-->
ಕ್ರಿಮಿನಲ್ ಕೇಸ್‌ನ ಆಪಾದಿತ ಸರ್ಕಾರಿ ನೌಕರಿ ಪಡೆಯಬಹುದೇ..? ವಿದೇಶ ಪ್ರಯಾಣಕ್ಕೆ ಅನುಮತಿ ಇದೆಯೇ..?

ಕ್ರಿಮಿನಲ್ ಕೇಸ್‌ನ ಆಪಾದಿತ ಸರ್ಕಾರಿ ನೌಕರಿ ಪಡೆಯಬಹುದೇ..? ವಿದೇಶ ಪ್ರಯಾಣಕ್ಕೆ ಅನುಮತಿ ಇದೆಯೇ..?

ಕ್ರಿಮಿನಲ್ ಕೇಸ್‌ನ ಆಪಾದಿತ ಸರ್ಕಾರಿ ನೌಕರಿ ಪಡೆಯಬಹುದೇ..? ವಿದೇಶ ಪ್ರಯಾಣಕ್ಕೆ ಅನುಮತಿ ಇದೆಯೇ..?

ಒಬ್ಬ ವ್ಯಕ್ತಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದರೆ ಅಥವಾ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ, ಅಂಥವರು ಕಲ್ಲು ತೂರಾಟದಂತಹ ಕೃತ್ಯದಲ್ಲಿ ತೊಡಗಿದ್ದಾರೆಯೇ ಅಥವಾ ಸರ್ಕಾರದ ವಿರುದ್ಧ ರಸ್ತೆಗಳಲ್ಲಿ ಪ್ರತಿಭಟನೆಗಳಲ್ಲಿ ತೊಡಗಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಕಾಶ್ಮೀರ ಪೊಲೀಸರು ಸ್ಥಳೀಯ ಗುಪ್ತಚರ ಘಟಕಗಳಿಗೆ ಸುತ್ತೋಲೆ ಹೊರಡಿಸಿರುವುದು ಭಾರೀ ಸುದ್ದಿಗೆ ಗ್ರಾಸವಾಗಿತ್ತು.ಪೊಲೀಸ್ ದಾಖಲೆಗಳ ಪ್ರಕಾರ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಚಟುವಟಿಕೆಯ ಆರೋಪಗಳು ಕಂಡುಬಂದರೆ, ಅಂತಹವರಿಗೆ ಭದ್ರತಾ ಅನುಮತಿ ನೀಡಬಾರದು. ಅಂದರೆ, ಕ್ರಿಮಿನಲ್ ಪ್ರಕರಣವಿದ್ದರೆ, ಪಾಸ್‌ಪೋರ್ಟ್ ನೀಡಲಾಗುವುದಿಲ್ಲ ಅಥವಾ ಸರ್ಕಾರಿ ಉದ್ಯೋಗ ಸಿಗುವುದಿಲ್ಲ.ಕಾಶ್ಮೀರ ಪೊಲೀಸರ ಈ ಸುತ್ತೋಲೆಯ ಮರ್ಮವೇನು..? ವ್ಯಕ್ತಿ ಕ್ರಿಮಿನಲ್ ಪ್ರಕರಣ ಹೊಂದಿದ್ದರೆ ವಿದೇಶಕ್ಕೆ ಹೋಗಲು ಅನುಮತಿ ಸಿಗಲ್ಲವೇ..? ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಆರೋಪವು ಆ ವ್ಯಕ್ತಿ ಸರ್ಕಾರಿ ನೌಕರಿ ಪಡೆಯುವುದನ್ನು ತಡೆಯಬಹುದೇ..? ಈ ನಿಟ್ಟಿನಲ್ಲಿ ಕಾನೂನು ಏನು ಹೇಳುತ್ತದೆ..?ಪಾಸ್‌ಪೋರ್ಟ್‌ ಪ್ರಾಧಿಕಾರವು ವ್ಯಕ್ತಿಗೆ ಸಕಾರಣವಿಲ್ಲದೆ ಪಾಸ್‌ಪೋರ್ಟ್‌ ನಿರಾಕರಿಸಬಹುದೇ..? ಭಾರತೀಯ ಪಾಸ್‌ಪೋರ್ಟ್ ಕಾಯ್ದೆ 1967 ರ ಸೆಕ್ಷನ್ 6(2) ಪ್ರಕಾರ, ಪಾಸ್‌ಪೋರ್ಟ್ ನೀಡುವುದನ್ನು ನಿರಾಕರಿಸುವ ಹಕ್ಕು ಪಾಸ್‌ಪೋರ್ಟ್ ಅಧಿಕಾರಿಗೆ ಇದೆ.ಅದಕ್ಕೆ ನೀಡಬಬಹುದಾದ ಸಕಾರಣಗಳು ಎಂದರೆ,


