-->
ಸುಳ್ಳು ಜಾತಿ ಸರ್ಟಿಫಿಕೇಟ್ ಆಧಾರದಲ್ಲಿ ಉದ್ಯೋಗ: ನೇಮಕಾತಿಯ ಲಾಭ ಉಳಿಸಿಕೊಳ್ಳಲು ಅನುಮತಿಸಲಾಗದು: ಸುಪ್ರೀಂ ಕೋರ್ಟ್ ತೀರ್ಪು

ಸುಳ್ಳು ಜಾತಿ ಸರ್ಟಿಫಿಕೇಟ್ ಆಧಾರದಲ್ಲಿ ಉದ್ಯೋಗ: ನೇಮಕಾತಿಯ ಲಾಭ ಉಳಿಸಿಕೊಳ್ಳಲು ಅನುಮತಿಸಲಾಗದು: ಸುಪ್ರೀಂ ಕೋರ್ಟ್ ತೀರ್ಪು

ಸುಳ್ಳು ಜಾತಿ ಸರ್ಟಿಫಿಕೇಟ್ ಆಧಾರದಲ್ಲಿ ಉದ್ಯೋಗ: ನೇಮಕಾತಿಯ ಲಾಭ ಉಳಿಸಿಕೊಳ್ಳಲು ಅನುಮತಿಸಲಾಗದು: ಸುಪ್ರೀಂ ಕೋರ್ಟ್ ತೀರ್ಪು





ಸುಳ್ಳು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ನೇಮಕಾತಿಯನ್ನು ಪಡೆದ ನೌಕರನು ಆ ಅಕ್ರಮ ನೇಮಕಾತಿಯ ದುರ್ಲಾಭವನ್ನು ಉಳಿಸಿಕೊಳ್ಳಲು ನ್ಯಾಯಾಲಯ ಅನುಮತಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಒಬ್ಬ ವ್ಯಕ್ತಿಯು ಸುಳ್ಳು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾನೆ. ಅದು ಅಕ್ರಮ ನೇಮಕಾತಿ ಆಗಿರುತ್ತದೆ. ಅವನನ್ನು ಉದ್ಯೋಗದಿಂದ ಕಿತ್ತು ಹಾಕಿದಾಗ, ಆತ ದುಡಿದ ದಿನಗಳ ಬೆನಿಫಿಟ್‌ಗಳನ್ನು ಆತನಿಗೆ ಉಳಿಸಿಕೊಳ್ಳಲು ಕೋರ್ಟ್ ಅನುಮತಿ ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



ಪ್ರಕರಣ: ದಿ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಭಿಲೈ ಸ್ಟೀಲ್ ಪ್ಲ್ಯಾಂಟ್‌ Vs ಮಹೇಶ್ ಕುಮಾರ್ ಗೊನ್ನಾಡೆ ಮತ್ತು ಇತರರು

ಸುಪ್ರೀಂ ಕೋರ್ಟ್, CA 4990/2021 Dated 11-07-2022


ಪ್ರಕರಣದ ವಿವರ

ಮಹೇಶ್ ಕುಮಾರ್ ಗೊನ್ನಾಡೆ ಎಂಬಾತ ಚತ್ತೀಸ್‌ಘಡದ ದುರ್ಗ ಜಿಲ್ಲಾಧಿಕಾರಿ ಅವರಿಂದ “ಹಲ್ಬಾ” ಪರಿಶಿಷ್ಟ ಪಂಗಡ ಎಂದು ತೋರಿಸುವ ಜಾತಿ ಪ್ರಮಾಣಪತ್ರ ಪಡೆದು ಅದರ ಆಧಾರದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯ ಭಿಲೈ ಸ್ಥಾವರದಲ್ಲಿ ಎಸ್‌ಟಿ ಗೆ ಮೀಸಲಾಗಿದ್ದ ಮ್ಯಾನೇಜ್‌ಮೆಂಟ್ ಟ್ರೈನಿ ಉದ್ಯೋಗ ಗಿಟ್ಟಿಸಿದನು.



