ಜೀನ್ಸ್ ಧರಿಸಿ ಕಲಾಪಕ್ಕೆ ಹಾಜರಾದ ವಕೀಲ: ಕ್ಯಾಂಪಸ್‌ನಿಂದ ಹೊರ ಹಾಕಿದ ಹೈಕೋರ್ಟ್!
ಜೀನ್ಸ್ ಧರಿಸಿ ಕಲಾಪಕ್ಕೆ ಹಾಜರಾದ ವಕೀಲ: ಕ್ಯಾಂಪಸ್‌ನಿಂದ ಹೊರ ಹಾಕಿದ ಹೈಕೋರ್ಟ್!
ವಕೀಲರೊಬ್ಬರನ್ನು ಜೀನ್ಸ್ ಧರಿಸಿ ಕಲಾಪಕ್ಕೆ ಹಾಜರಾದ ಕಾರಣಕ್ಕೆ ಕೋರ್ಟ್ ಆವರಣದಿಂದ ಪೊಲೀಸರ ಮೂಲಕ ಹೊರಗೆ ಕಳುಹಿಸಿದ ಘಟನೆ ಗುವಾಹಟಿ ಹೈಕೋರ್ಟ್‌ನಲ್ಲಿ ನಡೆದಿದೆ.
ನ್ಯಾಯಮೂರ್ತಿ ಕಲ್ಯಾನ್ ರೈ ಸುರಾನಾ ವಸ್ತ್ರ ಸಂಹಿತೆ ಪಾಲಿಸದ ವಕೀಲ ಬಿ.ಕೆ. ಮಹಾಜನ್ ಅವರನ್ನು ಹೊರಕಳುಹಿಸುವಂತೆ ಪೊಲೀಸರಿಗೆ ಸೂಚಿಸಿದರು.
ನಿರೀಕ್ಷಣಾ ಜಾಮೀನು ಕೋರಿ ಅರ್ಜಿದಾರರ ಪರ ಹಾಜರಾದ ವಕೀಲರು ಜೀನ್ಸ್ ಧರಿಸಿರುವ ಕಾರಣ ಪ್ರಕರಣವನ್ನು ಮುಂದೂಡಲಾಗಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದ ನ್ಯಾಯಪೀಠ, ವಕೀಲರ ಕಾಯ್ದೆ 1961 ಪ್ರಕಾರ ಕಪ್ಪು ಕೋಟು ಯಾ ಕಪ್ಪು ಬಣ್ಣದ ಉದ್ದನೆಯ ನಿಲುವಂಗಿ (ರೋಬ್), ಬಿಳಿ ಅಂಗಿ, ಕೊರಳುಪಟ್ಟಿ(ಟೈ-ಬ್ಯಾಂಡ್) ಇರುವ ನಿರ್ದಿಷ್ಟ ವಸ್ತ್ರ ಧರಿಸಿರಬೇಕು. ಭಾರತೀಯ ವಕೀಲರ ಪರಿಷತ್ತು ಕೂಡ ಇದೇ ಮಾನದಂಡವನ್ನು ಇಟ್ಟಿದೆ ಎಂಬುದಾಗಿ ತಿಳಿಸಿದೆ.
ಈ ಘಟನೆಯ ಬಗ್ಗೆ ಮುಖ್ಯ ನ್ಯಾಯಮೂರ್ತಿ, ರಿಜಿಸ್ಟ್ರಾರ್ ಜನರಲ್, ಅದೇ ರೀತಿ ಅಸ್ಸಾಂ, ನ್ಯಾಗಲ್ಯಾಂಡ್, ಮಿಜೋರಾಮ್ ಮತ್ತು ಅರುಣಾಚಲ ಪ್ರದೇಶದ ವಕೀಲರ ಪರಿಷತ್ತಿಗೆ ಮಾಹಿತಿ ನೀಡುವಂತೆ ನ್ಯಾಯಪೀಠ ಸೂಚನೆ ನೀಡಿದೆ.