-->
Registry not above the Court Order- ಕೋರ್ಟ್ ಆದೇಶಕ್ಕಿಂತ ರಿಜಿಸ್ಟ್ರಾರ್‌ ಮೇಲಲ್ಲ: ನಿರ್ದಿಷ್ಟ ಪ್ರಕರಣ ಪಟ್ಟಿ ಮಾಡದ ರಿಜಿಸ್ಟ್ರಿ ಮೇಲೆ ಸುಪ್ರೀಂ ಕೋರ್ಟ್‌ ಗುಡುಗು!

Registry not above the Court Order- ಕೋರ್ಟ್ ಆದೇಶಕ್ಕಿಂತ ರಿಜಿಸ್ಟ್ರಾರ್‌ ಮೇಲಲ್ಲ: ನಿರ್ದಿಷ್ಟ ಪ್ರಕರಣ ಪಟ್ಟಿ ಮಾಡದ ರಿಜಿಸ್ಟ್ರಿ ಮೇಲೆ ಸುಪ್ರೀಂ ಕೋರ್ಟ್‌ ಗುಡುಗು!

ಕೋರ್ಟ್ ಆದೇಶಕ್ಕಿಂತ ರಿಜಿಸ್ಟ್ರಾರ್‌ ಮೇಲಲ್ಲ: ನಿರ್ದಿಷ್ಟ ಪ್ರಕರಣ ಪಟ್ಟಿ ಮಾಡದ ರಿಜಿಸ್ಟ್ರಿ ಮೇಲೆ ಸುಪ್ರೀಂ ಕೋರ್ಟ್‌ ಗುಡುಗು!





ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಬಳಿಕ ಮತ್ತೊಬ್ಬ ನ್ಯಾಯಮೂರ್ತಿ ನ್ಯಾಯಾಂಗದ ರಿಜಿಸ್ಟ್ರಾರ್‌ ಮೇಲೆ ಗುಟುರು ಹಾಕಿದ್ದಾರೆ. 


ಸ್ಪಷ್ಟ ಆದೇಶ ಇದ್ದರೂ ನಿರ್ದಿಷ್ಟ ಪ್ರಕರಣವನ್ನು ಪಟ್ಟಿಯಿಂದ ಕಳಚಿ ಹಾಕಿದ ರಿಜಿಸ್ಟ್ರಾರ್‌ ಮೇಲೆ ಕೆಂಡಾಮಂಡಲರಾದ ನ್ಯಾಯಮೂರ್ತಿ ಅಜಯ್ ರಸ್ತೋಗಿ, ಕೋರ್ಟ್ ಆದೇಶಕ್ಕಿಂತ ರಿಜಿಸ್ಟ್ರಾರ್‌ ಮೇಲಲ್ಲ.. ಒಂದು ದಿನದಲ್ಲಿ ವಿವರಣೆ ಸಹಿತ ನ್ಯಾಯಪೀಠಕ್ಕೆ ಲಿಖಿತ ಕಾರಣವನ್ನು ನೀಡಬೇಕು ಎಂದು ಆದೇಶಿಸಿದರು.



ತಾವು ಸದಸ್ಯರಾಗಿರುವ ವಿಭಾಗೀಯ ನ್ಯಾಯಪೀಠದ ವಿಷಯ ಪಟ್ಟಿಯಲ್ಲಿ ಪ್ರಕರಣವನ್ನು ಲಿಸ್ಟ್‌ನಿಂದ ಕಳಚಿ (ಡಿಲಿಟ್) ಹಾಕಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಅಜಯ್ ರಸ್ತೋಗಿ, ನಿರ್ದಿಷ್ಟ ಪ್ರಕರಣವನ್ನು ಪಟ್ಟಿ ಮಾಡುವಂತೆ ಒಂದು ಆದೇಶ ಹೊರಡಿಸಿದ ಮೇಲೆ ರಿಜಿಸ್ಟ್ರಿಗೆ ಅದರಲ್ಲಿ ಮೂಗು ತೂರಿಸಲು ಯಾವುದೇ ಅವಕಾಶ ಇಲ್ಲ. ನ್ಯಾಯಪೀಠದ ಆದೇಶಕ್ಕಿಂತಲೂ ಅವರು ಮೇಲಲ್ಲ ಎಂದು ಆದೇಶ ಹೊರಡಿಸಿದರು.



