-->
ಲಂಚ ಸ್ವೀಕರಿಸಿದ ಉಪನೋಂದಣಾಧಿಕಾರಿಗಳ ವಿರುದ್ಧ ವಿಚಾರಣೆ ಪುನರ್‌ಸ್ಥಾಪನೆ: ಕರ್ನಾಟಕ ಹೈಕೋರ್ಟ್

ಲಂಚ ಸ್ವೀಕರಿಸಿದ ಉಪನೋಂದಣಾಧಿಕಾರಿಗಳ ವಿರುದ್ಧ ವಿಚಾರಣೆ ಪುನರ್‌ಸ್ಥಾಪನೆ: ಕರ್ನಾಟಕ ಹೈಕೋರ್ಟ್

ಲಂಚ ಸ್ವೀಕರಿಸಿದ ಉಪನೋಂದಣಾಧಿಕಾರಿಗಳ ವಿರುದ್ಧ ವಿಚಾರಣೆ ಪುನರ್‌ಸ್ಥಾಪನೆ: ಕರ್ನಾಟಕ ಹೈಕೋರ್ಟ್


ಲಂಚ ಸ್ವೀಕರಿಸಿದ ಆರೋಪಿ ಉಪನೋಂದಣಾಧಿಕಾರಿಗಳ ವಿರುದ್ಧದ ಪ್ರಕರಣ : ಪ್ರಾಸಿಕ್ಯೂಶನ್ ರದ್ದುಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿದ ಕರ್ನಾಟಕ ಹೈಕೋರ್ಟ್- ಇಬ್ಬರು ಸಬ್ ರಿಜಿಸ್ಟ್ರಾರ್‌ಗಳು, ಇತರರು ವಿಚಾರಣೆ ಎದುರಿಸಲು ನಿರ್ದೇಶನ





ಲಂಚದ ಬೇಡಿಕೆ ಮತ್ತು ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಪ ನೋಂದಣಾಧಿಕಾರಿಗಳ ಸಹಿತ ನಾಲ್ಕು ಮಂದಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಪುನರ್‌ಸ್ಥಾಪಿಸಿದೆ.



ಈ ಆದೇಶದ ಹಿನ್ನೆಲೆಯಲ್ಲಿ, 2005ರಲ್ಲಿ ಬೆಂಗಳೂರಿನ ಜಯನಗರ ಸಬ್ ರಿಜಿಸ್ಟ್ರಾರ್ ಕಚೇರಿಯ ಸೇವೆಯಲ್ಲಿದ್ದ ಉಪ ನೋಂದಣಾಧಿಕಾರಿಗಳಾದ ವೆಂಕಟೇಶ್ ಭಟ್, ಕೆ ಆರ್ ರೇಣುಕಾ ಪ್ರಸಾದ್, ಪ್ರಥಮ ದರ್ಜೆ ಸಹಾಯಕ ಎಲ್ ವಿ ಷಡಕ್ಷರಿ ಮತ್ತು ಏಜೆಂಟ್ ಎಸ್ ನಟರಾಜ್ ಅವರ ವಿರುದ್ಧ ಮತ್ತೆ ವಿಚಾರಣೆ ನಡೆಯಲಿದೆ.



2022ರ ಆಗಸ್ಟ್ 10ರಂದು ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವಂತೆ ಆರೋಪಿಗಳಿಗೆ ಸೂಚಿಸಿರುವ ನ್ಯಾಯಮೂರ್ತಿ ಎಚ್‌ಬಿ ಪ್ರಭಾಕರ ಶಾಸ್ತ್ರಿ, 2005ರಲ್ಲಿ ದಾಖಲಾಗಿರುವ ಪ್ರಕರಣವನ್ನು ಪರಿಗಣಿಸಿ ಆರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದಾರೆ.



ಲಂಚದ ಬೇಡಿಕೆ ಮತ್ತು ಸ್ವೀಕಾರ ಪ್ರಕರಣದಲ್ಲಿ ಈ ನಾಲ್ವರು ಆರೋಪಿಗಳ ಮೇಲಿನ ಆರೋಪದಿಂದ ಮುಕ್ತಗೊಳಿಸಿ ವಿಶೇಷ ನ್ಯಾಯಾಲಯವು ವಿಚಾರಣೆಯನ್ನು ರದ್ದುಗೊಳಿಸಿತ್ತು. ವಿಶೇಷ ನ್ಯಾಯಾಲಯದ ಈ ಆದೇಶದ ವಿರುದ್ಧ ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ ಮೆಟ್ಟಿಲೇರಿದ್ದರು.



ಈ ಮೇಲ್ಮನವಿಯನ್ನು ಪುರಸ್ಕರಿಸಿದ ಕರ್ನಾಟಕ ಹೈಕೋರ್ಟ್‌, ವಿಶೇಷ ನ್ಯಾಯಾಲಯದ ಆದೇಶವನ್ನು ಹಿಂಪಡೆದಿದ್ದು, ನಾಲ್ವರು ಆರೋಪಿಗಳ ವಿರುದ್ಧ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.



ಈ ಮೇಲಿನ ಆರೋಪಿ ಅಧಿಕಾರಿಗಳು ಒಂದು ದಾಖಲೆಯನ್ನು ನೋಂದಣಿ ಮಾಡಿಕೊಡಲು ರೂ. 20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ದಾಖಲೆ ನೋಂದಾಯಿಸಲು 18,000 ರೂ.ಗಳನ್ನು ಸ್ವೀಕರಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಉತ್ತರವಾಗಿ ರಾಜ್ಯ ಸರ್ಕಾರ 2006ರ ಫೆ.13ರಂದು ಮೂವರು ಆರೋಪಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಆದೇಶ ಹೊರಡಿಸಿತ್ತು.



2006ರ ಆದೇಶವು ಪ್ರಾಸಿಕ್ಯೂಷನ್ ಕೋರಿಕೆಯನ್ನು ತಿರಸ್ಕರಿಸಿದ ಕಾರಣ, ಲೋಕಾಯುಕ್ತ ಪೊಲೀಸರು ಜ್ಞಾಪನೆಗಳನ್ನು ಕಳುಹಿಸುತ್ತಲೇ ಇದ್ದರು. ತರುವಾಯ, ಜುಲೈ 6, 2010 ರಂದು ಹೊಸ ಮಂಜೂರಾತಿಯನ್ನು ನೀಡಲಾಯಿತು ಮತ್ತು ಆದ್ದರಿಂದ ವಿಶೇಷ ನ್ಯಾಯಾಲಯವು ಸಮನ್ಸ್ ನೀಡಿತು. ಆದಾಗ್ಯೂ, ಪ್ರಾಸಿಕ್ಯೂಷನ್ ಮಂಜೂರಾತಿಯನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ ಬಿಡುಗಡೆ ಅರ್ಜಿಯನ್ನು ಸಮ್ಮತಿಸಿ, ವಿಶೇಷ ನ್ಯಾಯಾಲಯವು ಡಿಸೆಂಬರ್ 15, 2017 ರಂದು ರಾಜ್ಯ ಸರ್ಕಾರವು ತನ್ನ 2006 ರ ಆದೇಶದಲ್ಲಿ ಪ್ರಾಸಿಕ್ಯೂಷನ್ ಅನುಮತಿಯನ್ನು ತಿರಸ್ಕರಿಸಿತ್ತು.

Ads on article

Advertise in articles 1

advertising articles 2

Advertise under the article