-->
ಆನ್‌ಲೈನ್‌ನಲ್ಲಿ ನಿಂದನೆಯೂ ಎಸ್‌ಸಿ ಎಸ್‌ಟಿ ಕಾಯ್ದೆ ವ್ಯಾಪ್ತಿಗೆ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಆನ್‌ಲೈನ್‌ನಲ್ಲಿ ನಿಂದನೆಯೂ ಎಸ್‌ಸಿ ಎಸ್‌ಟಿ ಕಾಯ್ದೆ ವ್ಯಾಪ್ತಿಗೆ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಆನ್‌ಲೈನ್‌ನಲ್ಲಿ ನಿಂದನೆಯೂ ಎಸ್‌ಸಿ ಎಸ್‌ಟಿ ಕಾಯ್ದೆ ವ್ಯಾಪ್ತಿಗೆ: ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಅಂತರ್ಜಾಲದ ಮೂಲಕ ಎಸ್‌ಸಿ ಅಥವಾ ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಆನ್‌ಲೈನ್‌ನಲ್ಲಿ ಮಾಡಿದ ನಿಂದನೆಯೂ ಎಸ್‌ಸಿ ಎಸ್‌ಟಿ ಕಾಯ್ದೆ ವ್ಯಾಪ್ತಿಯಡಿ ಬರುತ್ತದೆ ಎಂದು ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ಪ್ರಕರಣ: ಸೂರಜ್ ವಿ. ಸುಕುಮಾರ್ Vs ಕೇರಳ ಸರ್ಕಾರ

ಕೇರಳ ಹೈಕೋರ್ಟ್, Bail Appl 4966/2022 Dated 26-07-2022ಸಂತ್ರಸ್ತ ಮಹಿಳೆಯೊಬ್ಬರ ಲೈಂಗಿಕ ದೌರ್ಜನ್ಯದ ದೂರಿನ ಮೇಲೆ "True T.V." ಎಂಬ ಆನ್‌ಲೈನ್ ಸುದ್ದಿ ವಾಹಿನಿಯ ಪತ್ರಕರ್ತನ ವಿರುದ್ಧದ ಪ್ರಕರಣದಲ್ಲಿ ಸಲ್ಲಿಸಲಾದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.


ಪ್ರಸ್ತುತ ತಂತ್ರಜ್ಞಾನದ ಯುಗದಲ್ಲಿ, ಆನ್‌ಲೈನ್ ಉಪಸ್ಥಿತಿ ಅಥವಾ ಡಿಜಿಟಲ್ ಉಪಸ್ಥಿತಿಯನ್ನು ವ್ಯಕ್ತಿಯ ಉಪಸ್ಥಿತಿ ಎಂದೇ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.


