-->
2023 ನೆಯ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್

2023 ನೆಯ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್

2023 ನೆಯ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್ 2023 ನೇ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದೆ.


ಸಾರ್ವತ್ರಿಕ ರಜಾ ದಿನಗಳ ಕುರಿತು ರಾಜ್ಯ ಸರಕಾರವು ಪ್ರಕಟಿಸಿದ ಕ್ಯಾಲೆಂಡರ್ ಹಾಗೂ ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ ಕ್ಯಾಲೆಂಡರ್ ಅವಲೋಕಿಸಿದಾಗ ಕರ್ನಾಟಕ ಹೈಕೋರ್ಟ್ ಈ ಕೆಳಗಿನ ನಾಲ್ಕು ಹಬ್ಬಗಳಿಗೆ ಹೆಚ್ಚುವರಿಯಾಗಿ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.


1. ಹೋಳಿ ಹಬ್ಬ (8.3.2023)


2. ಶ್ರೀ ಕೃಷ್ಣ ಜನ್ಮಾಷ್ಟಮಿ (6.9.2023)


3. ವರಮಹಾಲಕ್ಷ್ಮಿ ವ್ರತ (25.8.2023)


4.ಧನಲಕ್ಷ್ಮಿ ಪೂಜೆ ,(ಬಲೀಂದ್ರ ಪೂಜೆ) (13.11.2023)ಮೇಲ್ಕಾಣಿಸಿದ ನಾಲ್ಕು ಹಬ್ಬಗಳಿಗೆ ರಾಜ್ಯ ಸರಕಾರವು ಸಾರ್ವತ್ರಿಕ ರಜೆಯನ್ನು ಘೋಷಿಸಿಲ್ಲ.


ಮೇಲ್ಕಾಣಿಸಿದ ನಾಲ್ಕು ಹಬ್ಬಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿರುವುದರಿಂದ ಸದರಿ ನಾಲ್ಕು ದಿನಗಳ ಬದಲಿಗೆ ಮಾರ್ಚ್, ಆಗಸ್ಟ್, ಸೆಪ್ಟೆಂಬರ್ ಮತ್ತು ನವಂಬರ್ ತಿಂಗಳ ನಾಲ್ಕನೆಯ ಶನಿವಾರದಂದು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕಲಾಪಗಳು ನಡೆಯಲಿವೆ.


ಶ್ರೀ ಕೃಷ್ಣ ಜನ್ಮಾಷ್ಟಮಿ (ಮೊಸರು ಕುಡಿಕೆ) ಹಬ್ಬವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಹಳಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಉಭಯ ಜಿಲ್ಲೆಗಳ ಸರಕಾರಿ ನೌಕರರಿಗೆ ಸ್ಥಳೀಯವಾಗಿ ಸಾರ್ವತ್ರಿಕ ರಜೆಯನ್ನು ಘೋಷಿಸಬೇಕೆಂದು ಮಾಡಿದ ಮನವಿಗೆ ರಾಜ್ಯ ಸರಕಾರ ಇದುವರೆಗೂ ಸ್ಪಂದಿಸದಿದ್ದರೂ ಇದೀಗ ಹೈಕೋರ್ಟ್ ಸಾರ್ವತ್ರಿಕ ರಜೆಯನ್ನು ಘೋಷಿಸಿದ್ದು ಉಭಯ ಜಿಲ್ಲೆಗಳ ನ್ಯಾಯಾಂಗ ನೌಕರರಿಗೆ ಸಂತಸವನ್ನುಂಟು ಮಾಡಿದೆ.


ಹಾಗೆ ವರಮಹಾಲಕ್ಷ್ಮಿ ವ್ರತ ಆಚರಣೆಗಾಗಿ ಸಾರ್ವತ್ರಿಕ ರಜೆಯನ್ನು ಘೋಷಿಸುವ ಮೂಲಕ ರಾಜ್ಯದ ನ್ಯಾಯಾಂಗ ಇಲಾಖೆಯ ಮಹಿಳಾ ನೌಕರರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದಂತಾಗಿದೆ.


ಮಕರ ಸಂಕ್ರಾಂತಿ, ಬಸವ ಜಯಂತಿ, ನರಕ ಚತುರ್ದಶಿ ಹಬ್ಬಗಳು ಭಾನುವಾರ ಬರುವುದರಿಂದ ಹಾಗೂ ಮಹಾಲಯ ಅಮಾವಾಸ್ಯೆ ಹಬ್ಬ ಎರಡನೇ ಶನಿವಾರದಂದು ಬರುವುದರಿಂದ ಸದರಿ ನಾಲ್ಕು ದಿನಗಳ ರಜೆ ನಷ್ಟವಾಗಿದೆ.


ರಾಜ್ಯದ ಎಲ್ಲಾ ಸಿವಿಲ್ ನ್ಯಾಯಾಲಯಗಳಿಗೆ ಹಾಗೂ ಕೌಟುಂಬಿಕ ನ್ಯಾಯಾಲಯಗಳಿಗೆ ಈ ಕೆಳಗಿನ ಅವಧಿಯಲ್ಲಿ ಬೇಸಿಗೆ ರಜೆ, ದಸರಾ ರಜೆ ಹಾಗೂ ಚಳಿಗಾಲದ ರಜೆಗಳನ್ನು ಘೋಷಿಸಲಾಗಿದೆ.


ಬೇಸಿಗೆ ರಜೆ - 24.4.2023 ರಿಂದ 20.5.2023


ದಸರಾ ರಜೆ - 16.10.2023 ರಿಂದ 21.10.2023


ಚಳಿಗಾಲದ ರಜೆ - 22.12.2023 ರಿಂದ 30.12.2023


ರಾಜ್ಯದ ಕ್ರಿಮಿನಲ್ ನ್ಯಾಯಾಲಯಗಳು ಹಾಗೂ ಕಾರ್ಮಿಕ ನ್ಯಾಯಾಲಯಗಳು ಮೇಲ್ಕಾಣಿಸಿದ ರಜಾ ಅವಧಿಯಲ್ಲಿ ಕಾರ್ಯನಿರ್ವಹಿಸಲಿವೆ.


ದಿನಾಂಕ 1.1.2024 ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಂಗ ಇಲಾಖೆ ಇದನ್ನೂ ಓದಿ

20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ
ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪುವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!

Ads on article

Advertise in articles 1

advertising articles 2

Advertise under the article