-->
NI Act Sec 138 - ಡಿಮ್ಯಾಂಡ್‌ ನೋಟೀಸ್ ಸ್ವೀಕರಿಸಿದ 15 ದಿನ ಮುನ್ನವೇ ಚೆಕ್ ಬೌನ್ಸ್‌ ಕೇಸು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

NI Act Sec 138 - ಡಿಮ್ಯಾಂಡ್‌ ನೋಟೀಸ್ ಸ್ವೀಕರಿಸಿದ 15 ದಿನ ಮುನ್ನವೇ ಚೆಕ್ ಬೌನ್ಸ್‌ ಕೇಸು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಡಿಮ್ಯಾಂಡ್‌ ನೋಟೀಸ್ ಸ್ವೀಕರಿಸಿದ 15 ದಿನ ಮುನ್ನವೇ ಚೆಕ್ ಬೌನ್ಸ್‌ ಕೇಸು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಮೂಲಕ ಆರೋಪಿಗೆ ಕಳುಹಿಸುವ ಡಿಮ್ಯಾಂಡ್ ನೋಟೀಸ್ ಸ್ವೀಕರಿಸಿದ 15 ದಿನ ಮುನ್ನವೇ ಚೆಕ್ ಬೌನ್ಸ್ ಕೇಸು ಹಾಕಿದರೆ ಅದನ್ನು ನ್ಯಾಯಾಲಯ ನಿರ್ವಹಿಸಲಾಗದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ನ್ಯಾ. ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟಿನ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. 


ಪ್ರಕರಣ: Gajanand Burange Vs Laxmi Chand Goyal

ಸುಪ್ರೀಂ ಕೋರ್ಟ್ CrA 1229 of 2022, Dated- 12 August 2022



ಸದ್ರಿ ಪ್ರಕರಣದಲ್ಲಿ ಆರೋಪಿಯು 2005ರ ನವೆಂಬರ್‌ 8ರಂದು ತನ್ನ ಚೆಕ್ ಅಮಾನ್ಯಗೊಂಡ ಬಗ್ಗೆ ಡಿಮ್ಯಾಂಡ್ ನೋಟೀಸ್ ಸ್ವೀಕರಿಸಿದ್ದರು. ಈ ನೋಟೀಸ್‌ ತಲುಪಿದ 15 ದಿನದ ಮೊದಲೇ ದೂರುದಾರರು ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ದೂರನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರನ್ನು ದಾಖಲಿಸಿದ ದಿನ 22-11-2005 ಆಗಿತ್ತು.



ಈ ದೂರನ್ನು ವಿಚಾರಣೆಗೆ ಎತ್ತಿಕೊಂಡ ವಿಚಾರಣಾ ನ್ಯಾಯಾಲಯ 01-0-2011ರಂದು ಆರೋಪಿಯನ್ನು ಖುಲಾಸೆಗೊಳಿಸಿ ದೂರನ್ನು ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ದೂರುದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ಛತ್ತೀಸ್‌ಗಢ ಹೈಕೋರ್ಟ್, ದೂರುದಾರರ ಅರ್ಜಿಯನ್ನು ಪುರಸ್ಕರಿಸಿ ಆರೋಪಿಗೆ ಶಿಕ್ಷೆಯನ್ನು ಪ್ರಕಟಿಸಿತ್ತು. ಜೊತೆಗೆ ಮೂರು ಲಕ್ಷ ರೂ.ಗಳ ದಂಡವನ್ನೂ ವಿಧಿಸಿತ್ತು.


ಈ ಬಗ್ಗೆ ಆರೋಪಿಯು ಸುಪ್ರೀಂ ಕೋರ್ಟಿನ ಕದ ತಟ್ಟಿದರು.



ದೂರುದಾರರು ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ಲೀಗಲ್ ನೋಟೀಸ್ ಆರೋಪಿಗೆ ತಲುಪಿದ 15 ದಿನಗಳ ಮುಂಚೆಯೇ ಮಾನ್ಯ ನ್ಯಾಯಾಲಯದಲ್ಲಿ ಕೇಸು ದಾಖಲಿಸಬಹುದೇ ಎಂಬ ಗಂಭೀರ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಇತ್ಯರ್ಥ ಮಾಡಿತು.



ನೆಗೋಷಿಯೇಬಲ್ ಇನ್ಸ್‌ಟ್ರುಮೆಂಟ್ ಆಕ್ಟ್‌ ಸೆಕ್ಷನ್ 138 (ಸಿ) ಪ್ರಕಾರ, ನೋಟೀಸ್‌ನಲ್ಲಿ ನೀಡಲಾದ ಅವಧಿಗೆ ಮುನ್ನವೇ ದೂರು ದಾಖಲಿಸಲು ದೂರುದಾರರಿಗೆ ಅನುಮತಿ ನೀಡಬಹುದೇ...? ಹಾಗೂ ನ್ಯಾಯಾಧೀಶರು ಈ ರೀತಿ ಅವಧಿಗೆ ಮುನ್ನ ಸಲ್ಲಿಸಲಾದ ದೂರುಗಳ ಕಾಗ್ನಿಜೆನ್ಸ್‌ ತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆ ಉದ್ಭವಿಸಿತು.



ಸುಪ್ರೀಂ ಕೋರ್ಟ್‌ Yogendra Pratap Singh v Savitri Pandey (2014) 10 SCC 713 ಪ್ರಕರಣದಲ್ಲಿ ಅಪೆಕ್ಸ್ ಕೋರ್ಟ್‌ನ ತ್ರಿ-ಸದಸ್ಯ ಪೀಠ ನೀಡಿದ ಮಹತ್ವದ ತೀರ್ಪನ್ನು ಗಮನಿಸಿತ್ತು. ಈ ಪ್ರಕರಣದಲ್ಲಿ ನ್ಯಾಯಪೀಠ ಸ್ಪಷ್ಟವಾಗಿ ಹೇಳಿರುವಂತೆಯೇ ಅವಧಿಗೆ ಮುನ್ನ ಹಾಕಲಾದ ದೂರುಗಳನ್ನು ನಿರ್ವಹಿಸಲು ನ್ಯಾಯಾಲಯಕ್ಕೆ ಕಾನೂನು ಅಧಿಕಾರವ್ಯಾಪ್ತಿ ಇರುವುದಿಲ್ಲ ಎಂಬುದನ್ನು ಪುನರುಚ್ಚರಿಸಿತು.



ಈ ಹಿನ್ನೆಲೆಯಲ್ಲಿ ಮೇಲ್ಮವಿದಾರರ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ಅವಧಿಗೆ ಮುನ್ನ ಹಾಕಲಾದ ದೂರನ್ನು ವಜಾಗೊಳಿಸಿತು.




ತೀರ್ಪಿನ ಪ್ರತಿಗಾಗಿ

Gajanand Burange Vs Laxmi Chand Goyal



Ads on article

Advertise in articles 1

advertising articles 2

Advertise under the article