಜಿ ಹಾಕಿ ಹೆಚ್ಚುವರಿ ದಾಖಲೆ ಹಾಕಬಹುತ್ತಿಲ್ಲ..? ಎಂದು ಪ್ರಶ್ನಿಸಿದರು. ಎಸಿಬಿಯ ಕ್ರಮ ಆರೋಪಿಯು ನ್ಯಾಯಾಲಯದ ವ್ಯಾಪ್ತಿಯಿಂದ ಪಾರಾಗಲು ಸಹಕರಿಸಿದ್ದಲ್ಲವೇ..? ಎಂದು ಕುಟುಕಿದರು.ಆಗ ವಕೀಲರು ಸುಪ್ರೀಂ ಕೋರ್ಟ್‌ ಆದೇಶದ ಕುರಿತು ಉಲ್ಲೇಖಿಸಿದರು. "ಮಾನ್ಯ ಸರ್ವೋಚ್ಚ ನ್ಯಾಯಾಲಯ ಆದೇಶ ನನ್ನ ಬಳಿ ಇದೆ. ಜಾಮೀನು ಮನವಿಯನ್ನು ವಿಲೇವಾರಿ ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಆದರೆ, ಈ ಪ್ರಕರಣದಲ್ಲಿ ನೀವೇಕೆ ಆರೋಪ ಪಟ್ಟಿ ಸಲ್ಲಿಸಿಲ್ಲ? ಇದರರ್ಥ ನೀವು ಆರೋಪಿ ಜೊತೆ ಕೈಜೋಡಿಸಿದ್ದೀರಿ ಅಲ್ಲವೇ? 60 ದಿನಗಳ ಒಳಗೆ ಆರೋಪ ಪಟ್ಟಿ ಹಾಕಬೇಕು ಎಂಬುದು ನಿಮಗೆ ಗೊತ್ತೇ..? ಆರೋಪಿ ಪರೋಕ್ಷವಾಗಿ ಬಚಾವಾಗಲು ಈ ಥರ ನೆರವು ನೀಡಿದ್ದೇ..? ಎಂದು ನ್ಯಾಯಮೂರ್ತಿಗಳು ಆಕ್ರೋಶದಿಂದ ನುಡಿದರು.60 ದಿನಗಳಾದರೂ ACB ತನಿಖಾಧಿಕಾರಿ ಏಕೆ ಆರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಬಗ್ಗೆ ವರದಿ ಸಲ್ಲಿಸಲು ಪೊಲೀಸ್‌ ಮಹಾ ನಿರ್ದೇಶಕರಿಗೆ ಆದೇಶ ನೀಡುತ್ತೇನೆ” ಎಂದು ಹೇಳಿತು. ಮತ್ತೆ ಕಲಾಪ ನಡೆದಾಗ, ವಕೀಲರು ಆರೋಪಿಗೆ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿರುವ ವಿಷಯ ನ್ಯಾಯಪೀಠದ ಮುಂದೆ ತಂದು, ಜಾಮೀನು ಅರ್ಜಿ ಹಿಂಪಡೆಯಲು ಅನುಮತಿ ಕೋರಿದರು. ಇದಕ್ಕೆ ನ್ಯಾಯಾಲಯ ಸಮ್ಮತಿ ನೀಡಿತು. 

Ads on article

Advertise in articles 1

advertising articles 2

Advertise under the article