-->
ರಿಕ್ರಿಯೇಷನ್ ಕ್ಲಬ್‌ಗಳು, ಸಂಘ ಸಂಸ್ಥೆಗಳ ಮನೋರಂಜನಾ ಚಟುವಟಿಕೆಗೆ ಪೊಲೀಸ್ ಅನುಮತಿ ಬೇಕಿಲ್ಲ: ಕರ್ನಾಟಕ ಹೈಕೋರ್ಟ್

ರಿಕ್ರಿಯೇಷನ್ ಕ್ಲಬ್‌ಗಳು, ಸಂಘ ಸಂಸ್ಥೆಗಳ ಮನೋರಂಜನಾ ಚಟುವಟಿಕೆಗೆ ಪೊಲೀಸ್ ಅನುಮತಿ ಬೇಕಿಲ್ಲ: ಕರ್ನಾಟಕ ಹೈಕೋರ್ಟ್

ರಿಕ್ರಿಯೇಷನ್ ಕ್ಲಬ್‌ಗಳು, ಸಂಘ ಸಂಸ್ಥೆಗಳು ಮನೋರಂಜನಾ ಚಟುವಟಿಕೆ ನಡೆಸಲು ಪೊಲೀಸ್ ಅನುಮತಿ ಪಡೆಯಬೇಕಿಲ್ಲ: ಕರ್ನಾಟಕ ಹೈಕೋರ್ಟ್





ರಿಕ್ರಿಯೇಷನ್ ಕ್ಲಬ್‌ಗಳು ಅಥವಾ ಸಂಘ ಸಂಸ್ಥೆಗಳು ತಮ್ಮ ಮನೋರಂಜನಾ ಚಟುವಟಿಕೆ ನಡೆಸಲು ಪೊಲೀಸ್ ಅನುಮತಿ ಪಡೆಯಬೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.



ಮೈಸೂರಿನ ಸೀರಗಳ್ಳಿ ಲಕ್ಷ್ಮಿದೇವಿ ರಿಕ್ರಿಯೇಷನ್‌ ಕ್ಲಬ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೆ.ಎಸ್. ಹೇಮಲೇಖಾ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಈ ಬಗ್ಗೆ ಪೊಲೀಸರಿಗೆ ಸ್ಪಷ್ಟ ನಿರ್ದೇಶನವನ್ನೂ ನೀಡಿದೆ.



ರಿಕ್ರಿಯೇಷನ್ ಕ್ಲಬ್‌, ಸಂಘ ಸಂಸ್ಥೆಗಳು ಮನರಂಜನಾ ಚಟುವಟಿಕೆ ನಡೆಸಲು ಕರ್ನಾಟಕ ಪೊಲೀಸ್‌ ಕಾಯ್ದೆಯಡಿ ಪೊಲೀಸರಿಂದ ಪರವಾನಗಿ ಪಡೆಯಬೇಕು ಎಂದು ಹೇಳುವುದು ತರ್ಕಹೀನ ಮತ್ತು ಇಲಾಖೆಯ ಸ್ವೇಚ್ಛಾಚಾರದ ಕ್ರಮ ಎಂದು ನ್ಯಾಯಪೀಠ ಬಣ್ಣಿಸಿದೆ.



ಪೊಲೀಸರಿಗೆ ಸ್ಪಷ್ಟ ನಿರ್ದೇಶನ:

