-->
ದೀಪಾವಳಿ ನೆಪದಲ್ಲಿ ಪತ್ರಕರ್ತರಿಗೆ ಲಕ್ಷಗಟ್ಟಲೆ ಲಂಚ: ಸಿಎಂ, ಸಿಎಂ ಮೀಡಿಯಾ ಸೆಕ್ರೆಟರಿ ವಿರುದ್ಧ ಲೋಕಾಯುಕ್ತಕ್ಕೆ ದೂರು!

ದೀಪಾವಳಿ ನೆಪದಲ್ಲಿ ಪತ್ರಕರ್ತರಿಗೆ ಲಕ್ಷಗಟ್ಟಲೆ ಲಂಚ: ಸಿಎಂ, ಸಿಎಂ ಮೀಡಿಯಾ ಸೆಕ್ರೆಟರಿ ವಿರುದ್ಧ ಲೋಕಾಯುಕ್ತಕ್ಕೆ ದೂರು!

ದೀಪಾವಳಿ ನೆಪದಲ್ಲಿ ಪತ್ರಕರ್ತರಿಗೆ ಲಕ್ಷಗಟ್ಟಲೆ ಲಂಚ: ಸಿಎಂ, ಸಿಎಂ ಮೀಡಿಯಾ ಸೆಕ್ರೆಟರಿ ವಿರುದ್ಧ ಲೋಕಾಯುಕ್ತಕ್ಕೆ ದೂರು!

ಮೊದಲೇ 40 ಪರ್ಸೆಂಟ್ ಸಿಎಂ ಎಂಬ ಕುಖ್ಯಾತಿಗೆ ಒಳಗಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಮತ್ತೊಂದು ಅಪಖ್ಯಾತಿಗೆ ಒಳಗಾಗಿದ್ದಾರೆ. ಬೆಳಕಿನ ಹಬ್ಬ ದೀಪಾವಳಿ ನೆಪದಲ್ಲಿ ಪತ್ರಕರ್ತರಿಗೆ ಸಿಹಿ ತಿಂಡಿ ಹಾಗೂ ಲಕ್ಷ ರೂಪಾಯಿಗಳನ್ನು ಲಂಚವಾಗಿ ನೀಡಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ಬಂದಿದೆ.ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್‌ ಲೋಕಾಯುಕ್ತರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಇಮೇಲ್ ಮೂಲಕ ದೂರು ನೀಡಿದ್ದು, ಸೂಕ್ತ ಕಾನೂನು ಕ್ರಮ ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.ಬಹುತೇಕ ಎಲ್ಲ ಪತ್ರಕರ್ತರಿಗೆ 'ಸಿಹಿ ತಿನಿಸು'ಗಳ ಪೊಟ್ಟಣ ಜೊತೆ ಒಂದು ಲಕ್ಷ ರೂಪಾಯಿಯನ್ನು ದೀಪಾವಳಿ ಉಡುಗೊರೆಯನ್ನಾಗಿ ನೀಡಲಾಗಿತ್ತು. ಅದರಂತೆಯೇ, Deccan Herald ಮುಖ್ಯ ವರದಿಗಾರ ಭರತ್‌ ಜೋಶಿ ಅವರಿಗೂ 'ಸಿಹಿ ತಿನಿಸು'ಗಳ ಪೊಟ್ಟಣ ಜೊತೆ ಒಂದು ಲಕ್ಷ ರೂಪಾಯಿ ನೀಡಲಾಗಿದೆ.ಅವರ ಜೊತೆಗೆ ಪ್ರಜಾವಾಣಿ ಪತ್ರಿಕೆ ಮುಖ್ಯ ವರದಿಗಾರ ವೈ ಗ ಜಗದೀಶ್‌ ಅವರಿಗೂ ಸಿಹಿ ತಿನಿಸಿನ ಬಾಕ್ಸ್‌ ಜೊತೆಗೆ ಲಕ್ಷಗಟ್ಟಲೆ ರೂಪಾಯಿ ಲಂಚ ನೀಡಲಾಗಿದೆ. ಆ ಇಬ್ಬರು ಪ್ರಾಮಾಣಿಕ ಪತ್ರಕರ್ತರು ಪ್ರಜಾವಾಣಿ ಪತ್ರಿಕಾ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೆ ತಂದು ಮುಖ್ಯಮಂತ್ರಿಗೆ ಆ ಭ್ರಷ್ಟ ಹಣವನ್ನು ಮರಳಿಸಿದ್ದಾರೆ.ಈ ಲಂಚ ನೀಡಿದ ಘಟನೆಯನ್ನು ಖಂಡಿಸಿ ಜಗದೀಶ್ ಅವರು ಮುಖ್ಯಮಂತ್ರಿ ಖಂಡನಾ ಪತ್ರ ಬರೆದಿದ್ದಾರೆ. ಹಾಗೆಯೇ, ಮುಖ್ಯಮಂತ್ರಿಗಳ ಕಚೇರಿ ಈ ಬಗ್ಗೆ ಕ್ಷಮಾಪಣೆಯನ್ನು ಕೋರಬೇಕು ಎಂದು ಅವರು ಆಗ್ರಹಿಸಿದ್ದಾರೆ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದೆ.ದೀಪಾವಳಿ ಹಿನ್ನೆಲೆಯಲ್ಲಿ ಸಿಹಿ ಹಂಚುವ ನೆಪದಲ್ಲಿ ಸರ್ಕಾರ ಮತ್ತು ಸಿಎಂ ನೇತೃತ್ವದಲ್ಲಿ ಆಡಳಿತ ಯಂತ್ರ ನಡೆಸುತ್ತಿರುವ ಭ್ರಷ್ಟಾಚಾರವನ್ನು ವರದಿ ಮಾಡದಂತೆ ಸಂವಿಧಾನದ ನಾಲ್ಕನೇ ಅಂಗವನ್ನು ಲಕ್ಷ ಲಕ್ಷ ಹಣಕ್ಕೆ ಖರೀದಿಸುವ ಪ್ರಯತ್ನ ನಡೆದಿದೆ. ಈ ಮೂಲಕ ಸಿಎಂ ಕಚೇರಿಯನ್ನು ದುರ್ಬಳಕೆ ಮಾಡಲಾಗಿದೆ. ಮಾಧ್ಯಮಗಳನ್ನು ಸರ್ಕಾರದ ಪರವಾಗಿ ವರದಿ ಮಾಡುವಂತೆ ಪ್ರಭಾವಿಸುವ ಪ್ರಯತ್ನ ಇದಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಅದೇ ರೀತಿ, ಗಂಭೀರ ಭ್ರಷ್ಟಾಚಾರದ ಆರೋಪ, ದುರಾಡಳಿತ, ಸಾರ್ವಜನಿಕ ಹಣದ ದುರ್ಬಳಕೆ ಆರೋಪಗಳನ್ನು ಮುಚ್ಚಿ ಹಾಕುವ ಪ್ರಯತ್ನದ ಭಾಗವಾಗಿ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.


ಲೋಕಾಯುಕ್ತರಿಗೆ ನೀಡಿದ ದೂರಿನ ಇನ್ನೊಂದು ಪ್ರತಿಯನ್ನು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೂ ಸಲ್ಲಿಸಲಾಗಿದೆ.

Ads on article

Advertise in articles 1

advertising articles 2

Advertise under the article