-->
ಬೇಸಿಗೆಯಲ್ಲಿ ವಕೀಲರ ವಸ್ತ್ರ ಸಂಹಿತೆಗೆ ರಿಯಾಯಿತಿ: ವಕೀಲರ ಅರ್ಜಿಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು..?

ಬೇಸಿಗೆಯಲ್ಲಿ ವಕೀಲರ ವಸ್ತ್ರ ಸಂಹಿತೆಗೆ ರಿಯಾಯಿತಿ: ವಕೀಲರ ಅರ್ಜಿಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು..?

ಬೇಸಿಗೆಯಲ್ಲಿ ವಕೀಲರ ವಸ್ತ್ರ ಸಂಹಿತೆಗೆ ರಿಯಾಯಿತಿ: ವಕೀಲರ ಅರ್ಜಿಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು..? 

ವಿಪರೀತ ಸೆಖೆ ಅನುಭವಿಸುವ ಬೇಸಿಗೆ ಕಾಲದಲ್ಲಿ ವಕೀಲರ ವಸ್ತ್ರ ಸಂಹಿತೆಯಲ್ಲಿ ರಿಯಾಯಿತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಪ್ರಕರಣ: ಶೈಲೇಂದ್ರ ತ್ರಿಪಾಠಿ VS ಭಾರತೀಯ ವಕೀಲರ ಪರಿಷತ್ತು (IBC) ಮತ್ತಿರರು

ಸುಪ್ರೀಂ ಕೋರ್ಟ್‌, Dated 25/07/2022

ಅರ್ಜಿ ಸಲ್ಲಿಸುವ ಮೊದಲು ಅರ್ಜಿದಾರರು ಭಾರತೀಯ ವಕೀಲರ ಪರಿಷತ್ತನ್ನು ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಸೂಚನೆ ನೀಡಿತು. ಒಂದು ವೇಳೆ, IBC ಯಾವುದೇ ಸ್ಪಂದನೆ ಮಾಡದಿದ್ದರೆ, ಆಗ ಈ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಅದು ಹೇಳಿತು.

ಕರಿ ಕೋಟು, ನಿಲುವಂಗಿ ಇಲ್ಲವೇ ಫಾರ್ಮಲ್ ಗೌನ್‌ಗಳು ದೇಶದ ಉತ್ತರ ಮತ್ತು ಕರಾವಳಿ ಭಾಗಗಳಲ್ಲಿ ಬೇಸಿಗೆ ಹವಾಮಾನಕ್ಕೆ ಹೊಂದಿಕೆಯಾವುದಿಲ್ಲ. ಜೊತೆಗೆ ಇದು ವಸಾಹತುಶಾಹಿ ಪರಂಪರೆ ಎಂದು ತ್ರಿಪಾಠಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.

ಅರ್ಜಿಯನ್ನು ಪರಿಶೀಲಿಸುವ ಮುನ್ನ, ಕೊಲ್ಕತಾ ಮತ್ತು ಮದ್ರಾಸ್‌ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದ ನ್ಯಾ. ಇಂದಿರಾ ಬ್ಯಾನರ್ಜಿ, ಅರ್ಜಿಯಲ್ಲಿ ಪ್ರಸ್ತಾಪಿಸಿದ ವಿಷಯದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು. ಆದರೂ, ಸಂವಿಧಾನದ 32ನೇ ವಿಧಿ ಅಡಿ ಸದ್ರಿ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

Order Copy:

ಶೈಲೇಂದ್ರ ತ್ರಿಪಾಠಿ VS ಭಾರತೀಯ ವಕೀಲರ ಪರಿಷತ್ತು (IBC) ಮತ್ತಿರರುAds on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

Advertise under the article

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

Pay Rs 200