ಆ ಬಳಿಕ ಆತನ ಜಾತಿ ಪ್ರಮಾಣಪತ್ರದ ಬಗ್ಗೆ ಅನುಮಾನ ಉಂಟಾಗಿ, ಉನ್ನತ ಮಟ್ಟದ ಜಾತಿ ಪರಿಶೀಲನಾ ಸಮಿತಿ ಆತನನ್ನು ದೋಷಿ ಎಂದು ತೀರ್ಮಾನಿಸಿ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿತು. ಈ ಹಿನ್ನೆಲೆಯಲ್ಲಿ ಆತನನ್ನು ಉದ್ಯೋಗದಿಂದ ವಜಾ ಮಾಡಲಾಯಿತು.



ಆರೋಪಿ ಮಹೇಶ್, ತನ್ನನ್ನು ಉದ್ಯೋಗದಿಂದ ವಜಾಗೊಳಿಸಿದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಮುಂದೆ ಪ್ರಶ್ನಿಸಿದರು. ಛತ್ತೀಸ್‌ಗಢ ಹೈಕೋರ್ಟ್ Maharashtra Vs. Milind and Ors. (2001) 1 SCC 4 ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ನೀಡಿದ ತೀರ್ಪನ್ನು ಅವಲಂಬಿಸಿ ರಿಟ್ ಅರ್ಜಿಯನ್ನು ಅಂಗೀಕರಿಸಿತು.



ಈ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟಿನ ಕದ ತಟ್ಟಿದರು. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಸುಳ್ಳು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಅರ್ಹತೆಯಿಲ್ಲದ ನೇಮಕಾತಿ ಗಿಟ್ಟಿಸಿದವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಸರಿಯಾದ ನಿರ್ಧಾರ ಎಂದು ಹೇಳಿತು.



ಹೈಕೋರ್ಟಿನ ತೀರ್ಪು ಸರಿಯಾದ ಕ್ರಮದಲ್ಲಿ ಅವಲೋಕನಗೊಂಡಿಲ್ಲ ಮತ್ತು ಅದು ಸರ್ಕಾರದ ಸುತ್ತೋಲೆಯನ್ನು ನಿರ್ಲಕ್ಷಿಸಿದೆ. ಈ ಸುತ್ತೋಲೆಯಲ್ಲಿ ಮಿಲಿಂದ್ ಪ್ರಕರಣವನ್ನು ದತ್ತಾತ್ರೇಯ ಪ್ರಕರಣದೊಂದಿಗೆ ಇಟ್ಟು ಸ್ಪಷ್ಟನೆ ನೀಡಲಾಗಿದೆ.



ಸುಳ್ಳು ಪ್ರಮಾಣಪತ್ರದ ಆಧಾರದ ಮೇಲೆ ಒಬ್ಬ ವ್ಯಕ್ತಿ ಅಕ್ರಮ ಉದ್ಯೋಗ ಪಡೆದುಕೊಂಡಿದ್ದು, ಆತನ ವಜಾದ ಸಂದರ್ಭದಲ್ಲಿ "ತಪ್ಪಾದ ನೇಮಕಾತಿ"ಯ ಪ್ರಯೋಜನವನ್ನು ಆತನಿಗೆ ಉಳಿಸಿಕೊಳ್ಳಲು ಅನುಮತಿಸಲಾಗುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.\


For Judgement Click Here:

 ದಿ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಭಿಲೈ ಸ್ಟೀಲ್ ಪ್ಲ್ಯಾಂಟ್‌Vs ಮಹೇಶ್ ಕುಮಾರ್ ಗೊನ್ನಾಡೆ ಮತ್ತು ಇತರರು




ಇದನ್ನೂ ಓದಿ

ನಕಲಿ ದಾಖಲೆ ಆಧರಿಸಿ ಉದ್ಯೋಗ ಪಡೆದವರಿಗೆ ಶಿಕ್ಷೆ: ಕರ್ನಾಟಕ ಹೈಕೋರ್ಟ್


Ads on article

Advertise in articles 1

advertising articles 2

Advertise under the article