# ಕ್ಲಬ್‌ಗಳು ತನ್ನ ಸಂಘದ ಸದಸ್ಯರಿಗೆ ಸೀಮಿತವಾಗಿ ಮಾತ್ರ ಮನರಂಜನಾ ಚಟುವಟಿಕೆ ನಡೆಸುವ ಸಂಸ್ಥೆಯಾಗಿದೆ

# ಇಂತಹ ಕಾರ್ಯಕ್ರಮಗಳಿಗೆ ಶುಲ್ಕ ಪಡೆದೋ ಅಥವಾ ಉಚಿತವಾಗಿಯೋ ಸಾರ್ವಜನಿಕರು ಪ್ರವೇಶ ಪಡೆಯುವಂತಿಲ್ಲ

# ಬೈಲಾ ಪ್ರಕಾರ ಕಾರ್ಯಕ್ರಮಕ್ಕೆ ಪ್ರವೇನಿರ್ಬಂಧಿತವಾಗಿದ್ದು, ಕ್ಲಬ್‌ ಸದಸ್ಯರಿಗೆ ಮಾತ್ರ ಪ್ರವೇಶವಿರಲಿದೆ.

# ಪ್ರಸಕ್ತ ಕಾನೂನಿನ ಅನ್ವಯ ಯಾವುದೇ ಕ್ಲಬ್‌ ಅಥವಾ ಸಂಘ-ಸಂಸ್ಥೆಯು ಮನರಂಜನಾ ಚಟುವಟಿಕೆ ನಡೆಸಲು ಯಾವುದೇ ಅನುಮತಿ ಅಥವಾ ಲೈಸನ್ಸ್ ಪಡೆಯಬೇಕಾಗಿಲ್ಲ

# ಕರ್ನಾಟಕ ಪೊಲೀಸ್‌ ಕಾಯ್ದೆ ಅಡಿ ಲೈಸನ್ಸ್‌ ಪಡೆಯುವಂತೆ ಸೂಚಿಸುವುದು ಸ್ವೇಚ್ಛಾಚಾರದ, ತರ್ಕಹೀನ ಕ್ರಮ

# ಇಂತಹ ಕಾರ್ಯಕ್ರಮಗಳಿಗೆ ಪೊಲೀಸರು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ


ಪೊಲೀಸ್ ಏನು ಮಾಡಬಹುದು?

'ಕ್ಲಬ್‌' ಎಂದು ರಿಜಿಸ್ಟರ್ ಆಗಿರುವ ಎಲ್ಲವೂ ಕಾನೂನುಬಾಹಿರ ಯಾ ಅಕ್ರಮ ಚಟುವಟಿಕೆಯಲ್ಲಿ ತೊಡಗಿವೆ ಎನ್ನುವಂತೆ ಸರ್ಕಾರದ ಪ್ರಾಧಿಕಾರಗಳು ಭಾವಿಸಿಕೊಂಡು ಅದರ ವಿರುದ್ಧ ನಡೆದುಕೊಳ್ಳಬಾರದು. ಅಗತ್ಯಬಿದ್ದರೆ, ಪೊಲೀಸರು ಕಾಯ್ದೆಯ ಷರತ್ತುಗಳ ಜಾರಿಗೆ 'ನಿಗಾ' ಯಾ ರೇಡ್‌ ನಂತಹ ಕ್ರಮಗಳನ್ನು ಬಳಸಬಹುದು. 


ಪೊಲೀಸರು ಪರಿಶೀಲನೆ ನಡೆಸಿ ಅಲ್ಲಿ ಏನು ಕಾರ್ಯಕ್ರಮ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯಬಹುದು. ಈ ಮೂಲಕ ಕ್ಲಬ್‌ ಸ್ಥಳವನ್ನು ಅಕ್ರಮ ಚಟುವಟಿಕೆಗಳಿಗೆ ನಡೆಸದಂತೆ ಪೊಲೀಸರು ತಡೆಯಬಹುದು ಎಂದು ನ್ಯಾಯಪೀಠ ಹೇಳಿದೆ.



ಕರ್ನಾಟಕ ಪೊಲೀಸ್‌ ಆಕ್ಟ್ ಕಲಂ 2 (14) ಮತ್ತು (15)ರ ಅಡಿ ಸಾರ್ವಜನಿಕ ಅಮ್ಯೂಸ್ಮೆಂಟ್ ಅಥವಾ ಸಾರ್ವಜನಿಕ ಮನರಂಜನೆಯಾದರೆ ಮಾತ್ರ ಲೈಸನ್ಸ್ ಪಡೆಯಬೇಕು ಎಂದು ಹಲವು ತೀರ್ಪುಗಳನ್ನು ಉಲ್ಲೇಖಿಸಿ ನ್ಯಾಯಪೀಠ ತಿಳಿಸಿದೆ.



