-->
ಸರ್ಕಾರಿ ನೌಕರನ ದತ್ತು ಪುತ್ರಿಗೆ ಅನುಕಂಪದ ನೌಕರಿ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಸರ್ಕಾರಿ ನೌಕರನ ದತ್ತು ಪುತ್ರಿಗೆ ಅನುಕಂಪದ ನೌಕರಿ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು

ಸರ್ಕಾರಿ ನೌಕರನ ದತ್ತು ಪುತ್ರಿಗೆ ಅನುಕಂಪದ ನೌಕರಿ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು





ಸರ್ಕಾರಿ ನೌಕರರೊಬ್ಬರು ದತ್ತು ಪಡೆದಿದ್ದ ಪುತ್ರಿ ತಂದೆಯ ಮರಣದ 12 ವರ್ಷಗಳ ಬಳಿಕ ಅನುಕಂಪದ ಆಧಾರದಲ್ಲಿ ತಮಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಪುರಸ್ಕರಿಸಲು ನಿರಾಕರಿಸಿದೆ.


ಅನುಕಂಪದ ಆಧಾರದಲ್ಲಿ ಉದ್ಯೋಗ ಎನ್ನುವುದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಸಮಾನತೆಯ ಹಕ್ಕು ಸಂವಿಧಾನದ ವಿಧಿ 14 ಮತ್ತು ಸಾರ್ವಜನಿಕ ಸೇವೆಯಲ್ಲಿ ಸಮಾನ ಅವಕಾಶ ವಿಧಿ 16 ವಿಧಿಗಳ ಉಲ್ಲಂಘನೆಯಾಗಿದೆ. ಹಾಗಾಗಿ, ಆಯ್ದ ಅರ್ಹ ಪ್ರಕರಣಗಳನ್ನು ಮಾತ್ರ ಷರತ್ತಿನ ಮೇರೆಗೆ ಅನುಕಂಪದ ನೇಮಕಾತಿಗೆ ಪರಿಗಣಿಸಬೇಕು ಎಂದು ನ್ಯಾಯಪೀಠ ಮಹತ್ವದ ಆದೇಶ ಮಾಡಿದೆ.



ಅನುಕಂಪದ ನೇಮಕಾತಿ ಒಂದು ವಿನಾಯಿತಿ ಅಷ್ಟೇ.. ದು ಹಕ್ಕು ಅಲ್ಲ... ಅದನ್ನು ಕಟ್ಟುನಿಟ್ಟಿನಿಂದ ಷರತ್ತಿಗೆ ಒಳಪಟ್ಟು ಜಾರಿಗೊಳಿಸಬೇಕು. ಅನುಕಂಪದ ನೇಮಕಾತಿ ಯೋಜನೆ ಸಂವಿಧಾನದ 14 ಮತ್ತು 16ನೇ ವಿಧಿಯ ಉಲ್ಲಂಘನೆ... ಹಾಗಾಗಿ, ಅರ್ಹ ಪ್ರಕರಣಗಳಿಗೆ ಮಾತ್ರ ಇದನ್ನು ಅನ್ವಯಿಸಬೇಕು ಎಂದು ನ್ಯಾಯಪೀಠ ಒತ್ತಿ ಹೇಳಿತು.



ಪ್ರಕರಣದ ವಿವರ:

2002ರಲ್ಲಿ ಸರ್ಕಾರಿ ನೌಕರರಾಗಿದ್ದ ತಾಯಿ ಸಾವನ್ನಪ್ಪುವ ಕೆಲ ಕಾಲ ಮುಂಚಿತವಾಗಿ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ದತ್ತು ಪುತ್ರಿ ತನ್ನ ದತ್ತು ತಾಯಿಯ ಮರಣದ 12 ವರ್ಷ ಬಳಿಕ ಅಂದರೆ 2014ರಲ್ಲಿ ಅನುಕಂಪದ ಆಧಾರದ ದ್ಯೋಗಕ್ಕೆ ಮನವಿ ಸಲ್ಲಿಸಿದರು.



ಕಾಲಮಿತಿ ನಿಯಮದ ಪ್ರಕಾರ, ಮೂರು ವರ್ಷಗಳ ಒಳಗೆ ಅನುಕಂಪದ ನೇಮಕಾತಿಗೆ ಅರ್ಜಿ ಸಲ್ಲಿಸಬೇಕು. ಆದರೆ, ಅರ್ಜಿದಾರರು 2014ರಲ್ಲಿ ತಡವಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿತು.



ಮೃತ ಸರ್ಕಾರಿ ನೌಕರರು ತನ್ನ ಪತಿಯ ಸಾವಿನ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆದುಕೊಂಡಿದ್ದರು. ಅವರನ್ನು ವೆಲ್ಲೂರು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಕಿರಿಯ ಸಹಾಯಕಿಯಾಗಿ ನೇಮಕಗೊಂಡಿದ್ದರು. ಆಕೆ 2002ರ ಮೇ 8ರಲ್ಲಿ ನಿಧನ ಹೊಂದಿದ್ದು, ಅದಕ್ಕೂ ಕೆಲ ಕಾಲ ಮುಂಚಿತವಾಗಿ ತಮ್ಮನ್ನು ದತ್ತು ಪಡೆದಿದ್ದರು ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ತಿಳಿಸಿದ್ದರು.




Ads on article

Advertise in articles 1

advertising articles 2

Advertise under the article