-->
ಮಂಗಳೂರು ಪೊಲೀಸರ ಯಡವಟ್ಟು: ಐದು ಲಕ್ಷ ರೂಪಾಯಿ ದಂಡದ ಶಿಕ್ಷೆಗೆ ಗುರಿಯಾದ ಖಾಕಿ ಪಡೆ!

ಮಂಗಳೂರು ಪೊಲೀಸರ ಯಡವಟ್ಟು: ಐದು ಲಕ್ಷ ರೂಪಾಯಿ ದಂಡದ ಶಿಕ್ಷೆಗೆ ಗುರಿಯಾದ ಖಾಕಿ ಪಡೆ!

ಮಂಗಳೂರು ಪೊಲೀಸರ ಯಡವಟ್ಟು: ಐದು ಲಕ್ಷ ರೂಪಾಯಿ ದಂಡದ ಶಿಕ್ಷೆಗೆ ಗುರಿಯಾದ ಖಾಕಿ ಪಡೆ!

ನೈಜ ಆರೋಪಿಯನ್ನು ಬಂಧಿಸದೇ ಅದೇ ಹೆಸರಿನ ಇನ್ನೊಬ್ಬ ಆರೋಪಿಯನ್ನು ನ್ಯಾಯಾಲಯದ ಮುಂದೆ ನಿಲ್ಲಿಸಿದ ಮಂಗಳೂರು ಪೊಲೀಸರು ಇಕ್ಕಟ್ಟಿಗೆ ಸಿಕ್ಕಿದ್ದಾರೆ. ಪೋಕ್ಸೋ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ವಿಶೇಷ ನ್ಯಾಯಾಲಯ ತಪ್ಪಿತಸ್ಥ ಪೊಲೀಸರಿಗೆ ದಂಡ ಕಟ್ಟುವಂತೆ ಆದೇಶಿಸಿ ತೀರ್ಪು ನೀಡಿದೆ.


ಗಂಭೀರ ಪ್ರಕರಣವಾದ ಪೋಕ್ಸೋ ಕೇಸಿನಲ್ಲಿ ನಿಜವಾದ ಆರೋಪಿಯನ್ನು ಶೋಧಿಸದೆ ಇನ್ನೊಬ್ಬ ಅದೇ ಹೆಸರಿನ ವ್ಯಕ್ತಿಯನ್ನು ಮಂಗಳೂರಿನ ಇಬ್ಬರು ಮಹಿಳಾ ಪೊಲೀಸರು ನ್ಯಾಯಾಲಯದ ಮುಂದೆ ನಿಲ್ಲಿಸಿದ್ದರು.ಈ ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ವಿಶೇಷ ನ್ಯಾಯಾಲಯ, ಅಮಾಯಕ ವ್ಯಕ್ತಿ ಸುಮಾರು ಒಂದು ವರ್ಷ ಜೈಲಿನಲ್ಲಿ ಇರಲು ಕಾರಣರಾದ ಮಹಿಳಾ ಪೊಲೀಸ್‌ ಅಧಿಕಾರಿಗಳಿಬ್ಬರು ತಮ್ಮ ಸ್ವಂತ ದುಡ್ಡಿನಲ್ಲಿ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದೆ.ಮಂಗಳೂರು ಮಹಿಳಾ ಪೊಲೀಸ್‌ ಠಾಣಾ ನಿರೀಕ್ಷಕರಾದ ರೇವತಿ ಮತ್ತು ಉಪನಿರೀಕ್ಷಕರಾದ ರೋಸಮ್ಮ ಪಿ ಪಿ ತಪ್ಪೆಸಗಿದ ಇಬ್ಬರು ಅಧಿಕಾರಿಗಳಾಗಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೂ ನ್ಯಾಯಾಲಯ ನಿರ್ದೇಶನ ನೀಡಿದೆ.ಪ್ರಕರಣದ ವಿವರ:

ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣದಲ್ಲಿ ನವೀನ್‌ ಎನ್ನುವ ವ್ಯಕ್ತಿ ಆರೋಪಿಯಾಗಿದ್ದ. ಬಾಲಕಿಯ ಹೇಳಿಕೆ ಪಡೆದ ಎಸ್‌.ಐ ರೋಸಮ್ಮ ನವೀನ್‌ ಮೇಲೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸ್‌ ನಿರೀಕ್ಷಕಿ ರೇವತಿಯವರಿಗೆ ಹಸ್ತಾಂತರಿಸಿದ್ದರು.ತನಿಖೆಯ ಹಂತದಲ್ಲಿ ಪೊಲೀಸರು ನವೀನ್‌ ಸಿಕ್ವೇರ ಎಂಬವರನ್ನು ಬಂಧಿಸಿದ್ದರು. ಸಂತ್ರಸ್ತ ನೊಂದ ಬಾಲಕಿ ತನ್ನ ದೂರಿನಲ್ಲಿ ಮತ್ತು ಜಡ್ಜ್ ಮುಂದೆ ನೀಡಿದ ಹೇಳಿಕೆಯಲ್ಲಿ ನವೀನ್‌ ಎಂಬ ಆರೋಪಿ ಹೆಸರನ್ನು ಮಾತ್ರ ಉಲ್ಲೇಖ ಮಾಡಿದ್ದರು.ಆದರೆ, ಪೊಲೀಸರು ನವೀನ್‌ ಸಿಕ್ವೇರನನ್ನೇ ಆರೋಪಿಯನ್ನಾಗಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ನವೀನ್‌ ಸಿಕ್ವೇರ ನಿರಪರಾಧಿ ಎಂದು ಖುಲಾಸೆ ಗೊಳಿಸಿದ್ದಾರೆ. ಅಲ್ಲದೆ ಪೊಲೀಸ್‌ ಅಧಿಕಾರಿಗಳು ನಿಜವಾದ ವ್ಯಕ್ತಿಯನ್ನು ಬಂಧಿಸದೆ, ನವೀನ್‌ ಸಿಕ್ವೇರ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಕ್ಕೆ 5 ಲ.ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ.


ಇದನ್ನೂ ಓದಿ

ಕೋರ್ಟ್‌ನಲ್ಲಿ ಟಿಪ್ಸ್‌ ಪಡೆಯಲು ಪೇಟಿಎಂ ಬಳಕೆ: ಸಿಬ್ಬಂದಿಯನ್ನು ಅಮಾನತು ಮಾಡಿದ ಹೈಕೋರ್ಟ್‌


ಮಹಿಳಾ ನ್ಯಾಯಾಧೀಶರಿಗೆ ಚಾಕು ತೋರಿಸಿ ಬೆದರಿಸಿದ ಆರೋಪಿ: ಕೋರ್ಟನ್ನೇ ಬೆಚ್ಚಿಬೀಳಿಸಿದ ಪ್ರಸಂಗ!


20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಹೈಕೋರ್ಟ್ ಮಹತ್ವದ ಆದೇಶ


ಸರ್ಕಾರಿ ನೌಕರರ ಪದೋನ್ನತಿ: ಭಾಗ್ಯದ ಬಾಗಿಲು ತೆರೆದ ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು


ವಿಮೆ ಪರಿಹಾರಕ್ಕೆ HDFC ಹಿಂದೇಟು: ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಬಡ್ಡಿ ಸಹಿತ 30 ಲಕ್ಷ ಪಾವತಿಗೆ ಆದೇಶ


Ads on article

Advertise in articles 1

advertising articles 2

Advertise under the article