-->
400 ರೂ. ಲಂಚ ಪ್ರಕರಣ: ಆರೋಪಿ ವಿರುದ್ಧದ ಕಡ್ಡಾಯ ನಿವೃತ್ತಿ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

400 ರೂ. ಲಂಚ ಪ್ರಕರಣ: ಆರೋಪಿ ವಿರುದ್ಧದ ಕಡ್ಡಾಯ ನಿವೃತ್ತಿ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

400 ರೂ. ಲಂಚ ಪ್ರಕರಣ: ಆರೋಪಿ ವಿರುದ್ಧದ ಕಡ್ಡಾಯ ನಿವೃತ್ತಿ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

ಶೆಡ್ ನಿರ್ಮಾಣಕ್ಕೆ ಅನುಮತಿ ನೀಡಲು 2008ರಲ್ಲಿ 400 ರೂ. ಲಂಚ ಸ್ವೀಕರಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ ಅಧಿಕಾರಿಯ ವಿರುದ್ಧ ನೀಡಲಾದ ಕಡ್ಡಾಯ ನಿವೃತ್ತಿ ಆದೇಶವನ್ನು ರದ್ದುಗೊಳಿಸಬೇಕು ಎಂಬ ಅರ್ಜಿದಾರರ ಮನವಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.ನ್ಯಾ. ಎಸ್.ಜಿ. ಪಂಡಿತ್ ಅವರ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, ಕಡ್ಡಾಯ ಸೇವಾ ನಿವೃತ್ತಿ ಮಾಡಿರುವ ಆದೇಶವನ್ನು ರದ್ದುಗೊಳಿಸಬೇಕು ಎಂಬ ದ್ವಿತೀಯ ದರ್ಜೆ ಸಹಾಯಕ ನರಸಿಂಹಲು ಅವರ ಮನವಿ ಅರ್ಜಿಯನ್ನು ವಜಾ ಮಾಡಿದೆ.ಕೊಪ್ಪಳ ಜಿಲ್ಲಾ ವಿಶೇಷ ನ್ಯಾಯಾಲಯದಲ್ಲಿ ಆರೋಪಿಯು ಖುಲಾಸೆಗೊಂಡಿದ್ದಾರೆ. ಆರೋಪಿಗೆ ಅನುಮಾನದ ಲಾಭ ನೀಡಲಾಗಿದೆ. ಗೌರವಪೂರ್ವಕವಾಗಿ ಪ್ರಕರಣದಲ್ಲಿ ದೋಷಮುಕ್ತರಾಗಿದ್ದಲ್ಲ. ಲಂಚದ ಹಣ ಪಡೆದಿರುವ ಬಗ್ಗೆ ಒಂದು ಸಂಶಯ ನಿರ್ಮಾಣವಾಗುತ್ತದೆ ಎಂಬ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಗಮನಿಸಿತು.2ನೇ ಶೋ ಕಾಸ್ ನೋಟೀಸ್ ಜೊತೆಗೆ ತನಿಖಾ ವರದಿಯನ್ನು ತನಗೆ ನೀಡಲ್ಲ ಎಂಬ ಅರ್ಜಿದಾರರ ವಾದವನ್ನೂ ನ್ಯಾಯಪೀಠ ತಿರಸ್ಕರಿಸಿತು. ಈ ವಾದವನ್ನು ನಂಬಲಾಗದು ಮತ್ತು ಮಾನ್ಯ ಮಾಡಲಾಗದು. 2015ರ ಮೇ 4ರಂದೇ 2ನೇ ಷೋಕಾಸ್‌ ನೋಟಿಸ್‌ ಜತೆ ತನಿಖಾ ವರದಿ ಸೇರಿಸಲಾಗಿದೆ. ದಕ್ಕೆ ಅರ್ಜಿದಾರರು ತಕರಾರನ್ನೂ ಸಲ್ಲಿಸಿದ್ದಾರೆ. ಹಾಗಾಗಿ, ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಪೀಠ ಹೇಳಿದೆ.2008ರಲ್ಲಿ ಸೈಟಿನಲ್ಲಿ ಶೆಡ್ ನಿರ್ಮಾಣಕ್ಕಾಗಿ ಪರವಾನಿಗೆ ನೀಡಲು ರೂ. 400 ಲಂಚ ಪಡೆದ ಆರೋಪದಲ್ಲಿ ನರಸಿಂಹಲು ಅವರನ್ನು 2015ರಲ್ಲಿ ನಗರಾಭಿವೃದ್ಧಿ ಇಲಾಖೆ ಕಡ್ಡಾಯ ನಿವೃತ್ತಿ ಆದೇಶ ಮಾಡಿತ್ತು. ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು."ಕೋರ್ಟ್ ಅಥವಾ ನ್ಯಾಯ ಮಂಡಳಿ, ತನ್ನ ನ್ಯಾಯಿಕ ಪರಿಶೀಲನಾ ಅಧಿಕಾರ ಚಲಾಯಿಸುವಾಗ ದಾಖಲೆಯಲ್ಲಿರುವ ಸಾಕ್ಷ್ಯವನ್ನು ಮರು ಪರಿಶೀಲಿಸಲು ಮೇಲ್ಮನವಿ ಪ್ರಾಧಿಕಾರವಾಗಿ ಕೆಲಸ ಮಾಡುವುದಿಲ್ಲ. ಶಿಕ್ಷೆ ಪ್ರಕಟಿಸುವ ಆಯಾ ಪ್ರಾಧಿಕಾರವು ಆ ಪ್ರಕರಣದ ವಾಸ್ತವಾಂಶಗಳ ಮುಖ್ಯಸ್ಥನಾಗಿರುತ್ತದೆ. 


ಅಲ್ಲಿ ಆರೋಪಿತ ಅಧಿಕಾರಿಯ ವಿರುದ್ಧದ ಆರೋಪವನ್ನು ಸಮರ್ಥಿಸಿಕೊಳ್ಳಲು ತನಿಖಾಧಿಕಾರಿಯು ಸಾಕಷ್ಟು ಸಮಯ ನೀಡುವ ಮೂಲಕ ಸ್ವಾಭಾವಿಕ ನ್ಯಾಯ ತತ್ವ ಪಾಲಿಸಿದ್ದಾರೆಯೆ ಎಂಬುದು ಮುಖ್ಯ ವಿಷಯ. 


ಈ ಹಂತದಲ್ಲಿ ಲೋಪ ಯಾ ಅಕ್ರಮ ಆಗಿದ್ದರೆ ಆಗ ಮಾತ್ರವೇ ಕೋರ್ಟ್ ಯಾ ಮೇಲ್ಮನವಿ ಪ್ರಾಧಿಕಾರವು ನ್ಯಾಯಿಕ ಪರಿಶೀಲನೆಗೆ ಒಳಪಡಿಸುತ್ತದೆ” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.ಇದನ್ನೂ ಓದಿ

ಮೈಸೂರು: ಲೈಂಗಿಕ ಅಪರಾಧಕ್ಕೆ 43 ವರ್ಷ ಜೈಲು- ದೇಶದಲ್ಲೇ ಮೊದಲ ಪ್ರಕರಣವಿದು!.

Ads on article

Advertise in articles 1

advertising articles 2

Advertise under the article