ಅರ್ಜಿದಾರರು "True T.V." ಎಂಬ ಆನ್‌ಲೈನ್ ಸುದ್ದಿ ವಾಹಿನಿ (ಯೂಟ್ಯೂಬ್) ಮುಖ್ಯಸ್ಥರು. ಕೇರಳದ ಸಚಿವೆಯೊಬ್ಬರ ಮಾರ್ಫ್ ಮಾಡಿದ ವೀಡಿಯೋ ರಚಿಸಲು ಸಂತ್ರಸ್ತೆಯ ನಗ್ನತೆಯನ್ನು ವೀಡಿಯೋ ಮಾಡಲು ಅರ್ಜಿದಾರರು ಒತ್ತಾಸಿದ್ದರು. ಈ ಬಗ್ಗೆ ದೂರು ದಾಖಲಾಗಿ ಸ್ನೇಹಿತ ಆರೋಪಿಯ ಬಂಧನವಾಗುತ್ತಿದ್ದಂತೆ, ಸಂತ್ರಸ್ತೆಯ ಪತಿ ಮತ್ತು ಮಾವನನ್ನು ಸಂದರ್ಶನ ಮಾಡಿದರು.ಈ ಸಂದರ್ಶನ ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ನಲ್ಲಿ ಪ್ರಸಾರವಾಗಿತ್ತು. ಈ ಸಂದರ್ಶನ ಪರಿಶಿಷ್ಟ ಪಂಗಡದ ವಿರುದ್ಧ ಅವಮಾನ, ದ್ವೇಷ ಹಾಗೂ ಕೆಟ್ಟ ಶಬ್ದಗಳನ್ನು ಬಳಸಲಾಗಿತ್ತು. ಮಾತ್ರವಲ್ಲದೆ ತಮ್ಮ ಬಗ್ಗೆ ನಿಂದನೆ ಮತ್ತು ಅಪಹಾಸ್ಯವನ್ನು ಮಾಡಲಾಗಿತ್ತು ಎಂಬುದಾಗಿ ಸಂತ್ರಸ್ತೆ ದೂರು ನೀಡಿದ್ದರು.ಆದರೆ, ಸಂತ್ರಸ್ತೆ ಘಟನಾ ಸ್ಥಳದಲ್ಲಿ ಇರಲಿಲ್ಲ ಎಂಬುದಾಗಿ ಅರ್ಜಿದಾರರು ವಾದ ಮಂಡಿಸಿದ್ದರು.ಈ ಬಗ್ಗೆ ವಿವರಣೆ ನೀಡಿದ ನ್ಯಾಯಪೀಠ, "ಇಂಟರ್‌ನೆಟ್‌ ಮೂಲಕ ವ್ಯಕ್ತಿಗಳ ಡಿಜಿಟಲ್ ಉಪಸ್ಥಿತಿಯು ಸೆಕ್ಷನ್‌ 3(1)(ಆರ್‌) ಮತ್ತು 3(1)(ಎಸ್‌) ಅಡಿ "Public view" ಎಂಬ ಪದದ ಪರಿಕಲ್ಪನೆ, ಉದ್ದೇಶ ಮತ್ತು ಅರ್ಥಕ್ಕೆ ಬದಲಾವಣೆ ತಂದಿದೆ. ಒಂದು ಕ್ಲಿಕ್‌ನಲ್ಲಿ ಅಪ್‌ಲೋಡ್‌ ಆದ ವಿಷಯವು ಭೌಗೋಳಿಕವಾಗಿ ಎಲ್ಲಿಂದಲೂ ವೀಕ್ಷಿಸಬಹುದು ಅಥವಾ ಕೇಳಬಹುದು. ಅದನ್ನು ಪ್ರಸಾರವಾದ ಸಮಯದಲ್ಲಿ ಮಾತ್ರವಲ್ಲ, ಆ ಬಳಿಕವೂ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿರುತ್ತದೆ. ಪ್ರತಿ ಬಾರಿಯೂ ಆ ವಿಷಯವನ್ನು ಕ್ಲಿಕ್ ಮಾಡಿದಾಗ ಆಕೆ ಅಥವಾ ಆತ ಅದನ್ನು ವೀಕ್ಷಿಸಿದಾಗ ನೇರವಾಗಿ ಅಥವಾ ರಚನಾತ್ಮಕವಾಗಿ ಆ ಸ್ಥಳದಲ್ಲಿ ಹಾಜರಿದ್ದರು ಎಂದು ಅರ್ಥೈಸಬಹುದು ಎಂದು ನ್ಯಾಯಪೀಠ ಹೇಳಿದೆ.ಅದೇ ರೀತಿ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆದ ಸಂದರ್ಶನದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಅವಮಾನ ಮಾಡಿದ ಆರೋಪ ಎದುರಿಸುತ್ತಿದ್ದ ಯೂಟ್ಯೂಬರ್ ಪತ್ರಕರ್ತನಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿತು. 


Click here for Judgement Copy:

ಪ್ರಕರಣ: ಸೂರಜ್ ವಿ. ಸುಕುಮಾರ್ Vs ಕೇರಳ ಸರ್ಕಾರ


Ads on article

Advertise in articles 1

advertising articles 2

Advertise under the article