-->
ನ್ಯಾಯಾಲಯಗಳನ್ನು ಜನರನ್ನು ತಲುಪುವಂತಾಗಬೇಕು: ಸಂವಿಧಾನ ದಿನದಂದು ಸಿಜೆಐ ಚಂದ್ರಚೂಡ್ ಆಶಯ

ನ್ಯಾಯಾಲಯಗಳನ್ನು ಜನರನ್ನು ತಲುಪುವಂತಾಗಬೇಕು: ಸಂವಿಧಾನ ದಿನದಂದು ಸಿಜೆಐ ಚಂದ್ರಚೂಡ್ ಆಶಯ

ನ್ಯಾಯಾಲಯಗಳನ್ನು ಜನರನ್ನು ತಲುಪುವಂತಾಗಬೇಕು: ಸಂವಿಧಾನ ದಿನದಂದು ಸಿಜೆಐ ಚಂದ್ರಚೂಡ್ ಆಶಯ






ನ್ಯಾಯಾಲಯಗಳತ್ತ ಜನರು ಹೋಗುವ ಬದಲು ನ್ಯಾಯಾಲಯಗಳು ಜನರನ್ನು ತಲುಪುವಂತಾಗಬೇಕು ಎಂದು ಸುಪ್ರೀಮ್‌ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಭಿಪ್ರಾಯಪಟ್ಟರು.



ಸಂವಿಧಾನ ದಿನ ಪ್ರಯುಕ್ತ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಕೇವಲ ದೆಹಲಿಯ ತಿಲಕ್ ಮಾರ್ಗ್‌ಗೆ ಸೀಮಿತವಲ್ಲ. ಅದು ದೇಶದ ಎಲ್ಲ ಪ್ರಜೆಗಳಿಗೆ ಸೇರಿದ್ದು ಎಂದು ಹೇಳಿದರು.



ಜನರನ್ನು ತಲುಪಲು ನ್ಯಾಯಾಲಯಗಳು ತಂತ್ರಜ್ಞಾನದ ನೆರವನ್ನು ಪಡೆಯಬೇಕು. ಎಲ್ಲರಿಗೂ ನ್ಯಾಯದಾನದ ವ್ಯವಸ್ಥೆ ಸರಳೀಕೃತವಾಗಿ ಸಾಧ್ಯವಾಗಬೇಕು, ದೇಶದ ವಿವಿಧ ಹೈಕೋರ್ಟ್‌ಗಳು, ಸುಪ್ರೀಂಕೋರ್ಟ್‌ಗಳ ತೀರ್ಪುಗಳು ಜನರಿಗೆ ಸುಲಭವಾಗಿ ಸಿಗುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.



ವಿವಿಧ ಹೈಕೋರ್ಟ್‌ನ ಸುಮಾರು 77 ಲಕ್ಷ ನ್ಯಾಯತೀರ್ಪುಗಳು ರಾಷ್ಟ್ರೀಯ ಜುಡೀಷಿಯಲ್ ಡಾಟಾ ಗ್ರಿಡ್‌ನಲ್ಲಿ ಸುಲಭವಾಗಿ ದೊರೆಯುತ್ತದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತಂತ್ರಜ್ಙಾನವನ್ನು ಬಳಸಿ ನ್ಯಾಯಾಲಯಗಳು ಕಾರ್ಯಾಚರಿಸಿವೆ. ಅದರ ಮಹತ್ವ ಈಗ ಕಡಿಮೆಯಾಗಿಲ್ಲ ಎಂದು ಅವರು ಒತ್ತಿ ಹೇಳಿದರು.


ಜಿಲ್ಲಾ ಮಟ್ಟದಲ್ಲಿ ಇರುವ ಡಿಸ್ಟ್ರಿಕ್ಟ್ ಜುಡೀಷಿಯರಿ ಜನರನ್ನು ತಲುಪುವ ಮೊದಲ ಮೆಟ್ಟಿಲು. ಹಾಗಾಗಿ, ಅಲ್ಲಿ ಮೂಲಸೌಕರ್ಯವನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.







ಇದನ್ನೂ ಓದಿ:

ಜಾಮೀನು ನೀಡುವಲ್ಲಿ ಡಿಸ್ಟ್ರಿಕ್ಟ್ ಕೋರ್ಟ್‌ಗಳ ಮಹತ್ವ ಅಪಾರ: ಸಿಜೆಐ ಚಂದ್ರಚೂಡ್



ಜಿಲ್ಲಾ ನ್ಯಾಯಾಧೀಶರು ಅಧೀನ ಜಡ್ಜ್‌ಗಳಲ್ಲ, ಅವರು ಸಮಾನರು: ಜ. ಚಂದ್ರಚೂಡ್‌


..

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200