-->
ಹವಾಮಾನ ವ್ಯತ್ಯಯ ಹಿನ್ನೆಲೆ: ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆ ಮುಂದೂಡಿಕೆ

ಹವಾಮಾನ ವ್ಯತ್ಯಯ ಹಿನ್ನೆಲೆ: ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆ ಮುಂದೂಡಿಕೆ

ಹವಾಮಾನ ವ್ಯತ್ಯಯ ಹಿನ್ನೆಲೆ: ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆ ಮುಂದೂಡಿಕೆ

ಸೆಪ್ಟಂಬರ್ 10 ಮತ್ತು 11, 2022ರಂದು ನಿಗದಿಯಾಗಿದ್ದ ಸಿವಿಲ್ ಜಡ್ಜ್‌ ಲಿಖಿತ ಪರೀಕ್ಷೆಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ.ಬೆಂಗಳೂರು ಮತ್ತು ಸುತ್ತಮುತ್ತಲು ಸುರಿದ ಧಾರಾಕಾರ ಮಳೆ ಹಾಗೂ ಹವಾಮಾನ ವ್ಯತ್ಯಯದಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೈಕೋರ್ಟ್ ರಿಜಿಸ್ಟ್ರಾರ್ ಬಿ. ಮುರಳೀಧರ ಪೈ ಅವರು ತಿಳಿಸಿದ್ದಾರೆ.ಈ ಪರೀಕ್ಷೆಯನ್ನು ಮರುನಿಗದಿಗೊಳಿಸಿ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದ್ದು, ವಕೀಲರಿಗೆ ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅನಾನುಕೂಲವಾಗುತ್ತಿದೆ. ಈ ಕಾರಣದಿಂದ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಸಂಘ ಹಾಗೂ ಇತರ ವಕೀಲ ಸಂಘಗಳು ಮನವಿ ಮಾಡಿದ್ದವು.ಈ ಮನವಿಯನ್ನು ಪರಿಗಣಿಸಿದ ಹೈಕೋರ್ಟ್‌, ಸಿವಿಲ್ ಜಡ್ಜ್‌ ಮುಖ್ಯ ಲಿಖಿತ ಪರೀಕ್ಷೆಯನ್ನು ಮುಂದೂಡಿ ಪ್ರಕಟಣೆ ಹೊರಡಿಸಿದೆ.

Ads on article

Advertise in articles 1

advertising articles 2

Advertise under the article