-->
ಕೋರ್ಟ್ ಮುಖ್ಯ ದ್ವಾರ ನ್ಯಾಯಾಧೀಶರಿಗೆ ಮೀಸಲು: ಮಂಗಳೂರಲ್ಲಿ ಬಾರ್ & ಬೆಂಚ್ ತಿಕ್ಕಾಟ?- ವಕೀಲರ ಆಕ್ರೋಶಕ್ಕೆ ಬೋರ್ಡ್ ಮಿಸ್ಸಿಂಗ್‌!

ಕೋರ್ಟ್ ಮುಖ್ಯ ದ್ವಾರ ನ್ಯಾಯಾಧೀಶರಿಗೆ ಮೀಸಲು: ಮಂಗಳೂರಲ್ಲಿ ಬಾರ್ & ಬೆಂಚ್ ತಿಕ್ಕಾಟ?- ವಕೀಲರ ಆಕ್ರೋಶಕ್ಕೆ ಬೋರ್ಡ್ ಮಿಸ್ಸಿಂಗ್‌!

ಕೋರ್ಟ್ ಮುಖ್ಯ ದ್ವಾರ ನ್ಯಾಯಾಧೀಶರಿಗೆ ಮೀಸಲು: ಮಂಗಳೂರಲ್ಲಿ ಬಾರ್ & ಬೆಂಚ್ ತಿಕ್ಕಾಟ?- ವಕೀಲರ ಆಕ್ರೋಶಕ್ಕೆ ಬೋರ್ಡ್ ಮಿಸ್ಸಿಂಗ್‌!


ಮಂಗಳೂರು ನ್ಯಾಯಾಲಯ ಸಂಕೀರ್ಣದ ಮುಖ್ಯ ದ್ವಾರವನ್ನು ಕೇವಲ ನ್ಯಾಯಾಧೀಶರ ಪ್ರವೇಶಕ್ಕೆ ಮೀಸಲಿಡಬೇಕು ಎಂಬ ವಿವಾದಿತ ಪೋಸ್ಟರ್ ಭಾರೀ ಸುದ್ದಿ ಮಾಡಿದೆ.ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ನಿರ್ದೇಶನದ ಮೇರೆಗೆ ಈ ಪೋಸ್ಟರ್ ಅಂಟಿಸಲಾಗಿದ್ದು, ಮುಖ್ಯ ಪ್ರವೇಶ ದ್ವಾರವನ್ನು ವಕೀಲರು ಮತ್ತು ಕಕ್ಷಿದಾರರಿಗೆ ನಿರ್ಬಂಧಿಸಲಾಗಿದೆ ಎಂಬ ಸೂಚನೆ ರವಾನಿಸಿತ್ತು.ಇದರಿಂದ ವಕೀಲರ ಸಮುದಾಯ ಕೆಂಡಾಮಂಡಲ ಶನಿವಾರ ಮತ್ತು ಭಾನುವಾರ ಬಿಸಿ ಬಿಸಿ ಚರ್ಚೆ ನಡೆದಿದ್ದು, ಪ್ರತಿಭಟನೆಗೂ ಮುಂದಾಗಿದೆ.ಮಂಗಳೂರು ವಕೀಲರ ಸಂಘದ ನಿಯೋಗ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ನಡೆಸಿತ್ತು. ಈ ಸಭೆಯಲ್ಲಿ ವಕೀಲರ ಸಭೆಗೆ ಅನುಮತಿಸಲಾಯಿತಾದರೂ ಪೋಸ್ಟರ್ ತೆಗೆಯಲು ಸಮ್ಮತಿಸಲಿಲ್ಲ.ಈ ಹಿನ್ನೆಲೆಯಲ್ಲಿ ಮಂಗಳವಾರ ವಕೀಲರ ಸಂಘದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲು ತೀರ್ಮಾನಿಸಲಾಗಿದೆ.ಈ ಮಧ್ಯೆ, ಸಂಘದ ಪದಾಧಿಕಾರಿಯೊಬ್ಬರು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಆಳಿತಾತ್ಮಕ ನ್ಯಾಯಾಧೀಶರಿಗೆ ಲಿಖಿತ ಪತ್ರ ಬರೆದು ಸಮಸ್ಯೆಯನ್ನು ಬಗೆಹರಿಸಲು ಮಧ್ಯಪ್ರವೇಶ ಮಾಡಬೇಕು ಎಂದು ಕೋರಿದ್ದರು.ನ್ಯಾಯಾಲಯವು ನ್ಯಾಯದಾನ ವ್ಯವಸ್ಥೆಯಲ್ಲಿ ಮಹಾ ದೇಗುಲವಿದ್ದಂತೆ. ನ್ಯಾಯ ಅರಸಿ ಬರುವ ಭಕ್ತರಿಗೆ ನ್ಯಾಯದ ಪ್ರಸಾದ ಕರುಣಿಸುವ ದೇಗುಲದಲ್ಲಿ ಭಕ್ತರಿಗೆ ಪ್ರವೇಶ ಇಲ್ಲ ಎಂದರೆ ಹೇಗೆ..?ಮೇಲಾಗಿ, ನ್ಯಾಯಾಲಯ ಒಂದು ಸಾರ್ವಜನಿಕ ಸ್ಥಳ. ವಕೀಲರು ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸುವ ಸಮುದಾಯ. ವಕೀಲರು ನ್ಯಾಯಾಲಯದ ಅಧಿಕಾರಿ, ಕೋರ್ಟ್‌ಗೆ ಸಹಕರಿಸುವ ಮಹತ್ತರ ಪಾತ್ರ ಇದೆ ಎಂದು ಹಲವು ತೀರ್ಪುಗಳು ಸಾರಿ ಹೇಳಿವೆ.ಆದರೂ ಇಂತಹ ಘಟನೆಗಳು ನ್ಯಾಯಾಧೀಶರು ಮತ್ತು ವಕೀಲರ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಮಾಡುತ್ತವೆ ಎಂಬುದು ವಕೀಲರೊಬ್ಬರ ಅಭಿಪ್ರಾಯ.ಈ ಮಧ್ಯೆ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ಆಳಿತಾತ್ಮಕ ನ್ಯಾಯಾಧೀಶರು ಮಂಗಳೂರು ವಕೀಲರ ಸಂಘದ ಪದಾಧಿಕಾರಿಗಳ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಸಮಸ್ಯೆಯನ್ನು ತಕ್ಷಣ ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಪೃಥ್ವಿರಾಜ ರೈ ಮತ್ತು  ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ಅವರು ತಿಳಿಸಿದ್ದಾರೆ.


ಈ ಮಧ್ಯೆ, ವಕೀಲರ ಸಂಘದ ಪ್ರತಿಭಟನೆಯ ಬಿಸಿಗೆ ವಿವಾದಾತ್ಮಕ ಪೋಸ್ಟರ್ ಮಿಸ್ಸಿಂಗ್ ಆಗಿದೆ. ಪರಿಸ್ಥಿತಿಯೂ ತಿಳಿಯಾಗಿದೆ.

Ads on article

Advertise in articles 1

advertising articles 2

Advertise under the article