ತಮ್ಮ ಕ್ಲಬ್‌ನ ಸದಸ್ಯರು ರಮ್ಮಿ (ಕಾರ್ಡ್‌ ಗೇಮ್ಸ್)‌, ಚೆಸ್‌, ಕೇರಂ, ಬಿಲಿಯರ್ಡ್ಸ್, ಸ್ನೂಕರ್ ಮುಂತಾದ ಕೌಶಲ್ಯದ ಒಳಾಂಗಣ ಆಟಗಳು ಅಥವಾ ಹೊರಾಂಗಣದ ಆಟಗಳನ್ನು ಆಡಲು ಸಾರ್ವಜನಿಕ ಮನರಂಜನಾ ಸ್ಥಳಗಳ ಪರವಾನಗಿ ಮತ್ತು ನಿಯಂತ್ರಣ ನಿಬಂಧನೆಯ ಅಡಿ ಪರವಾನಗಿ ಅಥವಾ ಅನುಮತಿ‌ ಪಡೆಯುವ ಅಗತ್ಯವಿಲ್ಲ.



ಸದ್ರಿ ಪ್ರಕರಣದಲ್ಲಿ ಅರ್ಜಿದಾರರು ತಮ್ಮ ಮನೋರಂಜಾ ಕಾರ್ಯಕ್ರಮಕ್ಕೆ ಸ್ಥಳೀಯ ಪೊಲೀಸರ ಅನುಮತಿ ಕೋರಿದ್ದರು. ಲಿಖಿತ ಅನುಮತಿ ಅರ್ಜಿಯನ್ನು ಸ್ಥಳೀಯ ಪೊಲೀಸರು ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ರಿಕ್ರಿಯೇಷನ್ ಕ್ಲಬ್ ಹೈಕೋರ್ಟ್ ಮೆಟ್ಟಿಲೇರಿದ್ದರು.



ಇದನ್ನೂ ಓದಿ:

ಕ್ರಿಮಿನಲ್ ಪ್ರಕರಣ ಇದ್ದರೆ ನೋಟೀಸ್ ನೀಡದೆ ಸರ್ಕಾರಿ ನೌಕರರ ಅಮಾನತು: ಇಲಾಖೆಯ ಕ್ರಮಕ್ಕೆ ಅಸ್ತು ಎಂದ ಕರ್ನಾಟಕ ಹೈಕೋರ್ಟ್‌




ಕೋರ್ಟ್ ಆದೇಶಕ್ಕಿಂತ ರಿಜಿಸ್ಟ್ರಾರ್‌ ಮೇಲಲ್ಲ: ನಿರ್ದಿಷ್ಟ ಪ್ರಕರಣ ಪಟ್ಟಿ ಮಾಡದ ರಿಜಿಸ್ಟ್ರಿ ಮೇಲೆ ಸುಪ್ರೀಂ ಕೋರ್ಟ್‌ ಗುಡುಗು!



ಲೋಕ ಅದಾಲತ್ ಡಿಕ್ರಿಯನ್ನು ರದ್ದುಪಡಿಸುವಂತಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು


ಮಹಿಳಾ ಕಾನೂನು ದುರುಪಯೋಗ: ಮಹತ್ವದ ಸುಪ್ರೀಂ ಕೋರ್ಟ್‌ನ ಮಹತ್ವದ ಜಡ್ಜ್‌ಮೆಂಟ್‌ಗಳು!




ಕ್ರಿಮಿನಲ್‌ ಪ್ರಕರಣಗಳಲ್ಲಿ ಸಾಕ್ಷ್ಯದ ಮಹತ್ವ, ಪೂರ್ವಭಾವನೆ ಮತ್ತು ಸಾಕ್ಷ್ಯದ ಮೌಲ್ಯೀಕರಣ


Ads on article

Advertise in articles 1

advertising articles 2

Advertise under the article