ಇಂತಹ ಪ್ರಕರಣಗಳು ಮರುಕಳಿಸಬಾರದು. ಒಂದು ವೇಳೆ, ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸ್ಪಷ್ಟ ನಿರ್ದೇಶನವಿದ್ದರೂ ಪಟ್ಟಿ ಮಾಡದ ರಿಜಿಸ್ಟ್ರಿ ಕ್ರಮ ಖಂಡನೀಯ. ನ್ಯಾಯಾಂಗದ ರಿಜಿಸ್ಟ್ರಿ ತಮ್ಮ ಸ್ವೇಚ್ಛಾಚಾರದಂತೆ ನಡೆದುಕೊಳ್ಳುವುದನ್ನು ಒಪ್ಪಲಾಗದು ಎಂದು ರಸ್ತೋಗಿ ಕಟು ಶಬ್ದಗಳಲ್ಲಿ ಟೀಕಿಸಿದರು.



ತಾವೇ ನ್ಯಾಯಾಲಯದ ಕಲಾಪವನ್ನು ನಡೆಸುತ್ತಿದ್ದೇವೆ ಎಂದು ರಿಜಿಸ್ಟ್ರಿ ಭಾವಿಸಿದಂತಿದೆ. ನಮಗೆ ಇಂತಹ ಕಠಿಣತರದ ಆದೇಶ ಹೊರಡಿಸಲು ಮನಸ್ಸಿಲ್ಲ. ಆದರೆ, ಅದಕ್ಕೆ ನೀವೇ ಅವಕಾಶ ನೀಡಿದಿರಿ. ಆದರೆ, ಇಂತಹ ಕಠಿಣ ಆದೇಶವನ್ನು ಹೊರಡಿಸಲು ನಾನು ಹಿಂಜರಿಯಲಾರೆ ಎಂದು ರಿಜಿಸ್ಟ್ರಾರ್ ವಿರುದ್ಧದ ಆದೇಶದ ವೇಳೆ ಟಿಪ್ಪಣಿ ಮಾಡಿದರು.



2022 ವರ್ಷದ ಆರಂಭದಲ್ಲಿ ನ್ಯಾಯಮೂರ್ತಿ ಎಂ.ಆರ್. ಷಾ ಅವರ ನ್ಯಾಯಪೀಠಕ್ಕೂ ಇಂತದ್ದೇ ಕಠಿಣ ಅನುಭವ ಆಗಿತ್ತು. ಪಟ್ಟಿ ಮಾಡಲು ಆದೇಶ ನೀಡಲಾದ ಪ್ರಕರಣವನ್ನು ರಿಜಿಸ್ಟ್ರಾರ್ ಕಲಾಪಕ್ಕೆ ಪಟ್ಟಿ ಮಾಡಿರಲಿಲ್ಲ. ಹಿರಿಯ ನ್ಯಾಯಮೂರ್ತಿ ಡಾ. ಧನಂಜಯ ವೈ. ಚಂದ್ರಚೂಡ್ ಅವರೂ 2022ರ ಆಗಸ್ಟ್‌ನಲ್ಲಿ ಇದೇ ಸನ್ನಿವೇಶವನ್ನು ಎದುರಿಸಿದ್ದರು.



ನವೆಂಬರ್ 1ರಂದು ಆಗಿನ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಒಂದು ವರ್ಷದಿಂದ ಕಲಾಪದ ಪಟ್ಟಿಯಲ್ಲಿ ಸೇರಿಸದ ಪ್ರಕರಣಗಳನ್ನು ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿದ್ದರು. 



ವರ್ಷಗಳು ಕಳೆದರೂ ಇಷ್ಟೊಂದು ಪ್ರಕರಣಗಳನ್ನು ಯಾಕೆ ಪಟ್ಟಿ ಮಾಡಿ ಕಲಾಪಕ್ಕೆ ತರಲಿಲ್ಲ ಎಂಬ ಬಗ್ಗೆ ಸೂಕ್ತ ವಿವರಣೆ ಯೊಂದಿಗೆ ವರದಿ ನೀಡುವಂತೆ ಅವರು ರಿಜಿಸ್ಟ್ರಾರ್‌ಗೆ ನಿರ್ದೇಶನ ಹೊರಡಿಸಿದ್ದರು.




ಇದನ್ನೂ ಓದಿ:


ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು



ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!



Ads on article

Advertise in articles 1

advertising articles 2

Advertise under the article