-->
ಯುವ ವಕೀಲರ ಮೇಲಿನ ದೌರ್ಜನ್ಯ: ಸಿಎಂಗೆ ವಕೀಲರ ಮನವಿ- ಎಸ್‌ಪಿ ಕಚೇರಿ ಚಲೋ ಮುಂದೂಡಿಕೆ

ಯುವ ವಕೀಲರ ಮೇಲಿನ ದೌರ್ಜನ್ಯ: ಸಿಎಂಗೆ ವಕೀಲರ ಮನವಿ- ಎಸ್‌ಪಿ ಕಚೇರಿ ಚಲೋ ಮುಂದೂಡಿಕೆ

ಯುವ ವಕೀಲರ ಮೇಲಿನ ದೌರ್ಜನ್ಯ: ಸಿಎಂಗೆ ವಕೀಲರ ಮನವಿ- ಎಸ್‌ಪಿ ಕಚೇರಿ ಚಲೋ ಮುಂದೂಡಿಕೆ

ಮಂಗಳೂರಿನ ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರನ್ನು ಅಕ್ರಮವಾಗಿ ಬಂಧಿಸುವ ಮೂಲಕ ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನಗಳನ್ನು ಗಾಳಿಗೆ ತೂರಿದ ಆರೋಪಿ ಎಸ್‌ಐ ಸುತೇಶ್ ವಿರುದ್ಧ ವಕೀಲರ ಆಕ್ರೋಶ ಮುಂದುವರಿದಿದೆ.ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಅಧ್ಯಕ್ಷ ಪೃಥ್ವಿರಾಜ್ ರೈ ನೇತೃತ್ವದ ನಿಯೋಗ ಆರೋಪಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿತು.ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ನಾಲ್ಕು ದಿನದೊಳಗೆ ಪ್ರಕರಣವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಭರವಸೆ ಹಿನ್ನೆಲೆಯಲ್ಲಿ ಸೋಮವಾರ ಕರೆಯಲಾಗಿದ್ದ ನಿರ್ಣಾಯಕ ಹೋರಾಟವಾದ ಎಸ್‌ಪಿ ಕಚೇರಿ ಮುತ್ತಿಗೆಯನ್ನು ನಾಲ್ಕು ದಿನಗಳ ಮಟ್ಟಿಗೆ ಮುಂದೂಡಲಾಗಿದೆ. ಎಸ್‌ಪಿ ಕಚೇರಿ ಮುತ್ತಿಗೆ ಹೋರಾಟಕ್ಕೆ ಬೆಂಗಳೂರು ವಕೀಲರ ಸಂಘ ಸೇರಿದಂತೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿತ್ತು.


ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ವಕೀಲರ ಸಂಘಗಳು, ಕುಂದಾಪುರ, ಕಾರ್ಕಳ, ಬಂಟ್ವಾಳ, ಉಡುಪಿ ವಕೀಲರ ಸಂಘಗಳ ಪದಾಧಿಕಾರಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದರು.ಈ ಮಧ್ಯೆ, ಪ್ರಸಕ್ತ ವಿಧಾನ ಮಂಡಲ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಮಂಡಿಸಿ ಅನುಮೋದನೆ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆಗ್ರಹಿಸಿದೆ. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಅವರೂ ಈ ಒತ್ತಾಯಕ್ಕೆ ಧ್ವನಿಗೂಡಿಸಿದ್ದು, ರಾಜ್ಯಾದ್ಯಂತ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯವನ್ನು ಖಂಡಿಸಿದೆ.ಇನ್ನೊಂದೆಡೆ, ವಕೀಲರಿಗೆ ಪ್ರತ್ಯೇಕ ಸಂರಕ್ಷಣಾ ಕಾಯಿದೆ ಅಗತ್ಯವಿಲ್ಲ ಎಂದು ರಾಜ್ಯ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ವಿಶೇಷ ಪಂಗಡಕ್ಕೆ ರಕ್ಷಣೆ ನೀಡುವ ಪ್ರಸ್ತಾಪ ಕಾನೂನಿನಲ್ಲಿ ಇಲ್ಲ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ:

ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಎಸ್‌ಐ: ವಕೀಲನ ಬಂಧನ ವಿರುದ್ಧ ಭುಗಿಲೆದ್ದ ಆಕ್ರೋಶAds on article

Advertise in articles 1

advertising articles 2

Advertise under the article