1) ಅರ್ಜಿದಾರರು ಭಾರತದ ಪ್ರಜೆ ಅಲ್ಲದಿದ್ದರೆ


2) ಅರ್ಜಿದಾರರು ಭಾರತದ ಹೊರಗಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ,


3) ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ವಿರುದ್ಧವಾಗಿದ್ದರೆ ಅಥವಾ ಅರ್ಜಿದಾರರು ವಿದೇಶಕ್ಕೆ ತೆರಳುವುದು ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದರೆ


4) ಆ ವ್ಯಕ್ತಿ ವಿದೇಶದಲ್ಲಿದ್ದರೆ, ಬೇರೆ ಯಾವುದೇ ದೇಶದೊಂದಿಗಿನ ಭಾರತದ ಸ್ನೇಹ ಸಂಬಂಧಗಳು ಕೆಟ್ಟದಾಗಿ ಪರಿಣಾಮ ಬೀರುತ್ತವೆ.


ಕನಿಷ್ಟ 2 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಯಾವುದೇ ಅಪರಾಧವನ್ನು 5 ವರ್ಷಗಳಲ್ಲಿ ಸಾಬೀತುಪಡಿಸಿದರೆ ಪಾಸ್‌ಪೋರ್ಟ್ ನೀಡಲಾಗುವುದಿಲ್ಲ. ಅರ್ಜಿದಾರರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಬಾಕಿ ಇದ್ದರೂ, ಪಾಸ್‌ಪೋರ್ಟ್ ಅರ್ಜಿಯನ್ನು ತಿರಸ್ಕರಿಸಬಹುದು.ಪಾಸ್‌ಪೋರ್ಟ್ ಅರ್ಜಿ ಕ್ರಿಮಿನಲ್ ಪ್ರಕರಣದ ಆಧಾರದಲ್ಲಿ ತಿರಸ್ಕರಿಸಿದ್ದರೆ, ಆಗ ಯಾವುದೇ ಕಾನೂನು ಮಾರ್ಗಗಳು ಉಳಿದಿವೆಯೇ..?


1993ರಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಸ್‌ಪೋರ್ಟ್ ಕಾಯಿದೆಯ ಸೆಕ್ಷನ್ 22ರ ಕುರಿತು ಒಂದು ಅಧಿಸೂಚನೆ ಹೊರಡಿಸಿತ್ತು. ಒಂದು ನಿರ್ದಿಷ್ಟ ಅವಧಿಗೆ ಯಾವುದೇ ವ್ಯಕ್ತಿ ಯಾ ಗುಂಪಿಗೆ ಪಾಸ್‌ಪೋರ್ಟ್‌ಗಳನ್ನು ನೀಡಲು ಈ ಅಧಿಸೂಚನೆ ಅನುಮತಿಸುತ್ತದೆ.

ಅಪರಾಧ ಪ್ರಕರಣಗಳು ಬಾಕಿ ಇರುವ ಜನರಿಗೆ ಈ ಅಧಿಸೂಚನೆಯು ಒಂದು ರಿಲೀಫ್ ನೀಡಿದೆ. ಈ ಅಧಿಸೂಚನೆ ಪ್ರಕಾರ, ನ್ಯಾಯಾಲಯದಿಂದ ಅನುಮತಿ ಪಡೆದರೆ, ಯಾ ಅರ್ಜಿದಾರರಿಗೆ ಪಾಸ್‌ಪೋರ್ಟ್ ಅಥವಾ ವೀಸಾ ನೀಡಲಾಗುತ್ತದೆ. ಆದರೆ, ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ನಿಗದಿತ ಅವಧಿಗೆ ಪಾಸ್‌ಪೋರ್ಟ್‌ ನೀಡುತ್ತವೆ. ಒಂದು ವೇಳೆ, ಕೋರ್ಟ್‌ ಆದೇಶದಲ್ಲಿ ನಿರ್ದಿಷ್ಟ ಅವಧಿ ಇಲ್ಲದಿದ್ದರೆ, ಪಾಸ್‌ಪೋರ್ಟ್ ಅನ್ನು ಒಂದು ವರ್ಷದ ವರೆಗೆ ನೀಡಲಾಗುತ್ತದೆ.


