-->
ಕೇಂದ್ರ Vs ಸುಪ್ರೀಂ ಕೋರ್ಟ್: ಕೋರ್ಟ್ ಮೇಲೆ ಜನರು ಇಟ್ಟ ವಿಶ್ವಾಸ ಎತ್ತಿಹಿಡಿಯಬೇಕಿದೆ- ನ್ಯಾ. ಚಂದ್ರಚೂಡ್

ಕೇಂದ್ರ Vs ಸುಪ್ರೀಂ ಕೋರ್ಟ್: ಕೋರ್ಟ್ ಮೇಲೆ ಜನರು ಇಟ್ಟ ವಿಶ್ವಾಸ ಎತ್ತಿಹಿಡಿಯಬೇಕಿದೆ- ನ್ಯಾ. ಚಂದ್ರಚೂಡ್

ಕೇಂದ್ರ Vs ಸುಪ್ರೀಂ ಕೋರ್ಟ್: ಕೋರ್ಟ್ ಮೇಲೆ ಜನರು ಇಟ್ಟ ವಿಶ್ವಾಸ ಎತ್ತಿಹಿಡಿಯಬೇಕಿದೆ- ನ್ಯಾ. ಚಂದ್ರಚೂಡ್





ನ್ಯಾಯಾಂಗದ ಮೇಲೆ ಜನರಿಗೆ ಅಪಾರ ವಿಶ್ವಾಸ, ಗೌರವ ಇದೆ. ಅದನ್ನು ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮದಾಗಿದೆ. ವೈಯಕ್ತಿಕ ಸ್ವಾತಂತ್ಯ ರಕ್ಷಿಸುವ ಕಾರಣಕ್ಕೆ ಜನರು ನ್ಯಾಯಾಲಯಗಳ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಡಾ. ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.



ಮುಂಬೈ ವಕೀಲರ ಸಂಘ ಆಯೋಜಿಸಿದ್ದ ಅಶೋಕ್ ದೇಸಾಯಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಮಾತುಗಳನ್ನು ಹೇಳಿದ್ದಾರೆ.



ಜಿಲ್ಲಾ ನ್ಯಾಯಾಂಗವಿರಲಿ, ಹೈಕೋರ್ಟ್ ಇರಲಿ ಯಾ ಸುಪ್ರೀಂ ಕೋರ್ಟ್‌ ಇರಲಿ.. ನ್ಯಾಯಪೀಠದ ಮುಂದೆ ಯಾವುದೇ ಪ್ರಕರಣಗಳಿದ್ದರೂ ಅದು ನ್ಯಾಯಾಲಯಗಳಿಗೆ ದೊಡ್ಡದೂ ಅಲ್ಲ ದೊಡ್ಡದೂ ಅಲ್ಲ. ನ್ಯಾಯಾಂಗದ ಮೇಲೆ ಜನರು ಇಟ್ಟ ವಿಶ್ವಾಸ ಮತ್ತು ಅವರ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯ ಹೊಣೆ ಹಾಗೂ ಕಾನೂನಿನ ಸೂಕ್ತ ಪ್ರಕ್ರಿಯೆಯ ನಿರ್ವಹಣೆಯ ಜವಾಬ್ದಾರಿ ನಮ್ಮ ಮೇಲಿದೆ ಎಂದು ಚಂದ್ರಚೂಡ್ ಪರೋಕ್ಷವಾಗಿ ಕಾನೂನು ಸಚಿವ ಕಿರಣ್ ರಿಜುಜು ಅವರು ಮೇಲೆ ವಾಗ್ದಾಳಿ ನಡೆಸಿದರು.



ಈ ಮೂಲಕ ಕೆಲ ದಿನಗಳಿಂದ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಮತ್ತೊಂದು ಖಡಕ್ ಪ್ರತಿಕ್ರಿಯೆಯನ್ನು ನೀಡಿದರು.



ವಿದ್ಯುತ್ ಕಳ್ಳತನ ಕುರಿತ ಪ್ರಕರಣವೊಂದರಲ್ಲಿ ರಾಜ್ಯ ಸರ್ಕಾರ 9 ಪ್ರಕರಣಗಳನ್ನು ದಾಖಲಿಸಿತ್ತು. ಈ ಎಲ್ಲ ಎಫ್‌ಐಆರ್‌ಗಳನ್ನು ಒಟ್ಟಿಗೆ ನೀಡುವ ಬದಲು ಒಂದರ ನಂತರ ಒಂದು ಬರುವಂತೆ ಸರ್ಕಾರ ನೋಡಿಕೊಂಡಿತು ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.



