-->
ಪಾದಯಾತ್ರೆಗಳು ಮತ್ತು ಪರಿಣಾಮ: ವಿಶ್ರಾಂತ ಜಿಲ್ಲಾ ನ್ಯಾಯಾಧೀಶರ ಅಂಕಣ

ಪಾದಯಾತ್ರೆಗಳು ಮತ್ತು ಪರಿಣಾಮ: ವಿಶ್ರಾಂತ ಜಿಲ್ಲಾ ನ್ಯಾಯಾಧೀಶರ ಅಂಕಣ

ಪಾದಯಾತ್ರೆಗಳು ಮತ್ತು ಪರಿಣಾಮ: ವಿಶ್ರಾಂತ ಜಿಲ್ಲಾ ನ್ಯಾಯಾಧೀಶರ ಅಂಕಣ





ಪ್ರಸ್ತುತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪಾದಯಾತ್ರೆ ಸಂದರ್ಭದಲ್ಲಿ ದೇಶದ ರಾಜಕಾರಣದಲ್ಲಿ ಕಂಡ ಶಕ್ತಿಶಾಲಿ ಪಾದಯಾತ್ರೆಗಳ ಬಗ್ಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್ ಎಚ್. ಮಿಟ್ಟಲಕೋಡ, ಧಾರವಾಡ ಅವರು ವಿವರಿಸಿದ್ದಾರೆ. ಅವರ ಲೇಖನದ ಸಂಪೂರ್ಣ ಭಾಗವನ್ನು ಪ್ರಕಟಿಸುತ್ತಿದ್ದೇವೆ. (ಸಂಪಾದಕರು, Court Beat News)


1983ರಲ್ಲಿ ಜನತಾ ಪಕ್ಷದ ಅಧ್ಯಕ್ಷ ಚಂದ್ರಶೇಖರ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದರು. ಅದು ಯಾವುದೇ ರಾಜಕೀಯ ಉದ್ದೇಶ ಹೊಂದಿರಲಿಲ್ಲ.


ಹಿಂದೆ, ಯಡಿಯೂರಪ್ಪನವರ ಸರಕಾರ ಇದ್ದಾಗ ಅಂದಿನ ವಿರೋಧಿ ಪಕ್ಷದ ನಾಯಕ, ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದರು. ಅದು ರೆಡ್ಡಿಗಳ ಜೊತೆ ಆದ ವಾಗ್ವಾದದ ಪರಿಣಾಮ. ಇದು ಕೇವಲ ಹಠಕ್ಕಾಗಿ ನಡೆದ ರಾಜಕೀಯ ಪ್ರೇರಿತ ಪಾದಯಾತ್ರೆ.


ಈಗ ರಾಹುಲ ಗಾಂಧಿ ನಡೆಸುತ್ತಾ ಇರುವ ಕನ್ಯಾಕುಮಾರಿ ಯಿಂದ ಕಾಶ್ಮೀರದ ವರೆಗಿನ ಭಾರತ ಜೋಡೋ ಪಾದಯಾತ್ರೆ, ರಾಜಕೀಯ ಉದ್ದೇಶ ಹೊಂದಿದೆ. ಒಂದು ಕಾಲದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಪ್ರಭಾವ ಹೊಂದಿದ್ದ, ಏಕೈಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್.ಅದು ತನ್ನ ತಪ್ಪುಗಳ ಕಾರಣ ದುರ್ಬಲವಾಗಿ ಇಂದು ಕೇವಲ ಕೆಲವೇ ರಾಜ್ಯಗಳಲ್ಲಿ ಅಧಿಕಾರ ಉಳಿದುಕೊಂಡಿದೆ.


