-->
ಕಾನೂನು ಮಾಹಿತಿ: ಸಾರ್ವಜನಿಕ ದಾಖಲೆ ಪಡೆಯುವ ಕ್ರಮ... ಭಾರತ ಸಾಕ್ಷ್ಯ ಅಧಿನಿಯಮ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಮಹತ್ವ

ಕಾನೂನು ಮಾಹಿತಿ: ಸಾರ್ವಜನಿಕ ದಾಖಲೆ ಪಡೆಯುವ ಕ್ರಮ... ಭಾರತ ಸಾಕ್ಷ್ಯ ಅಧಿನಿಯಮ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಮಹತ್ವ

ಕಾನೂನು ಮಾಹಿತಿ: ಸಾರ್ವಜನಿಕ ದಾಖಲೆ ಪಡೆಯುವ ಕ್ರಮ... ಭಾರತ ಸಾಕ್ಷ್ಯ ಅಧಿನಿಯಮ ಮತ್ತು ಮಾಹಿತಿ ಹಕ್ಕು ಕಾಯ್ದೆಯ ಮಹತ್ವ





ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗುವುದಕ್ಕೆ ಮುಂಚಿತವಾಗಿ ಭಾರತೀಯ ಸಾಕ್ಷ್ಯ ಅಧಿನಿಯಮ (Indian Evidence Act 1872) ಕಲಂ 76ರ ಪ್ರಕಾರ ಎಲ್ಲಾ ಕಡತಗಳ ಪರಿವೀಕ್ಷಣೆಗೆ ಅವಕಾಶ ಇತ್ತು. ಅಗತ್ಯವಿದ್ದರೆ, ಸೂಕ್ತ ಶುಲ್ಕ ಪಾವತಿಸಿ ಆ ಕಡತಗಳ ದೃಢೀಕೃತ ಪ್ರತಿಗಳನ್ನು ಪಡೆಯಲು ಅವಕಾಶ ಇತ್ತು.



ಆದರೆ, ಇದಕ್ಕೆ ಇದ್ದ ಒಂದು ಷರತ್ತು ಏನೆಂದರೆ, ಆ ಕಡತಗಳು ಪರಿವೀಕ್ಷಣೆ ನಡೆಸುವ ಯಾ ದೃಢೀಕೃತ ನಕಲು ಕೋರುವ ವ್ಯಕ್ತಿಗೆ ಸಂಬಂಧಿಸಿದ್ದಾಗಿರಬೇಕಾಗಿತ್ತು.



ಇದರ ಜೊತೆಗೆ, ಆ ಮಾಹಿತಿ ಸರ್ಕಾರಿ ರಹಸ್ಯ ಅಧಿನಿಯಮ (Official Secrets Act 193) ಕಾಯ್ದೆಗೆ ವಿರುದ್ಧವಾಗಿರಬಾರದಾಗಿತ್ತು. ಆದರೆ, ಸರ್ಕಾರಿ ರಹಸ್ಯ ಅಧಿನಿಯಮ (Official Secrets Act 193) ಕಾಯ್ದೆಯ ಹೊರತಾಗಿಯೂ 2005ರ ಮಾಹಿತಿ ಹಕ್ಕು ಕಾಯ್ದೆ ಜಾರಿಯಾದ ಬಳಿಕ ದೇಶದ ಎಲ್ಲ ನಾಗರಿಕರು ಕಲಂ 8(1), 9 ಹೊರತುಪಡಿಸಿ ಸಾರ್ವಜನಿಕ ಪ್ರಾಧಿಕಾರಗಳಲ್ಲಿ ಇರುವ ಯಾವುದೇ ಕಡತಗಳನ್ನು ಪರಿವೀಕ್ಷಿಸಬಹುದಾಗಿದೆ. ಹಾಗೂ ಸೂಕ್ತ ಶುಲ್ಕ ಪಾವತಿಸಿ ಅದರ ದೃಢೀಕೃತ ನಕಲು ಯಾ ಮಾಹಿತಿಯನ್ನು ಪಡೆಯಬಹುದಾಗಿದೆ.



ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರಲು ಅಧಿಕಾರಿಗಳು ವಿಳಂಬ ರಹಿತವಾಗಿ ಹಾಗೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ.



ಭಾರತದಲ್ಲಿ ಮಾಹಿತಿ ಹಕ್ಕು ಕಾಯ್ದೆ 2005ರಿಂದ ಜಾರಿಯಲ್ಲಿ ಇದೆ. ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮವಾಗಿ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಅನೇಕ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.



ಲಭ್ಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಪ್ರತಿ ವರ್ಷ ಸುಮಾರು 90 ಲಕ್ಷಕ್ಕೂ ಹೆಚ್ಚಿನ ಅರ್ಜಿದಾರರಿಗೆ ಮಾಹಿತಿಯು ಅಧಿಕಾರಿಗಳ ಮಟ್ಟದಲ್ಲೇ ಸಿಗುತ್ತಿದೆ.



ಕೆಲವು ಇತ್ಯರ್ಥವಾಗದ ಅರ್ಜಿಗಳಿಗೆ ಮಾಹಿತಿಯನ್ನು ಕೊಡಿಸುವ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗಗಳ ಹೆಗಲ ಮೇಲಿದೆ.



ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ ವಿಧಿಸುವುದು ಮತ್ತು ಶಿಸ್ತು ಕ್ರಮ ಜರುಗಿಸುವುದರ ಮೂಲಕ ಈ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ನಿಗಾ ವಹಿಸುತ್ತಿವೆ.



ಮಾಹಿತಿ: ಶಶಿಕಮಾರ್, ಸಚಿವಾಲಯ

Ads on article

Advertise in articles 1

advertising articles 2

Advertise under the article