-->
ರಾಜ್ಯದಲ್ಲೇ ಮೊದಲ ಪ್ರಕರಣ!: ಸರ್ಕಾರಿ ದಾಖಲೆ ಲಭ್ಯವಿಲ್ಲ ಎಂದು ಉತ್ತರಿಸಿದರೆ ಕ್ರಿಮಿನಲ್ ಕೇಸ್‌!

ರಾಜ್ಯದಲ್ಲೇ ಮೊದಲ ಪ್ರಕರಣ!: ಸರ್ಕಾರಿ ದಾಖಲೆ ಲಭ್ಯವಿಲ್ಲ ಎಂದು ಉತ್ತರಿಸಿದರೆ ಕ್ರಿಮಿನಲ್ ಕೇಸ್‌!

ರಾಜ್ಯದಲ್ಲೇ ಮೊದಲ ಪ್ರಕರಣ!: ಸರ್ಕಾರಿ ದಾಖಲೆ ಲಭ್ಯವಿಲ್ಲ ಎಂದು ಉತ್ತರಿಸಿದರೆ ಕ್ರಿಮಿನಲ್ ಕೇಸ್‌!





ಕಂದಾಯ ಇಲಾಖೆ, ಉಪ ನೋಂದಣಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರ್ಕಾರಿ ಇಲಾಖೆಯಲ್ಲಿ ದಾಖಲೆ ಇಲ್ಲ ಎಂದು ಹಿಂಬರ ನೀಡಿದರೆ, ಅಂತಹ ಅಧಿಕಾರಿ ಯಾ ಸರಕಾರಿ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬಹುದು.




ಸಾರ್ವಜನಿಕ ದಾಖಲೆಗಳ ಕಾಯ್ದೆ- 2010ರ ಪ್ರಕಾರ ಸರ್ಕಾರ ತನ್ನ ಎಲ್ಲ ಕಚೇರಿಗಳಲ್ಲಿ ಅಗತ್ಯ ದಾಖಲೆಗಳನ್ನು ಸಂರಕ್ಷಿಸಬೇಕಾಗಿದೆ. ಇದು ನಿಯುಕ್ತ ಸರ್ಕಾರಿ ಅಧಿಕಾರಿಯ ಕರ್ತವ್ಯ ಕೂಡ ಆಗಿರುತ್ತದೆ.



ಅವುಗಳ ಮಾಹಿತಿಯನ್ನು ಸಂಬಂಧಪಟ್ಟವರು ಯಾ ಅರ್ಜಿದಾರರು ಕೋರಿದಾಗ, ಕಡತ ಲಭ್ಯವಿಲ್ಲ ಎಂದು ಉತ್ತರಿಸುವುದಕ್ಕೆ ಮುನ್ನ ಸರ್ಕಾರಿ ಸಿಬ್ಬಂದಿ ಯಾ ಅಧಿಕಾರಿ ಹಲವು ಬಾರಿ ಗಂಭೀರವಾಗಿ ಆಲೋಚಿಸಬೇಕಾಗುತ್ತದೆ.



ಮಾಹಿತಿ ನೀಡುವಲ್ಲಿ ಉದಾಸೀನ ಯಾ ನಿರ್ಲಕ್ಷ್ಯ ತೋರಿದ ವ್ಯಕ್ತಿಗೆ ಜೈಲು ಶಿಕ್ಷೆ ಕಾದಿದೆ ಎಂಬುದನ್ನು ಕರ್ನಾಟಕ ಮಾಹಿತಿ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.



ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ ಏನು ಹೇಳುತ್ತದೆ..?

2010ರಲ್ಲಿ ಜಾರಿಗೆ ಬಂದ ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ ಪ್ರಕಾರ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ದಾಖಲೆಗಳನ್ನು ಸಂರಕ್ಷಿಸಬೇಕಾಗುತ್ತದೆ. ಅಂತಹ ದಾಖಲೆ, ಕಡತ, ಪುಸ್ತಕ ಅಥವಾ ಕಾಗದ ಪತ್ರಗಳು ಕಳುವಾದರೆ, ಕಾಣೆಯಾದರೆ ಆಗ ಸಿಬ್ಬಂದಿ ಯಾ ಅಧಿಕಾರಿಗೆ ಐದು ವರ್ಷದ ವರೆಗಿನ ಜೈಲು ಶಿಕ್ಷೆ ಅಥವಾ 10 ಸಾವಿರದ ದಂಡ ಅಥವಾ ಇವೆಡನ್ನೂ ಮಾಡಲು ದೂರುದಾರರು ಅರ್ಹರಾಗಿರುತ್ತಾರೆ.



ಉಪ ನೋಂದಣಾಧಿಕಾರಿ ವಿರುದ್ಧದ ಪ್ರಕರಣ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಉಪ ನೋಂದಣಾಧಿಕಾರಿ ಕಚೇರಿಗೆ ಮಾಹಿತಿ ಹಕ್ಕಿನ ಆಧಾರದಲ್ಲಿ ಅರ್ಜಿ ಸಲ್ಲಿಸಿದ ಶಿವಕುಮಾರ್ ಎಂಬವರು ದಾಖಲೆ ಕೇಳಿದರು. ಅವರು ಕೇಳಿದ ಬೆರಳಚ್ಚು ಪುಸ್ತಕ ಲಭ್ಯವಿಲ್ಲ ಎಂಬ ಉತ್ತರ ಸಿಕ್ಕಿತು.



