-->
ನಾಲ್ಕನೇ ಶನಿವಾರ ಕೋರ್ಟ್‌ಗೆ ರಜೆ ರದ್ದಾಗಿದೆಯೇ..? ಇಲ್ಲಿದೆ ಸ್ಪಷ್ಟೀಕರಣ!

ನಾಲ್ಕನೇ ಶನಿವಾರ ಕೋರ್ಟ್‌ಗೆ ರಜೆ ರದ್ದಾಗಿದೆಯೇ..? ಇಲ್ಲಿದೆ ಸ್ಪಷ್ಟೀಕರಣ!

ನಾಲ್ಕನೇ ಶನಿವಾರ ಕೋರ್ಟ್‌ಗೆ ರಜೆ ರದ್ದಾಗಿದೆಯೇ..? ಇಲ್ಲಿದೆ ಸ್ಪಷ್ಟೀಕರಣ!

ರಾಜ್ಯದ ನ್ಯಾಯಾಲಯಗಳಿಗೆ ನಾಲ್ಕನೇ ಶನಿವಾರದ ರಜೆಯ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಾರ್ತೆಯ ಬಗ್ಗೆ ಸ್ಪಷ್ಟೀಕರಣ


ರಾಜ್ಯದ ವಿಚಾರಣಾ ನ್ಯಾಯಾಲಯಗಳಿಗೆ ನಾಲ್ಕನೇ ಶನಿವಾರದ ರಜೆ ರದ್ದು ಎಂಬ ಸುದ್ದಿ ವಾಟ್ಸ್ಯಾಪ್ ಗುಂಪುಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ವಾರ್ತೆಯ ಕುರಿತು ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ಅಭಿಯೋಜಕರಲ್ಲಿ ಗೊಂದಲ ಮೂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡುತ್ತಿದ್ದೇವೆ.ಕರ್ನಾಟಕ ಸರಕಾರವು ದಿನಾಂಕ 13.6.2019 ರಂದು ಅಧಿಸೂಚನೆ ಹೊರಡಿಸಿ ಪ್ರತಿ ತಿಂಗಳ ನಾಲ್ಕನೆಯ ಶನಿವಾರವನ್ನು ಸಾರ್ವತ್ರಿಕ ರಜೆ ಎಂದು ಘೋಷಿಸಿತು. ದಿನಾಂಕ 12.12.2019 ರಂದು ತಿದ್ದೋಲೆ ಹೊರಡಿಸಿ ದಿನಾಂಕ 13.6.2019 ರ ಅಧಿಸೂಚನೆಯನ್ನು ಭಾಗಶಃ ಮಾರ್ಪಡಿಸಿ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ರಾಜ್ಯದ ಎಲ್ಲಾ ವಿಚಾರಣಾ ನ್ಯಾಯಾಲಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ನ್ಯಾಯಾಲಯಗಳಲ್ಲಿನ ಪ್ರಕರಣಗಳಿಗಾಗಿ ಸಮನ್ವಯಿಸಲು ಹಾಗೂ ನ್ಯಾಯಾಲಯದ ಪ್ರಕರಣಗಳಿಗೆ ಹಾಜರಾಗುವ ರಾಜ್ಯ ಸರಕಾರಿ ಅಧಿಕಾರಿಗಳು/ ನೌಕರರಿಗೆ ನಾಲ್ಕನೆಯ ಶನಿವಾರದ ರಜೆಯನ್ನು ಸರಕಾರವು ರದ್ದುಪಡಿಸಿತು.ದಿನಾಂಕ 12.12.2019 ರಂದು ಸರಕಾರವು ಹೊರಡಿಸಿದ ತಿದ್ದೋಲೆಯ ಬಗ್ಗೆ ಮಾನ್ಯ ಹೈಕೋರ್ಟ್ ಸ್ಪಷ್ಟೀಕರಣ ನೀಡಿದ್ದು ನಾಲ್ಕನೇ ಶನಿವಾರದಂದು ರಾಜ್ಯದ ಎಲ್ಲ ಕೋರ್ಟ್‌ಗಳಲ್ಲಿ ಯಾವುದೇ ಕೋರ್ಟ್ ಕಲಾಪ ಇರುವುದಿಲ್ಲ. ಆದರೆ ನ್ಯಾಯಾಂಗ ಅಧಿಕಾರಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಸದರಿ ದಿನ ಪೂರ್ವಾಹ್ನ 10.00 ರಿಂದ ಅಪರಾಹ್ನ 2:00 ವರೆಗೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ಮೂರನೇಯ ಶನಿವಾರದ ತಪಾಸಣೆಯನ್ನು ನಾಲ್ಕನೆಯ ಶನಿವಾರದಂದು ನಡೆಸತಕ್ಕದ್ದು.