ಬೀಳ್ಕೊಡುಗೆ ಸಮಾರಂಭದಲ್ಲಿ ನಾಗಿನ್ ಡ್ಯಾನ್ಸ್: ಜಡ್ಜ್, ಕೋರ್ಟ್ ಸಿಬ್ಬಂದಿ ಅಮಾನತು!
ಬೀಳ್ಕೊಡುಗೆ ಸಮಾರಂಭದಲ್ಲಿ ನಾಗಿನ್ ಡ್ಯಾನ್ಸ್: ಜಡ್ಜ್, ಕೋರ್ಟ್ ಸಿಬ್ಬಂದಿ ಅಮಾನತು!
"ಸೆಂಡ್ ಆಫ್ ಪಾರ್ಟಿ"ಯಲ್ಲಿ ನ್ಯಾಯಾಧೀಶರು ಮತ್ತು ಕೋರ್ಟ್ ಸಿಬ್ಬಂದಿ ನಾಗಿನ್ ಡ್ಯಾನ್ಸ್
ಮಾಡಿರುವ ದೃಶ್ಯ ವೈರಲ್ ಆಗಿದ್ದು, ಈ ದೃಶ್ಯಾವಳಿಯಲ್ಲಿ ಇರುವ ನ್ಯಾಯಾಂಗ ಅಧಿಕಾರಿಗಳು ಮತ್ತು ಕೋರ್ಟ್ ಸಿಬ್ಬಂದಿಯನ್ನು 'ನಾಗಿನ್ ಡ್ಯಾನ್ಸ್' ಮಾಡಿದ ಕಾರಣಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಅಮಾನತು ಮಾಡಿದೆ.
ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲಾ ನ್ಯಾಯಾಧೀಶರಾದ ಯೋಗೇಶ್ ದತ್ ಶುಕ್ಲಾ ನಿವೃತ್ತರಾದ ಹಿನ್ನೆಲೆಯಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಆ ಜಿಲ್ಲೆಯ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಪಂಕಜ್ ಜೈಸ್ವಾಲ್ ಮತ್ತು ಇತರ ಇಬ್ಬರು ಮಹಿಳಾ ನ್ಯಾಯಾಧೀಶರು ನಾಗಿನ್ ಡ್ಯಾನ್ಸ್ ಮಾಡಿದ್ದರು. ಈ ಡ್ಯಾನ್ಸ್‌ನಲ್ಲಿ ಕೋರ್ಟ್ ಸಿಬ್ಬಂದಿ ಕೂಡ ಸೇರಿಕೊಂಡಿದ್ದರು.
ಸಮಾರಂಭದಲ್ಲಿ ಉಪಸ್ಥಿತರಿದ್ದವರಲ್ಲಿ ಯಾರೋ ಒಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಶೂಟಿಂಗ್ ಮಾಡಿದ್ದು, ಈ ದೃಶ್ಯ ಸಾಮಾಜಿಕ ತಾಣದಲ್ಲಿ ಹರಿದಾಡಿ ವೈರಲ್ ಆಗಿತ್ತು.
ದೃಶ್ಯ ವೈರಲ್ ಆಗುತ್ತಿದ್ದಂತೆಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಧ್ಯಪ್ರದೇಶ ಹೈಕೋರ್ಟ್, ಸ್ವಯಂಪ್ರೇರಿತವಾಗಿ ಪ್ರಕರಣದ ಕಾಗ್ನಿಜೆನ್ಸ್ ತೆಗೆದುಕೊಂಡಿತು. ಸಿಜೆಎಂ ಜೈಸ್ವಾಲ್, ಮಹಿಳಾ ನ್ಯಾಯಾಧೀಶೆ ಸೋನಾಲಿ ಶರ್ಮಾ ಮತ್ತು ನ್ಯಾಯಾಧೀಶೆ ರಚನಾ ಅತುಲ್ಕರ್ ಹಾಗೂ ಡ್ಯಾನ್ಸ್‌ನಲ್ಲಿ ಭಾಗಿಯಾಗಿದ್ದ ಇಬ್ಬರು ಕೋರ್ಟ್ ಸಿಬ್ಬಂದಿಯನ್ನು ಅಮಾನತು ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಬೀಳ್ಕೊಡುಗೆ ಸಮಾರಂಭಕ್ಕೆ ಎಲ್ಲಾ ನ್ಯಾಯಾಧೀಶರು ತಮ್ಮ ಸಮವಸ್ತ್ರದಲ್ಲಿ ಹಾಜರಾಗಿದ್ದರು. ಈ ಪಾರ್ಟಿಯಲ್ಲಿ ಸಂಭ್ರಮದ ಹಾಡನ್ನು ಹಾಕಲಾಯಿತು. ಆಗ ನ್ಯಾಯಾಧೀಶರು ಈ ಹಾಡಿಗೆ ನೃತ್ಯ ಮಾಡಲು ಪ್ರಾರಂಭಿಸಿದರು.
ಒಂದು ಹಂತದಲ್ಲಿ ಸಿಜೆಎಂ ಜೈಸ್ವಾಲ್ ಹಾವಿನಂತೆ ಕುಣಿಯಲು ಆರಂಭಿಸಿದರು. ಆಗ ದೃಶ್ಯವನ್ನು ಶೂಟಿಂಗ್ ಮಾಡಿಲಾಗಿದ್ದು, ತಕ್ಷಣ ಈ ದೃಶ್ಯ ವೈರಲ್ ಆಗಿದೆ.
..