-->
ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ: ಸ್ಟೇಟ್‌ ಬ್ಯಾಂಕಿಗೆ ದಂಡದ ಬರೆ- ಗ್ರಾಹಕರ ಆಯೋಗದ ಆದೇಶ

ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ: ಸ್ಟೇಟ್‌ ಬ್ಯಾಂಕಿಗೆ ದಂಡದ ಬರೆ- ಗ್ರಾಹಕರ ಆಯೋಗದ ಆದೇಶ

ಕನ್ನಡದಲ್ಲಿ ಬರೆದ ಚೆಕ್ ಅಮಾನ್ಯ: ಸ್ಟೇಟ್‌ ಬ್ಯಾಂಕಿಗೆ ದಂಡದ ಬರೆ- ಗ್ರಾಹಕರ ಆಯೋಗದ ಆದೇಶ

ಕನ್ನಡ ಭಾಷೆಯಲ್ಲಿ ಚೆಕ್‌ ಬರೆಯಲಾಗಿದೆ ಎಂಬ ಕಾರಣಕ್ಕೆ ಚೆಕ್‌ಅನ್ನು ಅಮಾನ್ಯ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಳಿಯಾಳ ಶಾಖೆಗೆ ತಕ್ಕ ಶಾಸ್ತಿಯಾಗಿದೆ. ಗ್ರಾಹಕರ ದೂರನ್ನು ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ತಪ್ಪಿತಸ್ಥ ಬ್ಯಾಂಕಿಗೆ ಬರೋಬ್ಬರಿ ರೂ. 85,177 ದಂಡ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.ಧಾರವಾಡದ ಇಂಗ್ಲಿಷ್ ಪ್ರಾಧ್ಯಾಪಕ ವಾದಿರಾಜಾಚಾರ್ಯ ಇನಾಮದಾರ ಎಂಬುವರು ಪ್ರಕರಣದಲ್ಲಿ ದೂರುದಾರರು. ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ದೂರುದಾರರು ತಮ್ಮ ಉಳಿತಾಯ ಖಾತೆಯಲ್ಲಿ 9 ಲಕ್ಷ ರೂ.ಗಿಂತಲೂ ಅಧಿಕ ಹಣ ಜಮೆಯಾಗಿದ್ದು, ಕೇವಲ 6 ಸಾವಿರ ರೂ. ಮೌಲ್ಯಕ್ಕೆ ಚೆಕ್ ನೀಡಿದ್ದರು.ಆದರೆ, ಈ ಚೆಕ್​ಅನ್ನು ಮಾನ್ಯ ಮಾಡಲು ಎಸ್‌ಬಿಐ ನಿರಾಕರಿಸಿತ್ತು. ಇದರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.ಕನ್ನಡ ಭಾಷೆಯಲ್ಲಿ ಚೆಕ್ ಬರೆಯಲಾಗಿದೆ ಎಂಬ ಕಾರಣಕ್ಕಾಗಿ ಅಮಾನ್ಯ ಮಾಡಿರುವುದಾಗಿ ಎಸ್‌ಬಿಐ ಹೇಳಿತ್ತು. ಇದು ಗ್ರಾಹಕರ ವಿರುದ್ಧ ನಡೆದ ಸೇವಾ ನ್ಯೂನ್ಯತೆ ಎಂದು ಗ್ರಾಹಕರ ಆಯೋಗ ಪರಿಗಣಿಸಿದೆ.ಈ ಲೋಪಕ್ಕಾಗಿ ಎಸ್‌ಬಿಐ ಹಳಿಯಾಳ ಶಾಖೆಗೆ ದಂಡ ವಿಧಿಸಿ ಗ್ರಾಹಕರ ಆಯೋಗ ತೀರ್ಪು ನೀಡಿದೆ. ದೂರುದಾರರಿಗೆ ಪರಿಹಾರ ಮತ್ತು ದಂಡ ರೂಪದಲ್ಲಿ ಒಟ್ಟು 85,177 ರೂ ಗಳನ್ನು ಪಾವತಿಸುವಂತೆ ಅದು ಆದೇಶಿಸಿದೆ.ಬ್ಯಾಂಕ್‌ಗಳಲ್ಲಿ ತ್ರಿಭಾಷಾ ಸೂತ್ರದ ಬಳಕೆ ನಿಯಮಾನುಸಾರ ಸ್ಥಳೀಯ ಭಾಷಾ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ನೀಡಿರುವ ತೀರ್ಪು ವಿಶೇಷ ಹಾಗೂ ಮಹತ್ವದ್ದೆನಿಸಿದೆ.ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಈ ತೀರ್ಪು ನೀಡಿದ್ದಾರೆ.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200