-->
ಬ್ಯಾಂಕಿನಿಂದ 27 ಲಕ್ಷ ರೂ. ಎಗರಿಸಿದ ನೌಕರನ ಶಿಕ್ಷೆ ಸಾಬೀತು: ಆರೋಪಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಮಂಗಳೂರು ನ್ಯಾಯಾಲಯ

ಬ್ಯಾಂಕಿನಿಂದ 27 ಲಕ್ಷ ರೂ. ಎಗರಿಸಿದ ನೌಕರನ ಶಿಕ್ಷೆ ಸಾಬೀತು: ಆರೋಪಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಮಂಗಳೂರು ನ್ಯಾಯಾಲಯ

ಬ್ಯಾಂಕಿನಿಂದ 27 ಲಕ್ಷ ರೂ. ಎಗರಿಸಿ ನೌಕರನ ಶಿಕ್ಷೆ ಸಾಬೀತು: ಆರೋಪಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಮಂಗಳೂರು ನ್ಯಾಯಾಲಯ





2017ರ ಡಿಸೆಂಬರ್ ತಿಂಗಳ 29ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಇರುವ (ಆಗಿನ) ವಿಜಯ ಬ್ಯಾಂಕ್‌ನಲ್ಲಿ ಕ್ಯಾಶಿಯರ್ ಅಗಿದ್ದ ವಿಕಾಸ್ ಶೆಟ್ಟಿ ರೂ. 27,29,875/- ಎಗರಿಸಿದ್ದರು. ಆ ಶಾಖೆಯ ಮ್ಯಾನೇಜರ್ 2017ರ ಡಿಸೆಂಬರ್ 28ರಿಂದ 30ರ ವರೆಗೆ ರಜೆಯಲ್ಲಿದ್ದರು.

ಪ್ರಭಾರ ಮ್ಯಾನೇಜರ್ ಅವರ ಟ್ಯಾಲಿ ಸಾಫ್ಟ್‌ವೇರ್‌ನಲ್ಲಿ ಅಂತಿಮ ನಗದು ಪರೀಕ್ಷಿಸುವಾಗ ಈ ಮೊತ್ತ ಕಡಿಮೆ ಇದ್ದದ್ದು ಗೊತ್ತಾಗಿತ್ತು.



ಆರೋಪಿ ವಿಕಾಸ್ ಶೆಟ್ಟಿಯವರನ್ನು ವಿಚಾರಿಸಿದಾಗ ಅವರು ತಾವು ಹಣ ತೆಗೆದಿರುವುದನ್ನು ಒಪ್ಪಿಕೊಂಡಿದ್ದರು. ಈ ಬಗ್ಗೆ ಬ್ಯಾಂಕಿನ ಪ್ರಾದೇಶಿಕ ಕಚೇರಿಗೆ ಮಾಹಿತಿ ನೀಡಿದ್ದು, ಶಾಖೆಗೆ ಆಗಮಿಸಿದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆರೋಪಿ ವಿಕಾಸ್ ಶೆಟ್ಟಿ ಲಿಖಿತವಾಗಿ ಹಣ ತೆಗೆದಿರುವುದನ್ನು ಒಪ್ಪಿಕೊಂಡಿದ್ದು, ಆ ಹಣವನ್ನು ಮರುದಿನವೇ ಬ್ಯಾಂಕಿಗೆ ಪಾವತಿಸಿದ್ದರು.



ಸಾರ್ವಜನಿಕ ಹಣ ದುರುಪಯೋಗ, ನಂಬಿಕೆ ದ್ರೋಹ ನಡೆಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಮಂಗಳೂರು ಎಕಾನಮಿಕ್ & ನಾರ್ಕೋಟಿಕ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆದು ಇದೀಗ 2ನೇ ಸಿಜೆಎಂ ನ್ಯಾಯಾಲಯದಲ್ಲಿ ಆರೋಪಿಯ ಆರೋಪ ಸಾಬೀತಾಗಿತ್ತು.



ವಾದ ಪ್ರತಿವಾದ ಆಲಿಸಿದ ಮಾನ್ಯ ನ್ಯಾಯಾಧೀಶರಾದ ಮಧುಕರ ಪಿ. ಭಾಗವತ್ ಆರೋಪಿಗೆ ಶಿಕ್ಷೆಯನ್ನು ಪ್ರಕಟಿಸಿದರು.



ಐಪಿಸಿ ಕಲಂ 406 ರಡಿಯ ಅಪರಾಧಕ್ಕಾಗಿ 1 ವರ್ಷ ಜೈಲು ಶಿಕ್ಷೆ ಮತ್ತು ರೂ 5,000/- ದಂಡ, ದಂಡವನ್ನು ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾಮಾನ್ಯ ಸೆರೆಮನೆ ವಾಸ, ಮತ್ತು ಐಪಿಸಿ ಕಲಂ: 409 ರಡಿಯ ಅಪರಾಧಕ್ಕಾಗಿ 3 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ರೂ 5000/- ದಂಡ. ಆ ದಂಡವನ್ನು ಪಾವತಿಸಲು ತಪ್ಪಿದಲ್ಲಿ 1 ತಿಂಗಳ ಸಾಮಾನ್ಯ ಸೆರೆಮನೆ ವಾಸದ ಶಿಕ್ಷೆ ಪ್ರಕಟಿಸಿದೆ.


ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕ ಮೋಹನ್ ಕುಮಾರ್.ಬಿ ವಾದ ಮಂಡಿಸಿದ್ದರು.

Ads on article

Advertise in articles 1

advertising articles 2

Advertise under the article