-->
'ಕಾಂತಾರ'ಕ್ಕೆ ರಿಲೀಫ್- 'ವರಾಹ ರೂಪಂ'ಗೆ ಇದ್ದ ನಿರ್ಬಂಧ ತೆರವು: ಥೈಕ್ಕುಡಂ ಬ್ರಿಜ್‌ ಅರ್ಜಿಯಲ್ಲಿ ಯಾವ ನ್ಯೂನ್ಯತೆ ಇತ್ತು..?

'ಕಾಂತಾರ'ಕ್ಕೆ ರಿಲೀಫ್- 'ವರಾಹ ರೂಪಂ'ಗೆ ಇದ್ದ ನಿರ್ಬಂಧ ತೆರವು: ಥೈಕ್ಕುಡಂ ಬ್ರಿಜ್‌ ಅರ್ಜಿಯಲ್ಲಿ ಯಾವ ನ್ಯೂನ್ಯತೆ ಇತ್ತು..?

'ಕಾಂತಾರ'ಕ್ಕೆ ರಿಲೀಫ್- 'ವರಾಹ ರೂಪಂ'ಗೆ ಇದ್ದ ನಿರ್ಬಂಧ ತೆರವು: ಥೈಕ್ಕುಡಂ ಬ್ರಿಜ್‌ ಅರ್ಜಿಯಲ್ಲಿ ಯಾವ ನ್ಯೂನ್ಯತೆ ಇತ್ತು..?


ಕಾಂತಾರ ಚಿತ್ರದ ಸೂಪರ್ ಹಿಟ್ ಹಾಡು ವರಾಹ ರೂಪಂ ಹಾಡಿಗೆ ಇದ್ದ ನಿರ್ಬಂಧ ಕಳಚಿ ಬಿದ್ದಿದೆ. ಹೊಂಬಾಳೆ ಫಿಲಂಸ್ ವಿರುದ್ಧ ಮಾತೃಭೂಮಿ ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಲಿ. ಕಂಪೆನಿ ಹೂಡಿದ್ದ ದಾವೆಯನ್ನು ನ್ಯಾಯಾಲಯ ಹಿಂತಿರುಗಿಸಿ ಹಿನ್ನೆಲೆಯಲ್ಲಿ ಪ್ರತಿಬಂಧಕಾಜ್ಞೆ ಅದರಷ್ಟಕ್ಕೆ ಕಳಚಿ ಬಿದ್ದಿದ್ದು, ವರಾಹ ರೂಪಂ ಹಾಡನ್ನು ಬಳಸಲು ಇದ್ದ ಅಡ್ಡಿ ನಿವಾರಣೆಯಾಗಿದೆ.ನಿಜವಾಗಿ ಆಗಿರುವುದೇನು...?

