ಕೋರ್ಟ್ ಕಲಾಪದಲ್ಲಿ ಕಾಲು ಮೇಲೆ ಕಾಲು ಹಾಕಿ ಕೂರಬಹುದೇ...?: ಹೈಕೋರ್ಟ್ ಮಾಹಿತಿ ಅಧಿಕಾರಿ ನೀಡಿದ ಉತ್ತರ ಇದು...!
ಕೋರ್ಟ್ ಕಲಾಪದಲ್ಲಿ ಕಾಲು ಮೇಲೆ ಕಾಲು ಹಾಕಿ ಕೂರಬಹುದೇ...?: ಹೈಕೋರ್ಟ್ ಮಾಹಿತಿ ಅಧಿಕಾರಿ ನೀಡಿದ ಉತ್ತರ ಇದು...!
ಕೋರ್ಟ್ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಪಾರ ಗೌರವ ಇರುತ್ತದೆ. ಈ ಮಹೋನ್ನತ ನ್ಯಾಯತೀರ್ಮಾನದ ಸಂದರ್ಭದಲ್ಲಿ ನ್ಯಾಯಾಧೀಶರ ಎದುರು ಜನರು ಕಾಲ ಮೇಲೆ ಕಾಲು ಹಾಕಿ ಕೂರಬಹುದೇ ..? ನಾಗರಿಕರು ಸಾಮಾನ್ಯವಾಗಿ ಹಾಗೆ ಕೂರುವುದಿಲ್ಲ.
ಆದರೆ, ಕೋರ್ಟ್ ಕಲಾಪದ ವೇಳೆ, ನಾಗರಿಕರು ತಮ್ಮ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದನ್ನು ನಿರ್ಬಂಧಿಸಿರುವ ಯಾವುದೇ ನಿಯಮಗಳು ಇಲ್ಲ... ಹಾಗೆಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ನೀಡಿದೆ.
ಕೋರ್ಟ್ ಕಲಾಪದ ಸಂದರ್ಭದಲ್ಲಿ ವಕೀಲರು ಯಾ ನಾಗರಿಕರು ತಮ್ಮ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದಕ್ಕೆ ನಿರ್ಬಂಧ ಇದೆಯೇ..? ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಹೊರಡಿಸಿರುವ ಆದೇಶ, ತೀರ್ಪು, ಮಾರ್ಗಸೂಚಿ ಅಧಿಸೂಚನೆ ಅಥವಾ ನಿರ್ದೇಶನ ನೀಡಿರುವುದಕ್ಕೆ ಸಂಬಂಧಿಸಿದ ಆದೇಶ ನೀಡುವಂತೆ ವ್ಯಕ್ತಿಯೊಬ್ಬರು ಮಾಹಿತಿ ಹಕ್ಕು ಕಾಯಿದೆ ಅಡಿ ಮಾಹಿತಿ ಕೋರಿದ್ದರು.
ಇದಕ್ಕೆ ಉತ್ತರ ನೀಡಿರುವ ಹೈಕೋರ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಜಂಟಿ ರಿಜಿಸ್ಟ್ರಾರ್ ಈ ಮೇಲಿನಂತೆ ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.
ಅರ್ಜಿದಾರರು ಕೋರಿದ ವಿಷಯಕ್ಕೆ ಸಂಬಂಧಿಸಿದಂತೆ, ಕೋರ್ಟ್ ಕಲಾಪದ ವೇಳೆ, ಕಾಲ ಮೇಲೆ ಕಾಲು ಹಾಕಿ ಕೂರುವುದನ್ನು ನಿರ್ಬಂಧಿಸಿ ಯಾವುದೇ ಅಧಿಸೂಚನೆ, ಆದೇಶ, ತೀರ್ಪು, ಮಾರ್ಗಸೂಚಿ ಅಥವಾ ನಿರ್ದೇಶನಗಳನ್ನು ಕರ್ನಾಟಕ ಹೈಕೋರ್ಟ್‌ನಿಂದ, ಧಾರವಾಡ ಮತ್ತು ಕಲಬುರ್ಗಿ ಪೀಠಗಳಿಂದ ಸ್ವೀಕರಿಸಿಲ್ಲ ಎಂದು ಈ ಮಾಹಿತಿಯಲ್ಲಿ ಹೇಳಲಾಗಿದೆ.
2022ರ ಮೇ 27ರಂದು ಮಾಹಿತಿ ಕೋರಿ ಬರೆದಿದ್ದ ಪತ್ರವು ಮೇ 30ಕ್ಕೆ ಹೈಕೋರ್ಟ್‌ನಲ್ಲಿ ಸ್ವೀಕೃತವಾಗಿತ್ತು. ಹೈಕೋರ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿಯವರು ಇದಕ್ಕೆ ಜೂನ್ 9ರಂದು ಲಿಖಿತ ಉತ್ತರ ನೀಡಿದ್ದಾರೆ.