-->
ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ: ರಾಜ್ಯ ಸರ್ಕಾರದ ನಿಲುವೇನು..?

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ: ರಾಜ್ಯ ಸರ್ಕಾರದ ನಿಲುವೇನು..?

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ: ರಾಜ್ಯ ಸರ್ಕಾರದ ನಿಲುವೇನು..?
ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.ಬೆಳಗಾವಿಯಲ್ಲಿ ನಡೆದ ಸದನದ ಕಲಾಪದಲ್ಲಿ ಕಾನೂನು, ಸಂಸದೀಯ ವ್ಯವಹಾರ ಸಚಿವ ಜೆ. ಮಾಧುಸ್ವಾಮಿ ಸರ್ಕಾರಿ ನೌಕರರ ಪಿಂಚಣಿ ಯೋಜನೆ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಿದ್ದಾರೆ.2006ರ ನಂತರ ನೇಮಕವಾದ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ (NPS)ನ್ನು ಜಾರಿಗೊಳಿಸಲಾಗಿತ್ತು. ಇದನ್ನು ಹಳೆ ಪಿಂಚಣಿ ಯೋಜನೆ(OPS)ಗೆ ಬದಲಾಯಿಸುವ ಕುರಿತು ಸರ್ಕಾರದ ನಿಲುವಿನ ಬಗ್ಗೆ ತಳವಾರ ಸಾಬಣ್ಣ ಅವರ ಪ್ರಶ್ನೆಗೆ ಮಾಧುಸ್ವಾಮಿ ಉತ್ತರಿಸುತ್ತಿದ್ದರು.2004ರಲ್ಲಿ ಸರ್ಕಾರಿ ನೌಕರರಿಗೆ ಪಿಂಚಣಿ ಕೊಡಲಾಗದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2006ರಲ್ಲಿ ವಿವಿಧ ರಾಜ್ಯ ಸರ್ಕಾರಗಳು ಹೊಸ ಪಿಂಚಣಿ ಯೋಜನೆಯನ್ನು ಜಾರಿ ಮಾಡಿವೆ. ಸರ್ಕಾರ ಖಾಲಿ ಇರುವ ಹುದ್ದೆಗಳಿಗೆ ಮಾಡಲಾದ ನೇಮಕಾತಿ ಸಂದರ್ಭದಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ನೂತನ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ಮಾಹಿತಿ ನೀಡಲಾಗಿದೆ. OPS ಗೆ ಬೇಡಿಕೆ ಇಡಬಾರದು ಎಂಬ ಷರತ್ತಿನ ಮೇಲೆ ನೇಮಕ ಮಾಡಲಾಗಿದೆ. ಸರ್ಕಾರಿ ನೌಕರರು ಇದನ್ನು ಒಪ್ಪಿಕೊಂಡೇ ಕರ್ತವ್ಯಕ್ಕೆ ಸೇರಿದ್ದಾರೆ. ಈಗ ಈ ಷರತ್ತನ್ನು ಉಲ್ಲಂಘಿಸಿ ಹಳೆ ಪಿಂಚಣಿ ಯೋಜನೆ ಕೊಡಿ ಎಂದು ಕೇಳುವುದು ಸರಿಯಲ್ಲ. ಸರ್ಕಾರಿ ನೌಕರರಿಗೆ ಅದು ಸೌಜನ್ಯವೂ ಅಲ್ಲ ಎಂದು ಸಚಿವ ಮಾಧುಸ್ವಾಮಿ ಅಭಿಪ್ರಾಯಪಟ್ಟರು.ಸರ್ಕಾರಿ ನೌಕರರ ಪಿಂಚಣಿಗಾಗಿ ಪ್ರತಿ ತಿಂಗಳು 24 ಕೋಟಿ ರೂ.ಗಳಷ್ಟು ವ್ಯಯವಾಗುತ್ತಿದೆ. ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ OPS ಜಾರಿ ಮಾಡುವುದು ಕಷ್ಟಸಾಧ್ಯ. ಹಾಗಾಗಿ, ಈ ಯೋಜನೆ ಜಾರಿಗೊಳಿಸುವ ಆಲೋಚನೆ ನಮ್ಮ ಸರ್ಕಾರದ ಮುಂದೆ ಇಲ್ಲ. ಆದರೂ ಪ್ರಸಕ್ತ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ OPS ಮತ್ತೆ ಜಾರಿಗೊಳಿಸಬಹುದೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಸದನದಲ್ಲಿ ಚರ್ಚೆ ನಡೆದ ವೇಳೆಗೆ ಭರವಸೆ ನೀಡಿದ್ದಾರೆ. ಈ ನಿಲುವಿಗೆ ನಮ್ಮ ಸರ್ಕಾರ ಬದ್ಧ ಎಂದು ಅವರು ಹೇಳಿದರು.ಕಳೆದ ವಾರವಷ್ಟೇ ಹೊಸ ಸಮಿತಿ ರಚನೆ ಮಾಡಿ ಪರಿಶೀಲಿಸುತ್ತೇವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಈಗ ಸದನದಲ್ಲಿ ಸಚಿವರು ಆಗಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಇದು ಸದನದ ಹೊರಗೆ ಬೇರೆ ಸಂದೇಶ ಹೋಗುತ್ತದೆ. ಪ್ರಚೋದನೆಗೆ ಕಾರಣವಾಗುತ್ತದೆ ಎಂದು ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಹೇಳಿದರು. 


Read This Also


ಜಡ್ಜ್‌ಗಳು ಕಾನೂನಿಗೆ ಮಿಗಿಲಲ್ಲ, ಕರ್ತವ್ಯ ಚ್ಯುತಿಗೆ ಅವರೂ ಪರಿಣಾಮ ಎದುರಿಸಬೇಕು- ಕೇರಳ ಹೈಕೋರ್ಟ್‌


ಲೈಸನ್ಸ್ ರಹಿತ ಬಡ್ಡಿ ವ್ಯಾಪಾರಿಗಳ ಮೇಲೆ ದಾಳಿ ಮಾಡಲು ಪೊಲೀಸರಿಗೆ ಅಧಿಕಾರವಿಲ್ಲ: ಹೈಕೋರ್ಟ್‌


Ads on article

Advertise in articles 1

advertising articles 2

Advertise under the article