ಅಪರಾಧಿಗೆ ಪಾಸ್‌ಪೋರ್ಟ್‌?: ಅಧಿಸೂಚನೆ ಕುರಿತು ನ್ಯಾಯಾಲಯದ ನಿಲುವು ಇದು...


ವಿದೇಶಾಂಗ ಇಲಾಖೆಯ 1993ರ ಅಧಿಸೂಚನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂತು. ಜನವರಿ 2016ರಲ್ಲಿ ದೆಹಲಿ ಹೈಕೋರ್ಟ್ ಈ ಅಧಿಸೂಚನೆ ಎತ್ತಿಹಿಡಿಯಿತು. ಆದೇಶದಲ್ಲಿ ಕಾಯ್ದೆಯ ಸೆಕ್ಷನ್ 6 (2) (ಎಫ್) ಅನ್ನೂ ಎತ್ತಿಹಿಡಿಯಿತು. ಜೊತೆಗೆ ಅರ್ಜಿದಾರ ವ್ಯಕ್ತಿಯ ಬಾಕಿ ಇರುವ ಕ್ರಿಮಿನಲ್ ಪ್ರಕರಣದಲ್ಲಿ ಪಾಸ್‌ಪೋರ್ಟ್ ನಿರಾಕರಿಸುವ ಪಾಸ್‌ಪೋರ್ಟ್‌ ಅಧಿಕಾರಿಯ ಹಕ್ಕನ್ನು ಪುನರುಚ್ಚರಿಸಿತು.


ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿದಾರ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದರು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರು. ಕಾಗ್ನಿಸಿಬಲ್ ಮತ್ತು ನಾನ್-ಕಾಗ್ನಿಸಿಬಲ್ ಅಪರಾಧಗಳು ಅಥವಾ ಜಾಮೀನು ಮತ್ತು ಜಾಮೀನು ರಹಿತ ಅಪರಾಧಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬುದು ಅವರ ವಾದ. ಪ್ರಶಾಂತ್ ಭೂಷಣ್ ವಾದ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಒಂದು ವರ್ಷದ ಅವಧಿಗೆ ಪಾಸ್‌ಪೋರ್ಟ್‌ ನೀಡುವ 1993ರ ಅಧಿಸೂಚನೆಯನ್ನು ಬದಲಿಸುವಂತೆ ತೀರ್ಪು ನೀಡಿತು.


ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದರೆ ಸರ್ಕಾರಿ ಕೆಲಸ ಸಿಗುವುದಿಲ್ಲವೇ..?

