-->
ದಾಖಲೆ ಪ್ರಕರಣಗಳ ವಿಲೇವಾರಿ: ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ನೇತೃತ್ವದಲ್ಲಿ ಗಮನಾರ್ಹ ಸಾಧನೆ

ದಾಖಲೆ ಪ್ರಕರಣಗಳ ವಿಲೇವಾರಿ: ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ನೇತೃತ್ವದಲ್ಲಿ ಗಮನಾರ್ಹ ಸಾಧನೆ

ದಾಖಲೆ ಪ್ರಕರಣಗಳ ವಿಲೇವಾರಿ: ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ನೇತೃತ್ವದಲ್ಲಿ ಗಮನಾರ್ಹ ಸಾಧನೆ








ನ್ಯಾ. ಡಿ.ವೈ.ಚಂದ್ರಚೂಡ್ ಅವರು ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುಪ್ರೀಂ ಕೋರ್ಟ್ ಗಮನಾರ್ಹ ಸಾಧನೆಯೊಂದನ್ನು ಮಾಡಿದೆ. ಕಡಿಮೆ ಅವಧಿಯಲ್ಲಿ ದಾಖಲೆ ಸಂಖ್ಯೆಯ ಪ್ರಕರಣಗಳನ್ನು ಅದು ಇತ್ಯರ್ಥ ಮಾಡಿದೆ.


ನವೆಂಬರ್ 9, 2022ರಂದು ಡಿ ವೈ ಚಂದ್ರಚೂಡ್ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದರು. ಅಲ್ಲಿಂದ ಡಿಸೆಂಬರ್ 16ರವರೆಗೆ ಸುಪ್ರೀಂ ಕೋರ್ಟ್ ಬರೋಬ್ಬರಿ 6,844 ಪ್ರಕರಣಗಳನ್ನು ವಿಲೇವಾರಿ ಮಾಡಿದೆ.



ಈ ಅವಧಿಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 5898. ಈ ಅವಧಿಯಲ್ಲಿ 2511 ವರ್ಗಾವಣೆ ಮತ್ತು ಜಾಮೀನು ಅರ್ಜಿಗಳನ್ನು ಸರ್ವೋಚ್ಛ ನ್ಯಾಯಪೀಠಗಳು ವಿಲೇವಾರಿ ಮಾಡಿವೆ.



2022ಡಿಸೆಂಬರ್ 12 ರಂದು ಒಂದೇ ದಿನ ಒಟ್ಟು 384 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಇದು ನ್ಯಾ. ಡಿ.ವೈ. ಚಂದ್ರಚೂಡ್ ಅವರ ಸಿಜೆಐ ಆಗಿರುವ ಅಧಿಕಾರಾವಧಿಯಲ್ಲಿ ಗರಿಷ್ಠ ಪ್ರಮಾಣದ ಪ್ರಕರಣಗಳಾಗಿವೆ. ಈ ಪೈಕಿ 105 ವರ್ಗಾವಣೆ ಅರ್ಜಿಗಳು ಮತ್ತು 71 ಜಾಮೀನು ಪ್ರಕರಣಗಳಾಗಿವೆ.



ಸರ್ವೋಚ್ಛ ನ್ಯಾಯಾಲಯದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನ್ಯಾ. ಡಿ.ವೈ. ಚಂದ್ರಚೂಡ್ ಜಾರಿಗೆ ತಂದ ಸುಧಾರಣೆ ಎಂಬಂತೆ ಪ್ರತಿದಿನ 10 ವರ್ಗಾವಣೆ ಮತ್ತು ಜಾಮೀನು ಪ್ರಕರಣಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುತ್ತಿದೆ. ಇದೇ ರೀತಿ, ಜಾಮೀನು ಪ್ರಕರಣಗಳಿಗೂ ಆದ್ಯತೆ ನೀಡಲಾಗುವುದು ಎಂದು ಈ ಹಿಂದೆ ಸಿಜೆಐ ತಿಳಿಸಿದ್ದರು.



ಪ್ರಸಕ್ತ ಮತ್ತು ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ನ್ಯಾ. ಉದಯ್ ಉಮೇಶ್ ಲಲಿತ್ ಅವರ ಅಧಿಕಾರವಧಿಯ ಎರಡು ತಿಂಗಳಲ್ಲಿ ಒಟ್ಟು 10,000 ಪ್ರಕರಣಗಳ ಇತ್ಯರ್ಥ ನಡೆಸಲಾಗಿತ್ತು. ಈ ಪೈಕಿ ಮೊದಲ 5,000 ಪ್ರಕರಣಗಳು ಕೇವಲ 13 ದಿನಗಳಲ್ಲೇ ವಿಲೇವಾರಿ ಗಿದ್ದವು.



Ads on article

Advertise in articles 1

advertising articles 2

Advertise under the article