ವಿಶ್ವಾದ್ಯಂತ ಯಶಸ್ವೀ ಪ್ರದರ್ಶನ ಕಂಡ ಕಾಂತಾರದ ಸೂಪರ್ ಹಿಟ್ 'ವರಾಹ ರೂಪಂʼ ಗೀತೆ ಥೈಕ್ಕುಡಂ ಬ್ರಿಜ್ ಚಿತ್ರದ ಹಾಡಿನ ಕಾರ್ಬನ್ ಕಾಪಿ.. ಹಾಗಾಗಿ ಹಕ್ಕುಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಮಾತೃಭೂಮಿ ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಲಿ. ಕಂಪೆನಿ ಹೊಂಬಾಳೆ ಫಿಲಂಸ್‌ ವಿರುದ್ಧ ಕೇರಳದ ಕೋಯಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿತ್ತು.ಈ ಅರ್ಜಿಯನ್ನು ಪರಿಶೀಲಿಸಿದ ಎರಡೂ ಜಿಲ್ಲಾ ನ್ಯಾಯಾಲಯಗಳು ಈ ಹಾಡನ್ನು ಬಳಸದಂತೆ ಹೊಂಬಾಳೆ ಫಿಲಂಸ್‌ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ವಿಧಿಸಿತ್ತು. ದಾವೆ ಹೂಡಿದ ಸಂದರ್ಭದಲ್ಲಿ ಮೌನವಾಗಿದ್ದ ಹೊಂಬಾಳೆ ಫಿಲಂಸ್‌ ತಾತ್ಕಾಲಿಕ ಪ್ರತಿಬಂಧಕಾಜ್ಞೆ ವಿರುದ್ದ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಕೇರಳ ಹೈಕೋರ್ಟ್‌ ಈ ಮೇಲ್ಮನವಿಯನ್ನು ವಜಾಗೊಳಿಸಿತ್ತು.ಕೋಯಿಕ್ಕೋಡ್ ಜಿಲ್ಲಾ ನ್ಯಾಯಾಲಯ 'ಥೈಕ್ಕುಡಂ ಬ್ರಿಜ್' ಸಲ್ಲಿಸಿದ್ದ ಅರ್ಜಿ ವಿಚಾರಣೆ ನಿರ್ವಹಣೆಗೆ ಯೋಗ್ಯವಲ್ಲ ಎಂದು ವಜಾಗೊಳಿಸಿತ್ತು. ಆದರೆ, ಈ ಆದೇಶಕ್ಕೆ ಡಿಸೆಂಬರ್ 1ರಂದು ಕೇರಳ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಮರುದಿನ ಜಿಲ್ಲಾ ನ್ಯಾಯಾಲಯವು ಥೈಕ್ಕುಡಂ ಬ್ರಿಜ್‌ ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಲಾಗಿದೆ ಎಂದ ಮಾತ್ರಕ್ಕೆ 'ವರಾಹರೂಪಂ' ಹಾಡಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಪ್ರತಿಬಂಧಕಾಜ್ಞೆ ಪುನರುಜ್ಜೀವನಗೊಂಡಿದೆ ಎಂದಲ್ಲ ಎಂದು ಸ್ಪಷ್ಟಪಡಿಸಿತ್ತು.ಇದಾದ ನಂತರ, ದಾವೆದಾರ ಎಂಪಿಸಿಸಿಎಲ್ ಕಂಪೆನಿ ರಿಜಿಸ್ಟರ್ಡ್‌ ಕಚೇರಿ ಕೋಯಿಕ್ಕೋಡ್ ನಲ್ಲಿ ಇರುವುದರಿಂದ ಕೋಯಿಕ್ಕೋಡ್‌ ಜಿಲ್ಲಾ ನ್ಯಾಯಾಲಯ ಪ್ರಕರಣದ ವ್ಯಾಪ್ತಿ ಹೊಂದಿದೆ ಎಂದು ಪಾಲಕ್ಕಾಡ್ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೂರನ್ನು ಹಿಂದಿರುಗಿಸಿದೆ.ಈ ಮೂಲಕ, ಅಂತಿಮವಾಗಿ ಎರಡೂ ವಿಚಾರಣಾ ನ್ಯಾಯಾಲಯಗಳು ಥೈಕ್ಕುಡಂ ಅರ್ಜಿಯನ್ನು 'ವಿಚಾರಣಾ ವ್ಯಾಪ್ತಿ'ಯ ಕೊರತೆಯಿಂದ ವಾಪಸ್ ಮಾಡಿರುವುದರಿಂದ ವರಾಹ ರೂಪಂ ಹಾಡನ್ನು ಈ ಹಿಂದಿನಂತೆಯೇ ಕಾಂತಾರ ಸಿನಿಮಾದಲ್ಲಿ ಬಳಸಿಕೊಳ್ಳಲು ಹೊಂಬಾಳೆ ಸಂಸ್ಥೆಗೆ ಇದ್ದ ಎಲ್ಲ ಅಡ್ಡಿ ನಿವಾರಣೆಯಾದಂತಾಗಿದೆ.


Ads on article

Advertise in articles 1

advertising articles 2

Advertise under the article