ಈಗಿನ ಪಾದಯಾತ್ರೆ ರಾಜಕೀಯ ಉದ್ದೇಶ ಹೊಂದಿದೆ, ಆದರೆ ಪಾದಯಾತ್ರೆಗಳು ಜನರ ಮೇಲೆ ಯಾವ ಪರಿಣಾಮ ಬೀರುತ್ತವೆ ಅಂತ ಊಹೆ ಮಾಡಲು ಸಾಧ್ಯವಿಲ್ಲ.


ಚಂದ್ರಶೇಖರ್ ಅವರು ಪಾದಯಾತ್ರೆ ಮಾಡಿದ ನಂತರ 1983 ರಲ್ಲಿ, ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಮತ್ತು ಕ್ರಾಂತಿರಂಗ ಹೆಚ್ಚು ಸ್ಥಾನ ಪಡೆದವು.ಮತ್ತು ಬಿಜೆಪಿ ಕೂಡಾ ಹೆಚ್ಚು ಸ್ಥಾನ ಪಡೆಯಿತು.ಆಗ ಬಿಜೆಪಿ ಬಾಹ್ಯ ಬೆಂಬಲ ನೀಡಿದ ಕಾರಣ ಅಂದು ಮೊದಲ ಕಾಂಗ್ರೆಸ್ಸೇತರ ಸರಕಾರ ರಚನೆ ಆಯಿತು.


ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ಧರಾಮಯ್ಯ ಪಾದಯಾತ್ರೆ ಮಾಡಿದ ಕಾರಣ 2013 ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು.ಇದು ಬರೀ ಪಾದಯಾತ್ರೆ ಪರಿಣಾಮ ಅಲ್ಲ. ಆದರೆ ಬಿಜೆಪಿ ಪ್ರಮಾದಗಳೂ ಇದ್ದವು.


ಇಂದು ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆ , ಎಲ್ಲಿ ಜನರ ಮೇಲೆ ಎನು ಪರಿಣಾಮ ಮಾಡಬಹುದು ಅನ್ನುವ ವಿಚಾರ, ರಾಜಕೀಯ ಸಂಚಲನ ಮೂಡಿಸಿದ್ದು ಸತ್ಯ.


ಗಾಂಧೀಜಿ ಪಾದಯಾತ್ರೆಗಳನ್ನು ಇಂದು ಅವಹೇಳನ ಮಾಡುವ ಹಂತಕ್ಕೆ ರಾಜಕೀಯ ತಲುಪಿದೆ. ಆದರೆ ಆ ಪಾದಯಾತ್ರೆಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಅದ್ಭುತ ಪರಿಣಾಮ ಬೀರಿದ್ದು ಸುಳ್ಳೇನಲ್ಲ.ಹೀಗಾಗಿ ಪಾದಯಾತ್ರೆ ಬಗ್ಗೆ ಅವಹೇಳನ ಮಾಡುವವರು ಕೂಡಾ ಪಾದಯಾತ್ರೆಯಲ್ಲಿ ಶಕ್ತಿ ಇದೆ ಅಂತ ಭಾವಿಸಿದಂತೆ ಕಾಣುತ್ತದೆ.


ಎಲ್ಲವನ್ನೂ ಬರೀ ಅವಹೇಳನ ಮಾಡುವವರು ಕೂಡಾ ಒಮ್ಮೆ ತಾವೇ ಅವಹೇಳನಕ್ಕೆ ಗುರಿಯಾಗಬಹುದು ಅನ್ನುವುದನ್ನು ಮರೆಯಬಾರದು. ಪಾದಯಾತ್ರೆ ಎನು ಮಾಡಬಹುದು ಎಂಬುದನ್ನು ಕಾಲವೇ ನಿರ್ಧರಿಸುತ್ತದೆ.


ಜನಜಾಗೃತಿ ಮೂಡಿಸುವಲ್ಲಿ ಪಾದಯಾತ್ರೆಗಳ ಪಾತ್ರ ಅಮೂಲ್ಯ ಎನ್ನುವುದನ್ನು ಮಾತ್ರ ಮರೆಯಲಾಗದು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200