ಸದರಿ ನಾಲ್ಕನೆಯ ಶನಿವಾರದಂದು ತೆರೆದ ನ್ಯಾಯಾಲಯದ ಕಲಾಪಗಳು ನಡೆಯದೇ ಇರುವುದರಿಂದ ವಕೀಲರುಗಳು, ಅಭಿಯೋಜಕರು, ಸರಕಾರಿ ವಕೀಲರು ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ಹಾಜರಾಗುವ ರಾಜ್ಯ ಸರಕಾರಿ ಅಧಿಕಾರಿಗಳು /ನೌಕರರಿಗೆ ಸರಕಾರದ ಅಧಿಸೂಚನೆಯಂತೆ ಸಾರ್ವತ್ರಿಕ ರಜೆ ದೊರಕಲಿದೆ. ಆದರೆ ನ್ಯಾಯಾಲಯದ ಕಚೇರಿ ಪೂರ್ವಾಹ್ನ ತೆರೆದಿರುವುದರಿಂದ ನೂತನ ಪ್ರಕರಣಗಳನ್ನು ದಾಖಲಿಸಲು ನಕಲಿಗಾಗಿ ಅರ್ಜಿ ಸಲ್ಲಿಸಲು ಹಾಗೂ ನ್ಯಾಯಾಲಯದ ಇನ್ನಿತರ ಸೇವೆಗಳನ್ನು ಪಡೆಯಲು ಅವಕಾಶವಿದೆ.ನಾಲ್ಕನೆಯ ಶನಿವಾರದಂದು ಸರಕಾರವು ಸಾರ್ವತ್ರಿಕ ರಜೆಯನ್ನು ಘೋಷಿಸಿರುವುದರಿಂದ ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೂ ಸದರಿ ದಿನದಂದು ಸಾರ್ವತ್ರಿಕ ರಜೆಯನ್ನು ಘೋಷಿಸಬೇಕೆಂದು ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘವು ಮಾನ್ಯ ಹೈಕೋರ್ಟಿಗೆ ಸಲ್ಲಿಸಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.ಆದುದರಿಂದ ಪ್ರತಿ ತಿಂಗಳ ನಾಲ್ಕನೆಯ ಶನಿವಾರದಂದು ನ್ಯಾಯಾಂಗ ಅಧಿಕಾರಿಗಳು ಹಾಗೂ ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪೂರ್ವಾಹ್ನ 10.00 ರಿಂದ ಅಪರಾಹ್ನ 2.00 ಗಂಟೆಯ ವರೆಗೆ ನ್ಯಾಯಾಲಯದ ಕಚೇರಿಯಲ್ಲಿ ಉಪಸ್ಥಿತರಿರಬೇಕಾಗಿದೆ.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ನ್ಯಾಯಾಂಗ ಇಲಾಖೆ, ಮಂಗಳೂರುಇದನ್ನೂ ಓದಿ:

ಕ್ರಿಮಿನಲ್ ಪ್ರಕರಣ ಇದ್ದರೆ ನೋಟೀಸ್ ನೀಡದೆ ಸರ್ಕಾರಿ ನೌಕರರ ಅಮಾನತು: ಇಲಾಖೆಯ ಕ್ರಮಕ್ಕೆ ಅಸ್ತು ಎಂದ ಕರ್ನಾಟಕ ಹೈಕೋರ್ಟ್‌
ಕೋರ್ಟ್ ಆದೇಶಕ್ಕಿಂತ ರಿಜಿಸ್ಟ್ರಾರ್‌ ಮೇಲಲ್ಲ: ನಿರ್ದಿಷ್ಟ ಪ್ರಕರಣ ಪಟ್ಟಿ ಮಾಡದ ರಿಜಿಸ್ಟ್ರಿ ಮೇಲೆ ಸುಪ್ರೀಂ ಕೋರ್ಟ್‌ ಗುಡುಗು!ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು


ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!
ಕ್ರಿಮಿನಲ್‌ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣAds on article

Advertise in articles 1

advertising articles 2

Advertise under the article