-->
ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?

ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?

ವಕೀಲಿಕೆ ನಡೆಸದ ವಕೀಲರಿಗೆ ಸಂಕಷ್ಟ: ಐದು ವರ್ಷ ವೃತ್ತಿಯಿಂದ ದೂರವಿದ್ದರೆ ಮತ್ತೆ ಪರೀಕ್ಷೆ?





ವೃತ್ತಿಪರ ವಕೀಲರಾಗಿ ವಕೀಲರ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿ ವಕೀಲ ವೃತ್ತಿಯಿಂದ ದೂರು ಉಳಿಯುವ ವಕೀಲರಿಗೆ ಇದು ಕಹಿ ಸುದ್ದಿ.



ನಿರಂತರ ಐದು ವರ್ಷಗಳಿಗಿಂತ ಹೆಚ್ಚು ಕಾಲ ವಕೀಲಿಕೆ ನಡೆಸದಿದ್ದರೆ, ಅಂಥವರು ಭಾರತೀಯ ವಕೀಲರ ಪರಿಷತ್ತು ನಡೆಸುವ AIBE ಪರೀಕ್ಷೆ ಎದುರಿಸುವುದು ಕಡ್ಡಾಯ. ಈ ವಿಷಯವನ್ನು ಸ್ವತಃ ಭಾರತೀಯ ವಕೀಲರ ಪರಿಷತ್ತು ಸುಪ್ರೀಂ ಕೋರ್ಟಿಗೆ ಲಿಖಿತವಾಗಿ ತಿಳಿಸಿದೆ.



ಸತತವಾಗಿ ಐದು 5 ವರ್ಷಕ್ಕಿಂತ ಅಧಿಕ ಅವಧಿ ವಕೀ ವೃತ್ತಿಯಿಂದ ಹೊರಗಿದ್ದರೆ ಅಂತವರು ಪುನರಪಿ ವಕೀಲರಾಗಿ ಪ್ರಾಕ್ಟೀಸ್ ಮಾಡಲು ಐಬಿಸಿ "ಆಲ್ ಇಂಡಿಯಾ ಬಾರ್ ಎಕ್ಸಾಮ್" ಪರೀಕ್ಷೆ ಬರೆಯಬೇಕು ಎಂದು BCI ಹೇಳಿದೆ.



ವಕೀಲರಾದ ದುರ್ಗಾ ದತ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿ, ವಕೀ ವೃತ್ತಿ ಮತ್ತು ಕಾನೂನು ಶಿಕ್ಷಣದ ಮಾನದಂಡಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಕೋರಿದ್ದರು. ಈ ಅರ್ಜಿ ಕುರಿತು ಅಫಿಡವಿಟ್ ಸಲ್ಲಿಸಿದ ಐಬಿಸಿ, ಸುಪ್ರೀಂ ಕೋರ್ಟಿಗೆ ಈ ಮಾಹಿತಿ ನೀಡಿದೆ.



ಯಾವುದೇ ವ್ಯಕ್ತಿ ಕಾನೂನು ಪದವಿ ಪಡೆದ ಬಳಿಕ ವಕೀಲರಾಗಿ ಪ್ರಾಕ್ಟೀಸ್ ಮಾಡಲು IBC ನಡೆಸುವ AIBE ಪರೀಕ್ಷೆ ಪಾಸ್ ಆಗಬೇಕು. ಅಂಥವರಿಗೆ ಮಾತ್ರ ವಕೀಲರಾಗಿ ವೃತ್ತಿ ನಡೆಸಲು "ಪ್ರಾಕ್ಟೀಸ್ ಸರ್ಟಿಫಿಕೇಟ್" ನೀಡಲಾಗುತ್ತದೆ. ಪ್ರಾಕ್ಟೀಸ್ ಸರ್ಟಿಫಿಕೇಟ್ ಪಡೆದ ಬಳಿಕ, ವಕೀಲರಾಗಿ ಸೇವೆ ಸಲ್ಲಿಸದೆ ಇತರ ವೃತ್ತಿಗೆ ತೆರಳಿ ವೃತ್ತಿಯಿಂದ ಐದು ವರ್ಷಕ್ಕೂ ಅಧಿಕ ಕಾಲ ದೂರ ಇದ್ದರೆ ಅಂತಹವರು ಮತ್ತೆ AIBE ಪರೀಕ್ಷೆ ಪಾಸು ಮಾಡುವುದು ಕಡ್ಡಾಯ ಎಂದು ಐಬಿಸಿ ಪ್ರಮಾಣ ಪತ್ರದಲ್ಲಿ ತಿಳಿಸಿದೆ.



ಆದರೆ, ಈ ನಿಯಮದಲ್ಲಿ ಕೆಲವರಿಗೆ ವಿನಾಯಿತಿ ನೀಡಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕವಾದವರು, ನ್ಯಾಯಾಂಗ ಸೇವೆಗಳಲ್ಲಿ ತೊಡಗಿಸಿಕೊಂಡವರು, ಕಂಪೆನಿಗಳ ವಕೀಲರಾಗಿ ಸೇವೆ ಸಲ್ಲಿಸುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂಬುದನ್ನು BCI ಸ್ಪಷ್ಟಪಡಿಸಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200