ಈ ಸಂಬಂಧ ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದರು. ಈ ದೂರಿನ ವಿಚಾರಣೆ ನಡೆಸಿದ ಕರ್ನಾಟಕ ಮಾಹಿತಿ ಆಯೋಗ ಬೆರಳಚ್ಚು ಪುಸ್ತಕ ನಾಪತ್ತೆಯಾಗಿರುವುದಕ್ಕೆ ಎಂಟು ಅಧಿಕಾರಿಗಳನ್ನು ಹೊಣೆ ಮಾಡಿ ಆದೇಶ ಹೊರಡಿಸಿದೆ.



ಕಂದಾಯ ಇಲಾಖೆ, ಉಪ ನೋಂದಣಾಧಿಕಾರಿ ಅಥವಾ ಯಾವುದೇ ಇಲಾಖೆ ಯಾ ಸರ್ಕಾರಿ ಕಚೇರಿಗಳಲ್ಲಿ ಸರಕಾರದ ದಾಖಲೆಗಳನ್ನು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ - 2010 ರಂತೆ ಸಂರಕ್ಷಿಸಬೇಕಾಗಿರುವುದು ಪ್ರತಿಯೊಬ್ಬ ಸರಕಾರಿ ಅಧಿಕಾರಿಯ ಕರ್ತವ್ಯ. ಅವುಗಳ ಮಾಹಿತಿ ಕೇಳಿದರೆ ಕಡತ ಲಭ್ಯವಿಲ್ಲ ಎಂಬ ಉತ್ತರ ಕೊಡುವವರಿಗೆ ಜೈಲು ಶಿಕ್ಷೆ ಕಾದಿದೆ ಎಂಬುವುದು ಕರ್ನಾಟಕ ವಸತಿ ಆಯೋಗ ನೀಡಿರುವ ಆದೇಶದಿಂದ ತಿಳಿದುಬರುತ್ತದೆ.


ಏನು ಹೇಳುತ್ತದೆ..? ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ -2010...

ಸರಕಾರಿ ದಾಖಲೆಗಳ ಸಂರಕ್ಷಣೆ ಸಂಬಂಧಿಸಿದ 2010ರಲ್ಲಿ ಜಾರಿಯಾದ ಈ ಕಾನೂನಿನಡಿ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಸರ್ಕಾರಿ ದಾಖಲೆ, ಕಡತ, ಪುಸ್ತಕ ಅಥವಾ ಕಾಗದಗಳು ಕಳುವಾದರೆ, ಕಾಣೆಯಾದರೆ ಸಂಬಂಧಪಟ್ಟ ಅಧಿಕಾರಿಗಳಿಗೆ 5 ವರ್ಷಗಳ ವರೆಗಿನ ಜೈಲು ಶಿಕ್ಷೆ ಅಥವಾ ಹತ್ತುಸಾವಿರ ವರೆಗಿನ ದಂಡ ಅಥವಾ ಇವೆರಡರಿಂದಲೂ ದಂಡನೆ ಮಾಡಬಹುದಾದ ಕಠಿಣ ಕಾನೂನು ಇದು.


ಕೇಳಲಾದ ಅಗತ್ಯ ದಾಖಲೆ ಲಭ್ಯವಿಲ್ಲ ಎಂದರೆ ಏನು ಮಾಡಬೇಕು!


ಮ್ಯೂಟೆಶನ್ , 5/6 ದಾಖಲೆ, ಕೈ ಬರಹದ ಪಹಣಿ, ದರಕಾಸ್ತು ಕಡತಗಳು, ಹಳೆ ಪಹಣಿ ಪುಸ್ತಕಗಳು, ಜನನ ಮರಣ ರಿಜಿಸ್ಟರ್ ಇತ್ಯಾದಿ ಯಾವುದೇ ಸರ್ಕಾರಿ ದಾಖಲೆಗಳನ್ನು ಬಯಸಿ ಮಾಹಿತಿ ಹಕ್ಕಿನ ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಗಳಿಗೆ ದಾಖಲೆ ಲಭ್ಯವಿಲ್ಲ ಎಂದು ಹಿಂಬರಹ ನೀಡಿದ್ದರೆ, ಅಥವಾ ನೀಡಿದರೆ; ಆಗ ನಾವು ಮಾಡಬೇಕಾಗಿರುವುದು ಇದು...



ಒಂದು ಬಿಳಿ ಹಾಳೆಯಲ್ಲಿ ಸಂಬಂಧ ಪಟ್ಟ ಕಛೇರಿಯ ಮುಖ್ಯಸ್ಥರಿಗೆ ಪತ್ರ ಬರೆದು ಲಭ್ಯವಿಲ್ಲದ ಅಥವಾ ಕಳುವಾಗಿದೆ ಎನ್ನಲಾದ ಸರ್ಕಾರಿ ದಾಖಲೆಯನ್ನು ಪತ್ತೆ ಮಾಡಲು ಕರ್ನಾಟಕ ರಾಜ್ಯ ಸಾರ್ವಜನಿಕ ದಾಖಲೆಗಳ ಕಾಯ್ದೆ 2010 ರೀತ್ಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪತ್ರ ಬರೆಯಬೇಕು. 


ಆಗಲೂ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕು. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200