'ವೈಯಕ್ತಿಕ ಸ್ವಾತಂತ್ರ್ಯ'ದ ಪ್ರಕರಣಗಳಲ್ಲಿ ಸೂಕ್ತ ಪರಿಹಾರ ನೀಡದೆ ಹೋದರೆ ನಾವೇಕೆ ಇಲ್ಲಿರಬೇಕು? ಸುಪ್ರೀಮ್ ಕೋರ್ಟ್‌ ಏನು ಮಾಡಿದೆಯೋ ಅದು ಸಂವಿಧಾನದ 136ನೇ ವಿಧಿಯ ಉಲ್ಲಂಘನೆಯಲ್ಲ ಎಂದು ಸ್ಪಷ್ಟಪಡಿಸಿದ ನ್ಯಾ. ಚಂದ್ರಚೂಡ್, ನ್ಯಾಯದೇಗುಲದ ಬಳಿ ಬಂದ ಅರ್ಜಿದಾರರ ಅಂತಹ ಅಳಲು ಆಲಿಸಲೆಂದೇ ಸುಪ್ರೀಂ ಕೋರ್ಟ್‌ ಮಾಹತ್ತರ ಜವಾಬ್ದಾರಿ ನಮ್ಮ ಮೇಲೆ ಇದೆ. ಇಂತಹ ಪ್ರಕರಣಗಳ ಪರಿಹಾರಕ್ಕಾಗಿ ನಾವು ನಿರಂತರ ಶ್ರಮಿಸುತ್ತಿದ್ದೇವೆ” ಎಂದು ಚಂದ್ರಚೂಡ್ ಸ್ಪಷ್ಟಶಬ್ಧಗಳಲ್ಲಿ ತಿಳಳಿದರು.



ಕೆಲ ದಿನಗಳ ಹಿಂದಷ್ಟೇ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸುಪ್ರೀಂ ಕೋರ್ಟ್‌ ವಿರುದ್ಧ ಟೀಕಾಪ್ರಹಾರ ಮಾಡಿದ್ದರು. ಜಾಮೀನು ಅರ್ಜಿಗಳು, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ನಿಷ್ಪ್ರಯೋಜಕ ಎಂದು ಬಣ್ಣಿಸಿದ್ದರು.


ಇದನ್ನು ತರಾಟೆಗೆ ತೆಗೆದುಕೊಂಡ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ಯಾವುದೇ ಜಾಮೀನು ಅರ್ಜಿ ಯಾ ಪಿಐಎಲ್‌ಗಳು ನಿಷ್ಪ್ರಯೋಜಕ ಎಂದು ಹೇಳಲು ಬರುವುದಿಲ್ಲ. ಇಂತಹ ಪ್ರಕರಣಗಳ ವಿಚಾರಣೆ ಪ್ರಾರಂಭಿಸಿದರೆ, ಖಂಡಿತವಾಗಿಯೂ ಅದು ದೊಡ್ಡಮಟ್ಟದಲ್ಲಿ ಸಾಂವಿಧಾನಿಕ ನ್ಯಾಯಾಲಯವೆಂದು ಪರಿಗಣಿಸಲಾಗಿರುವ ಗೌರವಾನ್ವಿತ ನ್ಯಾಯಾಲಯದ ಮೇಲೆ ಹೆಚ್ಚಿನ ಹೊರೆ ಹೊರಿಸುತ್ತದೆ” ಎಂದು ಹೇಳಿದರು.



Read This Also:

ನಾಲ್ಕನೇ ಶನಿವಾರ ಕೋರ್ಟ್‌ಗೆ ರಜೆ ರದ್ದಾಗಿದೆಯೇ..? ಇಲ್ಲಿದೆ ಸ್ಪಷ್ಟೀಕರಣ!


ಕೋರ್ಟ್ ಸುದ್ದಿ: ಜನವರಿಯಿಂದ ಜಾರಿಗೆ ಬರಲಿದೆ ಡಿಜಿಟಲ್ ವಕಾಲತ್ತು


Ads on article

Advertise in articles 1

advertising articles 2

Advertise under the article