-->
ಅಪಘಾತದ ವಾಹನ ಬಿಡುಗಡೆ: ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನೀಡಿದ ಸ್ಪಷ್ಟ ನಿರ್ದೇಶನ ಏನು..?

ಅಪಘಾತದ ವಾಹನ ಬಿಡುಗಡೆ: ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನೀಡಿದ ಸ್ಪಷ್ಟ ನಿರ್ದೇಶನ ಏನು..?

ಅಪಘಾತದ ವಾಹನ ಬಿಡುಗಡೆ: ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ನೀಡಿದ ಸ್ಪಷ್ಟ ನಿರ್ದೇಶನ ಏನು..?





ಅಪಘಾತದ ಪ್ರಕರಣಗಳಲ್ಲಿ ವಿಮೆ ಇಲ್ಲ ಎಂಬ ಕಾರಣ ನೀಡಿ ವಾಹನವನ್ನು ಮಾಲೀಕರಿಗೆ ಬಿಡುಗಡೆ ಮಾಡಲು ಪೊಲೀಸರು ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.



ವಾಹನಕ್ಕೆ ವಿಮೆ ಮಾಡಿಸಿಲ್ಲ ಎಂಬ ಕಾರಣ ನೀಡಿ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಚೌಡೇಶ್ವರಿ ನಗರದ ನಿವಾಸಿ ಗಣೇಶ್ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ನ್ಯಾಯ ಪೀಠ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಅರ್ಜಿಯನ್ನು ಪುರಸ್ಕರಿಸಿದೆ. ಅರ್ಜಿದಾರರಿಗೆ ಅಗತ್ಯ ಶರತ್ತುಗಳನ್ನು ವಿಧಿಸಿ ವಾಹನ ಬಿಡುಗಡೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ



ರಸ್ತೆ ಅಪಘಾತದಲ್ಲಿ ಗಾಯಗೊಂಡವರ ಹಿತಾಸಕ್ತಿ ಕಾಪಾಡುವುದು ಮತ್ತು ಪರಿಹಾರ ಪಡೆಯುವುದಕ್ಕಾಗಿ ರಾಜ್ಯ ವಿಧಾನ ಮಂಡಲದ ಕರ್ನಾಟಕ ಮೋಟರು ವಾಹನಗಳ ನಿಯಮ 1989ರ ಅಡಿ 232 ಜಿ ಗೆ ತಿದ್ದುಪಡಿ ಮಾಡಿದೆ. ಅದರ ಪ್ರಕಾರ, ಅಪಘಾತಕ್ಕೆ ಸಂಬಂಧಿಸಿದ ವಾಹನ ಬಿಡುಗಡೆ ಮಾಡಲು ಷರತ್ತುಗಳನ್ನು ವಿಧಿಸಬಹುದಾಗಿದೆ. ಈ ಪ್ರಕರಣದಲ್ಲಿ ಅರ್ಜಿದಾರರು ಸಂತ್ರಸ್ತರಾಗಿದ್ದಾರೆ. ಹೀಗಾಗಿ ಅರ್ಜಿದಾರರ ವಾಹನ ಬಿಡುಗಡೆ ಮಾಡಬಹುದು ಎಂದು ನ್ಯಾಯಪೀಠ ತಿಳಿಸಿದೆ



ಘಟನೆಯ ಆರೋಪಿಯಾಗಿರುವವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಶಿಕ್ಷೆಗೆ ಗುರಿಯಾಗಿದ್ದಾರೆ ಹೀಗಾಗಿ ಅರ್ಜಿದಾರರು ಯಾವುದೇ ರೀತಿಯ ಪರಿಹಾರವನ್ನು ಪಾವತಿ ಮಾಡಬೇಕಾದ ಅಗತ್ಯ ಇಲ್ಲ ಹೀಗಾಗಿ ಅರ್ಜಿದಾರರ ವಾಹನಕ್ಕೆ ವಿಮೆ ಮಾಡಿಸಿಲ್ಲ ಎಂಬ ಕಾರಣಕ್ಕೆ ವಾಹನ ಬಿಡುಗಡೆ ಮಾಡುವುದನ್ನು ನಿರಾಕರಣೆ ಮಾಡುವಂತಿಲ್ಲ ಎಂದು ನ್ಯಾಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.



ಪ್ರಕರಣದ ವಿವರ

ಬೆಂಗಳೂರಿನ ಚೌಡೇಶ್ವರಿ ನಗರದ ನಿವಾಸಿಯಾಗಿರುವ ಗಣೇಶ್ ಎಂಬವರ ಮಾಲೀಕತ್ವದ ಕ್ಯಾಂಟರ್ ವಾಹನ 2021ರ ಜನವರಿ 22ರಂದು ಮೈಸೂರು ರಸ್ತೆಯಲ್ಲಿ ಕೆಟ್ಟು ನಿಂತು ಹೋಗಿತ್ತು. ಈ ಸಂದರ್ಭದಲ್ಲಿ ಚಾಲಕ ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿ ಮೆಕ್ಯಾನಿಕ್ ಗಾಗಿ ಕಾಯುತ್ತಿದ್ದರು.


ಈ ಸಂದರ್ಭದಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬೆಂಗಳೂರಿಂದ ಮೈಸೂರಿಗೆ ಹೋಗುತ್ತಿದ್ದ ಮಾರುತಿ ಕಾರು ಬಂದು ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದ ವಾಹನದ ಮುಂಭಾಗ ಜಖಂಗೊಂಡು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು

ಬಿಡದಿ ಪೊಲೀಸರು ಈ ಪ್ರಕರಣವನ್ನು ದಾಖಲಿಸಿ ವಾಹನಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದರು.




Ads on article

Advertise in articles 1

advertising articles 2

Advertise under the article