-->
ಗರ್ಭಪಾತಕ್ಕೆ ಪತಿ ಒತ್ತಾಯ ಮಾಡಿದರೆ ಅದು ರೇಪ್‌ಗೆ ಸಮಾನ: ಸುಪ್ರೀಂ ಕೋರ್ಟ್‌

ಗರ್ಭಪಾತಕ್ಕೆ ಪತಿ ಒತ್ತಾಯ ಮಾಡಿದರೆ ಅದು ರೇಪ್‌ಗೆ ಸಮಾನ: ಸುಪ್ರೀಂ ಕೋರ್ಟ್‌

ಗರ್ಭಪಾತಕ್ಕೆ ಪತಿ ಒತ್ತಾಯ ಮಾಡಿದರೆ ಅದು ರೇಪ್‌ಗೆ ಸಮಾನ: ಸುಪ್ರೀಂ ಕೋರ್ಟ್‌

ಗರ್ಭಪಾತಕ್ಕೆ ಪತಿ ಒತ್ತಾಯಿಸಿದರೆ ಅದು ಗರ್ಭಪಾತಕ್ಕೆ ಸಮಾನ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ಕಾನೂನು ಬದ್ಧವಾಗಿ ಮದುವೆ ಆಗಿದ್ದರೂ, ಮಗು ಬೇಡವೆಂದು ಪತ್ನಿಯನ್ನು ಗರ್ಭಪಾತ ಮಾಡಲು ಗಂಡ ಒತ್ತಾಯಿಸಿದರೆ ಅದನ್ನು ರೇಪ್ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ನ್ಯಾಯಪೀಠ ಮಹತ್ವದ ಆದೇಶ ಮಾಡಿದೆ.ಇಂತಹ ಪ್ರಕರಣಗಳಲ್ಲಿ Medical Termination of Pregnency (MTP) ಕಾಯ್ದೆ ಪ್ರಕಾರ ಗಂಡನ ವಿರುದ್ಧವೂ ಅತ್ಯಾಚಾರ ಕೇಸು ದಾಖಲು ಮಾಡಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.


ಪ್ರಕರಣ: ಎಕ್ಸ್ (ಅನಾಮಿಕ ವ್ಯಕ್ತಿ) ಮತ್ತು ದೆಹಲಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ

ಸುಪ್ರೀಂ ಕೋರ್ಟ್, 5802/2022 Dated 29-09-2022


ಮಗುವಿಗಾಗಿ ಆಸೆ ಪಡದೆ, ಅಸಮ್ಮತಿಯಿಂದ ಲೈಂಗಿಕ ಕಿರುಕುಳ ನೀಡುವುದನ್ನು ಅತ್ಯಾಚಾರ ಎನ್ನಬಹುದು. ಈ ವಿಚಾರದಲ್ಲಿ ಮದುವೆಯಾದ ಮಹಿಳೆ, ಅವಿವಾಹಿತ ಮಹಿಳೆ ಎನ್ನುವ ಭೇದ ಮಾಡುವಂತಿಲ್ಲ. ಇಲ್ಲಿ ಮಹಿಳೆಯ ಹಕ್ಕುಗಳನ್ನು ಗೌರವಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದ ನ್ಯಾಯಪೀಠ, ಭಾರತದಲ್ಲಿ ಎಲ್ಲ ಮಹಿಳೆಯರು ಕೂಡ ಅಬಾರ್ಶನ್ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಂಪೂರ್ಣ ಸ್ವತಂತ್ರಳು ಎಂದು ಸ್ಪಷ್ಟಪಡಿಸಿದೆ.ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಪತಿಯ ಲೈಂಗಿಕ ಕಿರುಕುಳವನ್ನೂ ಅಪರಾಧ ಎಂದು ಪರಿಗಣಿಸುವಂತೆ ಕೇಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಂತದಲ್ಲಿದೆ. ಇದೇ ರೀತಿಯ ಮತ್ತೊಂದು ಅರ್ಜಿ ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿದೆ.IPC ಸೆಕ್ಷನ್ 375 ಪ್ರಕಾರ, ಪತಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗದು ಎಂದು ಹೇಳುತ್ತದೆ. ಆ ಕಾಯ್ದೆಯಲ್ಲಿ ಗಂಡನಿಗೆ ಲೈಂಗಿಕ ಅಪರಾಧದಿಂದ ರಕ್ಷಣೆ ನೀಡುತ್ತದೆ. ಇದೇ ವಿಚಾರದಲ್ಲಿ ಸುಪ್ರೀಂ ಕೋರ್ಟಿಗೆ ಹಲವು ಪಿಐಎಲ್ ಸಲ್ಲಿಕೆಯಾಗಿದೆ. IPC ಸೆಕ್ಷನ್ 375 ಪ್ರಕಾರ, ಮೋಸದಿಂದ, ಆಮಿಷವೊಡ್ಡಿ ಅಥವಾ ಮಹಿಳೆಗೆ ತಿಳಿಯದಂತೆ ಬಲವಂತದಿಂದ ಲೈಂಗಿಕ ಸಂಬಂಧ ನಡೆಸಿದರೆ ಅತ್ಯಾಚಾರವಾಗುತ್ತದೆ. ಪತ್ನಿ ಎನ್ನುವುದು ಸುದೀರ್ಘ ಸಂಬಂಧ ಆಗಿರುವುದರಿಂದ ಈ ಕಾಯ್ದೆಯಡಿ ಆಕೆಯ ಮೇಲಿನ ಲೈಂಗಿಕ ಕಿರುಕುಳ ಅತ್ಯಾಚಾರ ಎಂದಾಗುವುದಿಲ್ಲ ಎಂಬ ವಾದವನ್ನು ವಕೀಲರು ಮಾಡಿದ್ದರು.ಡಾ. ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಈ ಕುರಿತ ಅರ್ಜಿಯಲ್ಲಿ MTP ಕಾಯ್ದೆ ಪ್ರಕಾರ, ಯಾವುದೇ ಮಹಿಳೆ 24 ವಾರಗಳ ವರೆಗಿನ ಭ್ರೂಣವನ್ನು ಅಬಾರ್ಶನ್ ಮೂಲಕ ತೆಗೆಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಹಕ್ಕು ಹೊಂದಿದ್ದಾಳೆ. ಅದಕ್ಕೆ ಮದುವೆಯಾಗಿರಬೇಕು, ಮದುವೆಯಾಗದಿರುವುದು ಮಾನದಂಡ ಅಲ್ಲ. ಬೇಡದ ಮಗು ಎಂದಾಗಿದ್ದರೆ, ಅದರಲ್ಲಿ ಬಲವಂತದ ಸೆಕ್ಸ್ ಎಂದು ಪರಿಗಣಿತವಾದಲ್ಲಿ ಅತ್ಯಾಚಾರ ದೂರು ನೀಡವುದಕ್ಕೂ ಆಸ್ಪದವಿರುತ್ತದೆ ಎಂದು ತೀರ್ಪು ನೀಡಿದೆ.

Ads on article

Advertise in articles 1

advertising articles 2

Advertise under the article