-->
NI Act: Mangaluru Court Verdict | 32.25 ಲಕ್ಷ ರೂ. ಚೆಕ್ ಬೌನ್ಸ್‌ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ ಮಂಗಳೂರು ನ್ಯಾಯಾಲಯ

NI Act: Mangaluru Court Verdict | 32.25 ಲಕ್ಷ ರೂ. ಚೆಕ್ ಬೌನ್ಸ್‌ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ ಮಂಗಳೂರು ನ್ಯಾಯಾಲಯ

32.25 ಲಕ್ಷ ರೂ. ಚೆಕ್ ಬೌನ್ಸ್‌ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ ಮಂಗಳೂರು ನ್ಯಾಯಾಲಯ


32.25 ಲಕ್ಷ ರೂ. ಚೆಕ್ ಬೌನ್ಸ್‌ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ ಮಂಗಳೂರು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.ಐದನೇ ಜೆಎಂಎಫ್‌ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಚಿನ್ಮಯಿ ಆರ್.ಎಚ್. ಈ ಮಹತ್ವದ ಆದೇಶವನ್ನು ನೀಡಿದ್ದಾರೆ.ಪ್ರಕರಣ: ಕೃಷ್ಣ ಕುಮಾರ್ ಶರ್ಮಾ Vs ರಮಾನಂದ ಶೆಣೈ

ಮಂಗಳೂರು ಐದನೇ ಜೆಎಂಎಫ್‌ಸಿ ನ್ಯಾಯಾಲಯ, ಸಿಸಿ ನಂ. 1000/2018 Dated 11-10-2022


ಪ್ರಕರಣದ ವಿವರ:

ಫಿರ್ಯಾದಿದಾರರು ಆರೋಪಿಗೆ ರೂ. 32.25 ಲಕ್ಷ ರೂ.ಗಳ ಸಾಲವನ್ನು ನೀಡಿದ್ದು, ಅದರ ಮರುಪಾವತಿಗೆ ನೀಡಲಾದ ಚೆಕ್ ಅಮಾನ್ಯಗೊಂಡಿದೆ ಎಂಬುದು ದೂರುದಾರರ ವಾದ. ಆದರೆ, ತಾನು ಸಾಲವನ್ನೇ ಪಡೆದಿಲ್ಲ. ಹಾಗಾಗಿ, ಅಲ್ಲಿ ಕಾನೂನುಬದ್ಧ ಮರುಪಾವತಿಯ ಬಾಧ್ಯತೆಯೇ ಅಸ್ತಿತ್ವದಲ್ಲಿ ಇಲ್ಲ ಎಂಬುದಾಗಿ ಆರೋಪಿ ಪರ ವಾದ ಮಂಡಿಸಲಾಗಿತ್ತು.ಸದ್ರಿ ಪ್ರಕರಣದಲ್ಲಿ, ಆರೋಪಿಯು ಅಮಾನ್ಯಗೊಂಡ ಚೆಕ್‌ನಲ್ಲಿದ್ದ ಸಹಿ ತಮ್ಮದೇ ಆಗಿದೆ ಎಂಬುದನ್ನು ಒಪ್ಪಿಕೊಂಡಿದ್ದರು. ಆದುದರಿಂದ NI Actನ ಸೆಕ್ಷನ್ 118 ಮತ್ತು 139ರ ಪ್ರಕಾರ ನ್ಯಾಯಪೀಠದ ಮುಂದೆ ಪೂರ್ವಭಾವನೆ ಉಂಟಾಗಿತ್ತು. ಆರೋಪಿಯು ಈ ಪೂರ್ವಭಾವನೆಯ ವಿರುದ್ಧ ತನ್ನ ಸ್ಪಷ್ಟ ನಿರಾಕರಣೆಯನ್ನು ಸಾಬೀತುಮಾಡದ ಹೊರತು ಈ ಚೆಕ್‌ ಕಾನೂನುಬದ್ಧ ಮರುಪಾವತಿಯ ಬಾಧ್ಯತೆಗೇ ನೀಡಲಾಗಿದೆ ಎಂದೇ ಊಹಿಸಬಹುದಾಗಿತ್ತು.ಆದರೆ, ಚೆಕ್‌ ಕಾನೂನುಬದ್ಧ ಮರುಪಾವತಿಯ ಬಾಧ್ಯತೆಗಾಗಿ ನೀಡಿದ್ದಲ್ಲ ಎಂಬ ಅಂಶವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಆರೋಪಿಯದ್ದಾಗಿತ್ತು. ಇಂತಹ ಸಂದರ್ಭದಲ್ಲಿ ಆರೋಪಿಯು ಕೇವಲ ನಿರಾಕರಣೆಯ ವಿವರಣೆ ನೀಡಿದರೆ ಸಾಕಾಗದು, ಸನ್ನಿವೇಶ ಮತ್ತು ದಾಖಲೆಗಳ ಮೂಲಕ ಈ ಅಂಶವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಆರೋಪಿಗೆ ಇದೆ ಎಂಬುದಾಗಿ "ರಂಗಪ್ಪ Vs ಶ್ರೀ ಮೋಹನ್" ಪ್ರರಕಣದಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ಮಂಗಳೂರು ನ್ಯಾಯಾಲಯದ ಮಾನ್ಯ ನ್ಯಾಯಪೀಠ ಉಲ್ಲೇಖಿಸಿತ್ತು.ಸದ್ರಿ ಪ್ರಕರಣದಲ್ಲಿ ದೂರುದಾರರು ದತ್ತ ರೆಸಿಡೆನ್ಸಿ ಎಂಬ ಅಪಾರ್ಟ್‌ಮೆಂಟ್ ನಿವೇಶನವನ್ನು ಆರೋಪಿ ಮತ್ತು ಅವರ ತಾಯಿ, ಸಹೋದರಿಯಿಂದ ಖರೀದಿಸಿದ್ದರು. ಆರೋಪಿ ಸದ್ರಿ ಫ್ಲ್ಯಾಟ್‌ ಆರೋಪಿಯ ಜಂಟಿ ಮಾಲಕತ್ವ ಹೊಂದಿದ್ದರು. ದೂರುದಾರರಿಗೆ ಈ ಫ್ಲ್ಯಾಟ್ ಹಸ್ತಾಂತರದ ಸಂದರ್ಭದಲ್ಲಿ ಕೆಲವು ದಾಖಲೆಗಳು ಹಾಗೂ ಸಹಿ ಮಾಡಲಾದ ಬಳಸದ ಚೆಕ್‌ಗಳನ್ನು ಮನೆಯ ಕಪಾಟಿನಲ್ಲಿ ಹಾಗೆಯೇ ಬಿಟ್ಟಿದ್ದರು. 


