-->
ಕಿವುಡರು, ದೃಷ್ಟಿಹೀನರೂ ನ್ಯಾಯಾಧೀಶರಾಗಲು ಸಾಧ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕಿವುಡರು, ದೃಷ್ಟಿಹೀನರೂ ನ್ಯಾಯಾಧೀಶರಾಗಲು ಸಾಧ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕಿವುಡರು, ದೃಷ್ಟಿಹೀನರೂ ನ್ಯಾಯಾಧೀಶರಾಗಲು ಸಾಧ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು






ದೈಹಿಕ ಅಂಗವೂನತ್ವ ಇರುವವರು ಅಥವಾ ನ್ಯಾಯಾಧೀಶರಾಗಲು ಸಾಧ್ಯವಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಸುಪ್ರೀಂ ಕೋರ್ಟ್‌ನ ನ್ಯಾ. ಡಾ. ಡಿವೈ ಚಂದ್ರಚೂಡ್ ಮತ್ತು ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಈ ಮಹತ್ವದ ತೀರ್ಪು ನೀಡಿದೆ.



ಇತರರ ಜೊತೆ ಸಹಜವಾಗಿಯೇ ಬಾಳಿ ಬದುಕಲು ವಿಕಲ ಚೇತನರಿಗೂ ಹಕ್ಕಿದೆ. ಅವರಿಗೂ ಗೌರವದ ಬದುಕು ಕಲ್ಪಿಸಬೇಕಿದೆ, ಇತರರೊಂದಿಗೆ ಸ್ಪರ್ಧಾತ್ಮಕವಾಗಿರಲು ಅವಕಾಶ ಕಲ್ಪಿಸಬೇಕಿದೆ ಎಂದು ನ್ಯಾಯಪೀಠ ಹೇಳಿದೆ.



ತಮಿಳುನಾಡು ರಾಜ್ಯದಲ್ಲಿ ನಡೆದ ಸಿವಿಲ್ ಜಡ್ಜ್ ಕಿರಿಯ ವಿಭಾಗದ ನ್ಯಾಯಾಧೀಶರ ನೇಮಕಾತಿಯಲ್ಲಿ ಶೇ. 40ರಿಂದ 50ರ ವರೆಗೆ ಕಿವುಡ ಮತ್ತು ಮೂಕ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಕುರಿತು ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿರುವ ತೀರ್ಪನ್ನು ಮಗುಚಿ ಹಾಕಿದೆ.



2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು 1995ರ ಕಾಯ್ದೆಯನ್ನು ಆಧರಿಸಿ ನೀಡಲಾದ ತೀರ್ಪಾಗಿದೆ. ಆದರೆ, ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 ಜಾರಿಗೆ ಬಂದ ನಂತರ ಈ ತೀರ್ಪು ಪೂರ್ವನಿದರ್ಶನವಾಗುವುದಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.



ವಿಕಲಚೇತನರ ಹಕ್ಕುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ವರದಿಯನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ, ವಿಕಲ ಚೇತನರ ಸಹಜ ನಿತ್ಯ ಬದುಕಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. ಅವರನ್ನು ಮಾನಸಿಕ ಅಸ್ವಸ್ಥರು ಮೊದಲಾದ ಶಬ್ದಗಳನ್ನು ಬಳಸಿ ಸಂಬೋಧಿಸುವುದು ಸರಿಯಲ್ಲ ಎಂದು ಹೇಳಿದೆ.



62 ಪುಟಗಳ ತೀರ್ಪನ್ನು ಬರೆದ ನ್ಯಾಯಪೀಠ, ದೃಷ್ಟಿಹೀನರು, ಶ್ರವಣ ದೋಷ ಇರುವ ಅಭ್ಯರ್ಥಿಗಳಿಗೆ ಅಗತ್ಯ ಎಲ್ಲ ನೆರವನ್ನೂ ನೀಡಬೇಕಿದೆ ಎಂದು ಸ್ಪಷ್ಟಪಡಿಸಿದೆ.



ಮುಂದುವರಿದು, ಲೇಖಕರನ್ನು ಒದಗಿಸುವ ಮಾನವ ಸಹಾಯದ ಜೊತೆಗೆ ತಂತ್ರಜ್ಞಾನದ ನೆರವನ್ನೂ ಬಳಸಲು ಅವರಿಗೆ ನೀಡಬೇಕಾಗಿದೆ. ಈ ಮೂಲಕ ವಾಸ್ತವಿಕವಾಗಿ ಸ್ಪರ್ಧಾತ್ಮಕ ಸಮಾನತೆಯನ್ನು ಒದಗಿಸಬೇಕಾಗಿದೆ ಎಂದು ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ.



ಇದೇ ವೇಳೆ, ವಿಕಲಚೇತನರ ಹೆಸರಿನಲ್ಲಿ ಅವರಿಗೆ ನೀಡಲಾಗುವ ಸೌಲಭ್ಯಗಳನ್ನು ದುರುಪಯೋಗ ಮಾಡುವ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮವನ್ನು ಜರುಗಿಸಬೇಕಿದೆ ಎಂದೂ ಹೇಳಿದೆ.





Ads on article

Advertise in articles 1

advertising articles 2

Advertise under the article