-->
ಮೆಡಿಕಲ್ ಮಾಫಿಯಾದ ಕರಾಳಮುಖ ಬಯಲು ಮಾಡಿದ ಡೋಲೋ: ಸಮಸ್ಯೆ ಗಂಭೀರ ಎಂದ ಸುಪ್ರೀಂ ಕೋರ್ಟ್‌

ಮೆಡಿಕಲ್ ಮಾಫಿಯಾದ ಕರಾಳಮುಖ ಬಯಲು ಮಾಡಿದ ಡೋಲೋ: ಸಮಸ್ಯೆ ಗಂಭೀರ ಎಂದ ಸುಪ್ರೀಂ ಕೋರ್ಟ್‌

ಮೆಡಿಕಲ್ ಮಾಫಿಯಾದ ಕರಾಳಮುಖ ಬಯಲು ಮಾಡಿದ ಡೋಲೋ: ಸಮಸ್ಯೆ ಗಂಭೀರ ಎಂದ ಸುಪ್ರೀಂ ಕೋರ್ಟ್‌

ಡೋಲೋ ಮಾತ್ರೆಗಳನ್ನು ವೈದ್ಯರು ಶಿಫಾರಸು ಮಾಡಿದ್ದಕ್ಕೆ ರೂ. 1,000 ಕೋಟಿ ಮೊತ್ತದ ಉಚಿತ ಕೊಡುಗೆಯನ್ನು ಕಂಪೆನಿ ನೀಡಿದ್ದು, ಈ ಮಾಹಿತಿ ಹೊರಬೀಳುತ್ತಿದ್ದಂತೆ ನಾಗರಿಕ ಸಮಾಜ ಬೆಚ್ಚಿಬಿದ್ದಿದೆ.ಮೆಡಿಕಲ್ ಮಾಫಿಯಾ ಎಷ್ಟು ಅಪಾಯಕಾರಿ ಎಂಬುದು ಜಗಜ್ಜಾಹೀರಾಗಿದೆ. ವಿಶ್ವವೇ ತಲ್ಲಣಗೊಂಡಿದ್ದ ಕೋವಿಡ್ ಸೋಂಕಿನ ಸಮಯದಲ್ಲಿ ಮೆಡಿಕಲ್ ಮಾಫಿಯಾ ಇಡೀ ಜಗವನ್ನೇ ತನ್ನ ಆಡುಂಬೊಲವನ್ನಾಗಿ ಮಾಡಿತ್ತು.ಸುಪ್ರೀಂ ಕೋರ್ಟ್‌ ಮುಂದೆ ಡೋಲೋ ಮಾತ್ರೆಯ ಶಿಫಾರಸ್ಸಿಗೆ ಸಾವಿರ ಕೋಟಿ ರೂಗಳ ಉಚಿತ ಕೊಡುಗೆ ಬಂದದ್ದೇ ತಡ. ಸ್ವತಃ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳೇ ಇದನ್ನು ಕಂಡು ಹೌಹಾರಿದ್ದಾರೆ. 


ಕೋವಿಡ್ ಸೋಂಕಿಗೆ ತುತ್ತಾದಾಗ ತನಗೂ ವೈದ್ಯರು ಇದೇ ಮಾತ್ರೆಯನ್ನು ತೆಗೆದುಕೊಳ್ಳುವಂತೆ ಶಿಫಾರಸ್ಸು ಮಾಡಿದ್ದರು ಎಂದು ನ್ಯಾ. ಧನಂಜಯ ವೈ ಚಂದ್ರಚೂಡ್ ಆತಂಕ ವ್ಯಕ್ತಪಡಿಸಿದ್ದು, ಇದೊಂದು ಗಂಭೀರ ಸಮಸ್ಯೆ ಎಂದು ಅಭಿಪ್ರಾಯಪಟ್ಟರು.


ಪ್ರಕರಣ: Federation of Medical & Sales Representatives Association of India v. Union of India


ಅಪರ್ಣಾ ಭಟ್ ಎಂಬ ವಕೀಲರು ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದು, ಆರೋಗ್ಯದ ಹಕ್ಕು ಜೀವಿಸುವ ಹಕ್ಕಿನ ಭಾಗವಾಗಿದೆ. ಔಷಧ ತಯಾರಕ ಕಂಪೆನಿಗಳ ಸ್ವೇಚ್ಛಾಚಾರಕ್ಕೆ ತಡೆಯೊಡ್ಡಬೇಕು ಹಾಗೂ ನೈತಿಕ ಮಾರುಕಟ್ಟೆ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಔಷಧ ಕಂಪೆನಿಗಳಿಗೆ ನಿರ್ದೇಶನ ನೀಡಬೇಕು ಎಂದು ದಾವೆಯಲ್ಲಿ ಕೋರಿಕೊಂಡಿದ್ದರು.ಭಾರತೀಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಒಕ್ಕೂಟದ ಪರ ವಾದಿಸಿದ ವಕೀಲರು, ರೋಗಿಗಳಿಗೆ ಜ್ವರ ನಿವಾರಕ ಔಷಧವನ್ನು ಶಿಫಾರಸು ಮಾಡಲು ಡೋಲೊ ತಯಾರಕರು ರೂ. 1,000 ಕೋಟಿ ಮೊತ್ತವನ್ನು ವೈದ್ಯರಿಗೆ ಉಚಿತ ಕೊಡುಗೆಗಳ ಮೂಲಕ ವಿನಿಯೋಗಿಸಿದ್ದಾರೆ ಎಂದು ತಿಳಿಸಿದರು.ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಉತ್ತರವನ್ನು ನಿರೀಕ್ಷಿಸಿದ ಸುಪ್ರೀಂ ಕೋರ್ಟ್‌, ಮುಂದಿನ 10 ದಿನಗಳೊಳಗೆ ನ್ಯಾಯಪೀಠದ ಮುಂದೆ ಲಿಖಿತ ಉತ್ತರ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರಿಗೆ ಸೂಚನೆ ನೀಡಿತು.Ads on article

Advertise in articles 1

advertising articles 2

Advertise under the article