ಅನಾರೋಗ್ಯದ ಕಾರಣ ಮನೆ ಹಸ್ತಾಂತರದ ಸಂದರ್ಭದಲ್ಲಿ ಚೆಕ್ ಪಡೆದುಕೊಳ್ಳಲಾಗಲಿಲ್ಲ. ಈ ಚೆಕ್‌ನ್ನು ಫಿರ್ಯಾದಿದಾರರು ದುರ್ಬಳಕೆ ಮಾಡಿದ್ದರು ಎಂದು ಆರೋಪಿ ಪರ ವಕೀಲರು ವಾದಿಸಿದ್ದರು. ಇದಕ್ಕೆ ಕ್ರಯಪತ್ರ ಮತ್ತು ವೈದ್ಯಕೀಯ ದಾಖಲೆಗಳನ್ನೂ ಹಾಜರುಪಡಿಸಿದ್ದರು.ಫಿರ್ಯಾದಿದಾರರ ಪಾಟೀ ಸವಾಲು ಮತ್ತು ಆರೋಪಿಯ ಮುಖ್ಯ ವಿಚಾರಣೆಯಲ್ಲಿ ಈ ವಿಷಯವನ್ನು ಸಾಬೀತು ಮಾಡಿದ್ದರು. ಆದರೆ, ದೂರುದಾರರ ಪರ ವಕೀಲರು ಆರೋಪಿಯ ಪಾಟೀ ಸವಾಲು ಮಾಡಿರಲಿಲ್ಲ ಮತ್ತು ಆರೋಪಿಯ ವಾದಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ಫಿರ್ಯಾದುದಾರರು ಪ್ರಯತ್ನಿಸಲಿಲ್ಲ.32.25 ಲಕ್ಷ ರೂ.ನಷ್ಟು ದೊಡ್ಡ ಮೊತ್ತದ ಸಾಲದ ವ್ಯವಹಾರ ಮಾಡುವಾಗ ಯಾವುದೇ ದಾಖಲೆ ಮಾಡಿಲ್ಲ. ಈ ಕುರಿತ ವಿವರಣೆಯನ್ನಾಗಲೀ, ಆಧಾರಸಹಿತ ಪುರಾವೆಯನ್ನಾಗಲೀ ನ್ಯಾಯಪೀಠದ ಮುಂದೆ ಇಡುವಲ್ಲಿ ದೂರುದಾರರು ವಿಫಲರಾದರು. ದೊಡ್ಡ ಮೊತ್ತದ ಹಣಕ್ಕೆ ಫ್ಲ್ಯಾಟ್ ಖರೀದಿಸಿದ್ದ ದೂರುದಾರರು ಅದೇ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಸಾಲ ನೀಡಬಹುದೇ ಎಂಬ ನ್ಯಾಯಪೀಠದ ಮುಂದೆ ಇದ್ದ ಸಂಶಯವನ್ನು ನಿವಾರಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಹಾಗಾಗಿ, ಕಾನೂನುಬದ್ಧ ಮರುಪಾವತಿಯ ಬಾಧ್ಯತೆಯ ಅಸ್ತಿತ್ವವನ್ನು ಸಾಬೀತುಪಡಿಸಲು ದೂರುದಾರರು ವಿಫಲರಾಗಿದ್ದು, ಈ ಅನುಮಾನದ ಪ್ರಯೋಜನವನ್ನು ಪಡೆಯುವಲ್ಲಿ ಆರೋಪಿ ಸಫಲರಾದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ನ್ಯಾಯಪೀಠ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿತು.For Judgement Copy Click Here;

ಪ್ರಕರಣ: ಕೃಷ್ಣ ಕುಮಾರ್ ಶರ್ಮಾ Vs ರಮಾನಂದ ಶೆಣೈAds on article

Advertise in articles 1

advertising articles 2

Advertise under the article