-->
ಜನನ, ಮರಣ ನೋಂದಣಿ: ಭ್ರಷ್ಟತೆಗೆ ಕುಮ್ಮಕ್ಕು ನೀಡುವ ಅಧಿಸೂಚನೆ; ವಕೀಲರ ರಾಜ್ಯವ್ಯಾಪಿ ಪ್ರತಿಭಟನೆ

ಜನನ, ಮರಣ ನೋಂದಣಿ: ಭ್ರಷ್ಟತೆಗೆ ಕುಮ್ಮಕ್ಕು ನೀಡುವ ಅಧಿಸೂಚನೆ; ವಕೀಲರ ರಾಜ್ಯವ್ಯಾಪಿ ಪ್ರತಿಭಟನೆ

ಜನನ, ಮರಣ ನೋಂದಣಿ: ಭ್ರಷ್ಟತೆಗೆ ಕುಮ್ಮಕ್ಕು ನೀಡುವ ಅಧಿಸೂಚನೆ; ವಕೀಲರ ರಾಜ್ಯವ್ಯಾಪಿ ಪ್ರತಿಭಟನೆ





ರಾಜ್ಯದಲ್ಲಿ ಜನನ ಹಾಗೂ ಮರಣ ನೋಂದಣಿ ಕುರಿತ ಪ್ರಕರಣಗಳನ್ನು ಜೆಎಂಎಫ್‌ಸಿ ನ್ಯಾಯಾಲಯದಿಂದ ಉಪವಿಭಾಗಾಧಿಕಾರಿ ಕೋರ್ಟ್‌ಗೆ ವರ್ಗಾಯಿಸುವ ರಾಜ್ಯ ಸರ್ಕಾರದ ವಿವಾದಾತ್ಮಕ ಅಧಿಸೂಚನೆಗೆ ರಾಜ್ಯವ್ಯಾಪಿ ಪ್ರತಿಭಟನೆಗಳು ಮುಂದುವರಿದಿದೆ.


ಧಾರವಾಡ

ಜನನ ಮರಣ ನೋಂದಣಿ ತಿದ್ದುಪಡಿ ನಿಯಮ 9 ಬದಲಾವಣೆ ಮಾಡಿರುವ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಧಾರವಾಡ ವಕೀಲರ ಸಂಘ ಆಗ್ರಹಿಸಿ ಪ್ರತಿಭಟನೆ ನಡೆಸಿತು.


ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಒತ್ತಾಯ ಮಾಡಲಾಯಿತು.


ಸಂಘದ ಪದಾಧಿಕಾರಿಗಳಾದ ಸಿ.ಎಸ್. ಪೊಲೀಸಪಾಟೀಲ, ಎನ್.ಆರ್. ಮಟ್ಟಿ, ಅಶೋಕ ದೊಡ್ಡಿಮನಿ, ಘೋಡ್ಸ್‌ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.



ಚಿತ್ರದುರ್ಗ

ಚಳ್ಳಕರೆ ವಕೀಲರ ಸಂಘ ತನ್ನ ಸರ್ವ ಸದಸ್ಯರ ಸಭೆಯನ್ನು ಕರೆದಿದ್ದು, ಜನನ ಮರಣ ನೋಂದಣಿ ತಿದ್ದುಪಡಿ ಅಧಿಸೂಚನೆಯ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.


ಈ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷರಾಧ ಜಿ. ಎಂ. ಆನಂದಪ್ಪ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article