-->
ಚೆಕ್ ಅಮಾನ್ಯ ಆರೋಪಿ ಬಂಧನಕ್ಕೆ ಲಂಚ ಬೇಡಿಕೆ: ಭ್ರಷ್ಟ ಪೊಲೀಸ್ ಸಿಬ್ಬಂದಿ ಬಂಧಿಸಿದ ಲೋಕಾಯುಕ್ತ

ಚೆಕ್ ಅಮಾನ್ಯ ಆರೋಪಿ ಬಂಧನಕ್ಕೆ ಲಂಚ ಬೇಡಿಕೆ: ಭ್ರಷ್ಟ ಪೊಲೀಸ್ ಸಿಬ್ಬಂದಿ ಬಂಧಿಸಿದ ಲೋಕಾಯುಕ್ತ

ಚೆಕ್ ಅಮಾನ್ಯ ಆರೋಪಿ ಬಂಧನಕ್ಕೆ ಲಂಚ ಬೇಡಿಕೆ: ಭ್ರಷ್ಟ ಪೊಲೀಸ್ ಸಿಬ್ಬಂದಿ ಬಂಧಿಸಿದ ಲೋಕಾಯುಕ್ತ

ತಮಿಳುನಾಡು ಮೂಲದ ಆರೋಪಿಗೆ ವಾರೆಂಟ್ ಜಾರಿಗೊಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೆಡ್‌ ಕಾನ್ಸ್‌ಟೆಬಲ್ ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಹೊನ್ನಾಳಿ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೆಬಲ್ ಮತ್ತು ಈ ಕೃತ್ಯದಲ್ಲಿ ಭಾಗಿಯಾಗಿ ಅವನಿಗೆ ಬೆಂಬಲ ನೀಡುತ್ತಿದ್ದ ಆತನ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಬಂಧಿಸಲು ಹೊನ್ನಾಳಿ ಠಾಣೆಯ ಭರತ್ 15 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ಆತನ ಮಾವ ಸುರೇಶ್ ಎಂಬವನ ಮೂಲಕ ದೂರುದಾರರಿಂದ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಆರೋಪಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.ಗುಡ್ಡದ ಮಾದಾಪುರದ ಅವಿನಾಶ ಎಂಬವರು ಈ ಪ್ರಕರಣದ ದೂರುದಾರರು. ಚೆಕ್‌ ಅಮಾನ್ಯ ಪ್ರಕರಣದಲ್ಲಿ ತಮಿಳುನಾಡು ಮೂಲದ ಆರೋಪಿಯನ್ನು ಬಂಧಿಸುವಂತೆ ಮಾನ್ಯ ನ್ಯಾಯಾಲಯ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿತ್ತು. ಈ ವಾರೆಂಟ್ ಜಾರಿಗೊಳಿಸಲು ಪೊಲೀಸರು ಲಂಚದ ಬೇಡಿಕೆ ಇಟ್ಟಿದ್ದರು.ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ, ಇನ್ಸ್‌ಪೆಕ್ಟರ್‌ಗಳಾದ ರಾಷ್ಟ್ರಪತಿ ಹಾಗೂ ಆಂಜನೇಯ ಆರೋಪಿಗಳನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.
Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

Advertise under the article

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

Pay Rs 200