-->
ವಕೀಲರ ವಿರುದ್ಧದ ದೂರುಗಳ ಇತ್ಯರ್ಥಕ್ಕೆ ಕಾಲಮಿತಿ: ಬಿಸಿಐಗೆ ಗಡುವು ನೀಡಿದ ಸುಪ್ರೀಂ ಕೋರ್ಟ್

ವಕೀಲರ ವಿರುದ್ಧದ ದೂರುಗಳ ಇತ್ಯರ್ಥಕ್ಕೆ ಕಾಲಮಿತಿ: ಬಿಸಿಐಗೆ ಗಡುವು ನೀಡಿದ ಸುಪ್ರೀಂ ಕೋರ್ಟ್

ವಕೀಲರ ವಿರುದ್ಧದ ದೂರುಗಳ ಇತ್ಯರ್ಥಕ್ಕೆ ಕಾಲಮಿತಿ: ಬಿಸಿಐಗೆ ಗಡುವು ನೀಡಿದ ಸುಪ್ರೀಂ ಕೋರ್ಟ್

ವಕೀಲರ ವಿರುದ್ಧದ ದೂರುಗಳನ್ನು ಇತ್ಯರ್ಥ ಮಾಡುವ ಸಕ್ಷಮ ಪ್ರಾಧಿಕಾರವಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಇತ್ಯರ್ಥಕ್ಕೆ ಬಾಕಿ ಇರುವ ವಕೀಲರ ವಿರುದ್ಧದ ದೂರುಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.ತನ್ನ ವ್ಯಾಪ್ತಿಯಲ್ಲಿ ಇರುವ ವಕೀಲರ ವಿರುದ್ಧದ ದೂರುಗಳನ್ನು ಡಿಸೆಂಬರ್ 31 ರೊಳಗೆ ವಿಲೇವಾರಿ ಮಾಡುವಂತೆ ಸುಪ್ರೀಂ ಕೋರ್ಟ್ ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ)ಕ್ಕೆ ಸೂಚಿಸಿದೆ.2021 ರ ಡಿಸೆಂಬರ್ 17ರಂದು ಸುಪ್ರೀಂ ಕೋರ್ಟ್‌ನ ಆದೇಶದ ವಿರುದ್ಧ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ.ಆರ್. ಷಾ ಮತ್ತು ಕೃಷ್ಣ ಮುರಾರಿ ಅವರ ನೇತೃತ್ವದ ಪೀಠ ಈ ನಿರ್ದೇಶನ ನೀಡಿದೆ.ವಕೀಲ ವೃತ್ತಿಯ ಪರಿಶುದ್ಧತೆ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ಅದರಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ಏನು ಬೇಕಾದರೂ ಮಾಡಿ ಎಂದು ಬಿಸಿಐ ಅಧ್ಯಕ್ಷ ಮನನ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.ದುರ್ನಡತೆ, ಅಕ್ರಮ ಅಥವಾ ದುಷ್ಕೃತ್ಯದಲ್ಲಿ ತೊಡಗಿಕೊಂಡ ಬಗ್ಗೆ ವಕೀಲರ ವಿರುದ್ಧದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಶಿಕ್ಷಿಸಬೇಕು. ಇಲ್ಲದಿದ್ದರೆ ಅವರನ್ನು ದೋಷಮುಕ್ತಗೊಳಿಸಬೇಕು. ಒಟ್ಟಿನಲ್ಲಿ ಪ್ರಕರಣ ಇತ್ಯರ್ಥವಾಗಬೇಕು. ಆದರೆ, ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳು ರಾಶಿಯಾಗಬಾರದು ಎಂದು ನ್ಯಾಯಪೀಠ ತಿಳಿಸಿದೆ.ವಿಚಾರಣಾ ಪ್ರಕ್ರಿಯೆಯನ್ನು ಕ್ಷಿಪ್ರಗೊಳಿಸಲು ಬೇಕಾದ ಅಗತ್ಯ ವಿಚಾರಣಾ ಅಧಿಕಾರಿಗಳನ್ನು ನೇಮಿಸಲು ಸಕ್ಷಮ ಪ್ರಾಧಿಕಾರ ಸ್ವತಂತ್ರವಾಗಿದೆ ಎಂದು ಸುಪ್ರೀಂ ಕೋರ್ಟ್ BCI ಗೆ ಅನುಮತಿ ನೀಡಿದೆ.


ವಕೀಲರ ವಿರುದ್ಧದ ದಾಖಲಾಗುವ ದೂರುಗಳನ್ನು ವಿಲೇವಾರಿ ಮಾಡಲು ರಾಜ್ಯ ಬಾರ್ ಕೌನ್ಸಿಲ್‌ಗಳಲ್ಲಿ ಸರ್ಕ್ಯೂಟ್ ಬೆಂಚ್‌ಗಳನ್ನು ಹೊಂದಿರಬೇಕೆಂಬ BCI ಮನವಿಗೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, BCI ವಕೀಲ ವೃತ್ತಿಯಲ್ಲಿ ಮೌಲ್ಯ, ವೃತ್ತಿಗೌರವ, ಬದ್ಧತೆ ಮತ್ತು ಶಿಸ್ತು ಕಾಪಾಡುವ ಪ್ರಾಧಿಕಾರ. ಹಾಗಾಗಿ, ವಕೀಲರ ವಿರುದ್ಧದ ದೂರುಗಳನ್ನು ನಿರ್ವಹಿಸುವ ಜವಾಬ್ದಾರಿ BCI ಮೇಲಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಇತ್ಯರ್ಥವಾಗಲೀ ಬಿಡಲಿ ಒಂದು ವರ್ಷದ ಹಳೆಯ ದೂರುಗಳನ್ನು ರಾಜ್ಯ ಬಾರ್ ಕೌನ್ಸಿಲ್‌ಗಳು ಬಿಸಿಸಿಐಗೆ ವರ್ಗಾಯಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ.


ಇದನ್ನೂ ಓದಿ

ಅತ್ಯಂತ ಭ್ರಷ್ಟ ಎನಿಸಿದ್ದ ತಹಶೀಲ್ದಾರ್ ಜೈಲಿಗೆ: ಸ್ಟೇಟಸ್ ಹಾಕಿಕೊಂಡು ಸಂಭ್ರಮ ಪಟ್ಟ ಮಂಗಳೂರು ವಕೀಲರು


Ads on article

Advertise in articles 1

advertising articles 2

Advertise under the article