-->
ಕೇಂದ್ರಕ್ಕೆ ನ್ಯಾಯಾಂಗವನ್ನು ಸ್ವಾದೀನಪಡಿಸುವ ಉದ್ದೇಶವಿದೆ: ನ್ಯಾ. ಸಂತೋಷ್ ಹೆಗ್ಡೆ

ಕೇಂದ್ರಕ್ಕೆ ನ್ಯಾಯಾಂಗವನ್ನು ಸ್ವಾದೀನಪಡಿಸುವ ಉದ್ದೇಶವಿದೆ: ನ್ಯಾ. ಸಂತೋಷ್ ಹೆಗ್ಡೆ

ಕೇಂದ್ರಕ್ಕೆ ನ್ಯಾಯಾಂಗವನ್ನು ಸ್ವಾದೀನಪಡಿಸುವ ಉದ್ದೇಶವಿದೆ: ನ್ಯಾ. ಸಂತೋಷ್ ಹೆಗ್ಡೆ






ನ್ಯಾಯಾಂಗದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸಲು ಮುಂದಾಗಿದೆ. ಕೊಲೀಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಕ ಮಾಡುವ ಪದ್ಧತಿಗೆ ನನ್ನ ಸಂಪೂರ್ಣ ವಿರೋಧ ಇದೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.



ಶಾಸಕಾಂಗ ಈಗಾಗಲೇ ಕಾರ್ಯಂಗದ ಆಡಳಿತವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಅದೇ ರೀತಿ ನ್ಯಾಯಾಂಗವನ್ನೂ ತನ್ನ ನಿಯಂತ್ರಣಕ್ಕೆ ತರಬೇಕು ಎಂದು ಬಯಸಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಅವರು ಹೇಳಿದ್ದಾರೆ.



ಕೇಂದ್ರಕ್ಕೆ ನ್ಯಾಯಾಂಗವನ್ನು ಸ್ವಾದೀನಪಡಿಸುವ ಉದ್ದೇಶವಿದೆ ಎಂದು ಹೇಳಿರುವ ನ್ಯಾ. ಸಂತೋಷ್ ಹೆಗ್ಡೆ, ಕೊಲೀಜಿಯಂನಲ್ಲಿ ಸರ್ಕಾರದ ಪ್ರತಿನಿಧಿ ನೇಮಕಕ್ಕೆ ತನ್ನ ಸಂಪೂರ್ಣ ವಿರೋಧ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.



ಒಬ್ಬ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರ ಕೊಲೀಜಿಯಂ ಬಿಟ್ಟರೆ ಹೊರಗಿನವರಿಗೆ ಗೊತ್ತಿರುವುದಿಲ್ಲ. ನ್ಯಾಯಾಧೀಶರಾಗಿ ನೇಮಕವಾಗುವ ವಕೀಲರು ನ್ಯಾಯಾಲಯದಲ್ಲಿ ಯಾವ ರೀತಿಯ ಪ್ರಕರಣಗಳನ್ನು ಮಾಡಿದ್ದಾರೆ, ಅವರ ಅನುಭವ ಏನು? ಇವರು ನ್ಯಾಯಾಧೀಶರ ಹುದ್ದೆಗೆ ಅರ್ಹರೇ ಎಂಬುದು ಕೊಲೀಜಿಯಂಗೆ ಮಾತ್ರ ಗೊತ್ತಿರುತ್ತದೆ. ಅಲ್ಲಿ ಸರ್ಕಾರದ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಸಂತೋಷ್ ಹೆಗ್ಡೆ ಹೇಳಿದರು.



ಒಂದು ಸರ್ಕಾರಕ್ಕೆ ಸ್ಪಷ್ಟ ಬಹುಮತ ಇದೆ ಎಂಬ ಕಾರಣಕ್ಕೆ ತನಗಿಷ್ಟ ಬಂದ ಹಾಗೆ ನಡೆದುಕೊಳ್ಳಲು ಆಗುವುದಿಲ್ಲ. ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನ್ಯಾಯಾಂಗದಲ್ಲಿ ಎಲ್ಲವೂ ಸರಿ ಇದೆ ಎಂದು ನಾನು ಹೇಳುವುದಿಲ್ಲ. ಆದರೆ, ಉಳಿದ ಎರಡು ರಂಗಗಳಿಗಿಂತ ಕಡಿಮೆ ಭ್ರಷ್ಟಾಚಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೆ. ಅದನ್ನು ಹಿಡಿತಕ್ಕೆ ತೆಗೆದುಕೊಂಡರೆ ಪ್ರಜೆಗಳು ಎಲ್ಲಿಗೆ ಹೋಗಬೇಕು.. ಎಂದು ಪ್ರಶ್ನಿಸಿದ ಅವರು ಇದು ನಿಶ್ಚಿತವಾಗಿ ಸಂವಿಧಾನ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.






Ads on article

Advertise in articles 1

advertising articles 2

Advertise under the article