-->
ಸಿಜೆಐ ಆಗಿ ಉದಯ್ ಉಮೇಶ್ ಲಲಿತ್: ಅವರ ಸಂಪೂರ್ಣ ಬಯೋಗ್ರಫಿ ಇಲ್ಲಿದೆ...!

ಸಿಜೆಐ ಆಗಿ ಉದಯ್ ಉಮೇಶ್ ಲಲಿತ್: ಅವರ ಸಂಪೂರ್ಣ ಬಯೋಗ್ರಫಿ ಇಲ್ಲಿದೆ...!

ಸಿಜೆಐ ಆಗಿ ಉದಯ್ ಉಮೇಶ್ ಲಲಿತ್: ಅವರ ಸಂಪೂರ್ಣ ಬಯೋಗ್ರಫಿ ಇಲ್ಲಿದೆ...!


ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ.

ನಿರ್ಗಮಿತ ಸಿಜೆಐ ನ್ಯಾ. ಎನ್. ವಿ. ರಮಣ ಅಧಿಕಾರಾವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಆಗಸ್ಟ್ 27 ರಂದು ಯು.ಯು. ಲಲಿತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ದೇಶದ ಸಂವಿಧಾನದ 124 ನೇ ವಿಧಿಯ ಶರತ್ತು (2) ಪ್ರಕಾರ ಪ್ರದತ್ತ ಅಧಿಕಾರವನ್ನು ಬಳಸಿ ರಾಷ್ಟ್ರಪತಿಗಳು ಈ ನೇಮಕಾತಿ ಮಾಡಿದ್ದಾರೆ.ನ್ಯಾ. U.U. ಲಲಿತ್ ಅವರನ್ನು ಆಗಸ್ಟ್ 2014 ರಂದು ಭಾರತದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು. ನ್ಯಾಯಮೂರ್ತಿ ಎಸ್‌.ಎಂ. ಸಿಕ್ರಿ ಬಳಿಕ ನ್ಯಾ. ಲಲಿತ್ ಅವರು ವಕೀಲರ ಸಮುದಾಯದಿಂದ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಏರಿದ ದೇಶದ 2ನೇ ಸಿಜೆಐ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.1971ರಲ್ಲಿ 13ನೇ ಸಿಜೆಐ ಆಗಿ ಸಿಕ್ರಿ ಅವರು ಸೇವೆ ಸಲ್ಲಿಸಿದ್ದರು. ನ್ಯಾಯಮೂರ್ತಿ ಲಲಿತ್ ಎರಡು ಅವಧಿಗೆ ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 


ಇದುವರೆಗೆ ನ್ಯಾ. U.U. ಲಲಿತ್ ಹಲವಾರು ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ್ದಾರೆ.

ನವೆಂಬರ್ 9, 1957 ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿದ ನ್ಯಾಯಮೂರ್ತಿ ಲಲಿತ್ ಜೂನ್, 1983 ರಲ್ಲಿ ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್‌ನಿಂದ ವಕೀಲರಾಗಿ ನೋಂದಾಯಿಸಿಕೊಂಡರು. 


ಅವರು ಡಿಸೆಂಬರ್ 1985 ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಕೆಲಸ ಮಾಡಿದ್ದು ನಂತರ 1986, ಜನವರಿಯಲ್ಲಿ ದೆಹಲಿಯಲ್ಲಿ ಕಾರ್ಯ ಮುಂದುವರಿಸಿದರು.ಅಕ್ಟೋಬರ್ 1986 ರಿಂದ 1992 ರವರೆಗೆ ಸೋಲಿ ಜೆ. ಸೊರಾಬ್ಜಿಯವರ ಕಚೇರಿಯಲ್ಲಿ ಲಲಿತ್ ಸೇವೆ ಸಲ್ಲಿಸಿದ್ದರು. ಸೋಲಿ ಜೆ ಸೊರಾಬ್ಜಿ ಅವರು ಅಟಾರ್ನಿ ಜನರಲ್ ಆಫ್ ಇಂಡಿಯಾ ಆಗಿದ್ದ ಅವಧಿಯಲ್ಲಿ ಲಲಿತ್ ಅವರು ಕೇಂದ್ರ ಸರ್ಕಾರದ ವಕೀಲರ ಪ್ಯಾನಲ್‌ನಲ್ಲಿ ಇದ್ದರು.1992 ರಿಂದ 2002 ರವರೆಗೆ ಅವರು "ಅಡ್ವೊಕೇಟ್ ಆನ್ ರೆಕಾರ್ಡ್" ಆಗಿ ವೃತ್ತಿಜೀವನ ನಡೆಸಿದರು. 2004ರ ಎಪ್ರಿಲ್ ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲರಾಗಿ ಲಲಿತ್ ನೇಮಕವಾದರು.

ಮುಖ್ಯವಾಗಿ, ಅರಣ್ಯ ವಿಷಯಗಳು, ವಾಹನ ಮಾಲಿನ್ಯ, ಯಮುನಾ ಮಾಲಿನ್ಯ ಇತ್ಯಾದಿ ಸೇರಿದಂತೆ ಹಲವು ಪ್ರಮುಖ ವಿಷಯಗಳಲ್ಲಿ ಅವರನ್ನು 'ಅಮಿಕಸ್ ಕ್ಯೂರಿ'ಯಾಗಿ ನೇಮಿಸಲಾಯಿತು. 


ಎಲ್ಲಾ 2ಜಿ ಪ್ರಕರಣಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ಅವರನ್ನು ಸಿಬಿಐಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಲಾಗಿತ್ತು.ನೂತನ ಸಿಜೆಐ ಆಗಿರುವ ನ್ಯಾ ಲಲಿತ್ ಅವರ ಅಧಿಕಾರಾವಧಿ ಅತ್ಯಂತ ಕಿರಿಯದ್ದು. ಅವರು ಕೇವಲ ಮೂರು ತಿಂಗಳಿಗೂ ಕಡಿಮೆ ಅವಧಿಯ ಸೇವಾವಧಿ ಹೊಂದಿದ್ದಾರೆ. 2022ರ ನವೆಂಬರ್ 8ರಂದು ಸಿಜೆಐ ಆಗಿ ನಿವೃತ್ತರಾಗಲಿರುವ ಲಲಿತ್ ಅಂದು ತಮ್ಮ 65ನೇ ವಸಂತಕ್ಕೆ ಕಾಲಿಡುತ್ತಾರೆ.ಆ ಬಳಿಕ, ಧನಂಜಯ ವೈ ಚಂದ್ರಚೂಡ್ ಅವರು ನೇಮಕಗೊಳ್ಳುವ ಸಾಧ್ಯತೆ ಇದೆ. 50ನೇ ಸಿಜೆಐ ಆಗಿ ನೇಮಕಗೊಂಡರೆ, ಮೂರು ವರ್ಷಗಳ ಕಾಲ ಈ ಹುದ್ದೆ ನಿಭಾಯಿಸುವ ಅವಕಾಶ ಡಿ.ವೈ. ಚಂದ್ರಚೂಡ್ ಅವರದ್ದಾಗಲಿದೆ.Ads on article

Advertise in articles 1

advertising articles 2

Advertise under the article