ಸರ್ಕಾರಿ ಉದ್ಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿದಾರರ ನಡತೆಯ ಸ್ವಯಂ ಘೋಷಿತ ಪ್ರಮಾಣಪತ್ರ ಪಡೆಯುವ ಕ್ರಮ ನಡೆದುಕೊಂಡು ಬರುತ್ತಿದೆ. ಸರ್ಕಾರಿ ಸೇವೆಗೆ ಸೇರಬಯಸುವ ವ್ಯಕ್ತಿಯ ಗುಣವೇನು ಎಂದು ನೋಡಲಾಗುತ್ತದೆ.ಸರ್ಕಾರಿ ಸೇವೆ ಸೇರಬಯಸುವವರು, ಸಾಮಾನ್ಯವಾಗಿ ತಮ್ಮ ನಡತೆಯ ಸ್ವತಃ ಪ್ರಮಾಣಪತ್ರ ನೀಡಬೇಕು. ಆ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿದಾರರಿಗೆ ಒಂದು 'ನಮೂನೆ'(Form) ತುಂಬಲು ಕೇಳಲಾಗುತ್ತದೆ ಮತ್ತು ಅವರನ್ನು ಈ ಹಿಂದೆ ಬಂಧಿಸಲಾಗಿದೆಯೇ ಅಥವಾ ವಶಕ್ಕೆ ಪಡೆಯಲಾಗಿದೆಯೇ ಎಂಬ ಪ್ರಶ್ನೆ ಇರುತ್ತದೆ.ಅದೇ ರೀತಿ, ಅವರು ಯಾವುದೇ ಅಪರಾಧ ಕೇಸ್‌ನಲ್ಲಿ ಶಿಕ್ಷೆ ಆಗಿದೆಯೇ..? ಅರ್ಜಿದಾರರು ತಮ್ಮ ವಿರುದ್ಧ ದಾಖಲಾದ ಪ್ರಕರಣದ ಮಾಹಿತಿಯೇ ನೀಡುತ್ತಾರೆ.ಒಬ್ಬ ವ್ಯಕ್ತಿ ಅಪರಾಧಿಕ ಹಿನ್ನೆಲೆ ಹೊಂದಿದ್ದರೆ, ಈ ಆಧಾರದ ಮೇಲೆ ಅರ್ಜಿಯನ್ನು ತಮ್ಮಷ್ಟಕ್ಕೆ ರದ್ದುಪಡಿಸಲು ಬರುವುದಿಲ್ಲ. ಅರ್ಜಿದಾರರು ತಮ್ಮ ವಿರುದ್ಧದ ಕೇಸ್‌ನ್ನು ರದ್ದುಗೊಳಿಸಲು ಇದನ್ನು ಬಳಸಬಹುದು. ಆದರೆ, ಇತ್ತೀಚಿನ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶಗಳ ಪ್ರಕಾರ, ಕ್ರಿಮಿನಲ್ ದಾಖಲೆ ಹೊಂದಿರುವ ಅರ್ಜಿದಾರರನ್ನು ನೇಮಿಸಿಕೊಳ್ಳಲು ಯಾರನ್ನೂ ಒತ್ತಾಯಿಸುವಂತಿಲ್ಲ,


ಯಾವುದೇ ನೌಕರನ ನೇಮಕಾತಿ ಕುರಿತ ತಗಾದೆ ಇದ್ದರೆ ವಿಚಾರಣೆ ನಡೆದು ಆ ಪ್ರಕರಣದ ತೀರ್ಪು ಬರಲು ಸಾಕಷ್ಟು ಸಮಯ ಬೇಕಾಗಬಹುದು. ಪ್ರಕರಣ ಇತ್ಯರ್ಥಕ್ಕೆ ಸುದೀರ್ಘ ಸಮಯ ತೆಗೆದುಕೊಂಡರೆ, ವಾಸ್ತವಾಂಶಗಳನ್ನು ಸಾಬೀತುಪಡಿಸಲು ತನಿಖೆ ಅಗತ್ಯವಾಗಬಹುದು. ಉದ್ಯೋಗಿಯು ವಾಸ್ತವ ಸತ್ಯವನ್ನು ಮರೆ ಮಾಚಿದ್ದರೆ ಮತ್ತು ಈ ಆಧಾರದ ಮೇಲೆ ಅವರ ಸೇವೆಯನ್ನು ಮೊಟಕುಗೊಳಿಸಬಹುದು.ಸುಪ್ರೀಂ ಕೋರ್ಟ್ 'ಅವತಾರ್ ಸಿಂಗ್ Vs ಯೂನಿಯನ್ ಆಫ್ ಇಂಡಿಯಾ (2016)ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಹಲವು ದಶಕಗಳಲ್ಲಿ ನೀಡಲಾದ ಹಲವಾರು ತೀರ್ಪುಗಳನ್ನು ಸಂಕ್ಷಿಪ್ತ ರೂಪವನ್ನು ಈ ತೀರ್ಪು ಹೊಂದಿದೆ ಎಂದರೆ ತಪ್ಪಾಗಲಾರದು. Article by SKS advocate, Mangaluru

for feedback: courtbeatnews@gmail.com

Ads on article

Advertise in articles 1

advertising articles 2

Advertise under the article