ಮಹಿಳಾ ವಕೀಲರಿಗೆ ಕಾಂಟ್ರ್ಯಾಕ್ಟ್ ಶೂರಿಟಿಯ ಬೆದರಿಕೆ: ಪೊಲೀಸರಿಗೆ ದೂರು
Tuesday, January 31, 2023
ಮಹಿಳಾ ವಕೀಲರಿಗೆ ಕಾಂಟ್ರ್ಯಾಕ್ಟ್ ಶೂರಿಟಿಯ ಬೆದರಿಕೆ: ಪೊಲೀಸರಿಗೆ ದೂರು
ಗುತ್ತಿಗೆ ಪಡೆದು ಆರೋಪಿಗಳಿಗೆ ಜಾಮೀನು ನೀಡಲು ಶೂರಿಟಿಯನ್ನು ಪೂರೈಸುತ್ತಿದ್ದಾನೆ ಎನ್ನಲಾದ ವ್ಯಕ್ತಿಯೊಬ್ಬ ಮಂಗಳೂರಿನ ಮುಸ್ಲಿಂ ಮಹಿಳಾ ವಕೀಲರಿಗೆ ಬೆದರಿಕೆ ಒಡ್ಡಿದ ಪ್ರಕರಣ ನಡೆದಿದೆ.
ಕೋರ್ಟ್ ಆವರಣದಲ್ಲಿ ರುಬಿಯಾ ಎಂಬ ವಕೀಲರಿಗೆ ಹಮೀದ್ ಕಾವೂರು ಆಲಿಯಾಸ್ ಮೊಹಮ್ಮದ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ.
ರುಬಿಯಾ ಮಂಗಳೂರು ವಕೀಲರ ಸಂಘಕ್ಕೆ ದೂರು ನೀಡಿದ್ದು, ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ, ಕಾರ್ಯದರ್ಶಿ ಎಣ್ಮಕಜೆ ಶ್ರೀಧರ್, ಡಿಫೆನ್ಸ್ ಕೌನ್ಸೆಲ್ ವಾಸುದೇವ ಗೌಡ ನೇತೃತ್ವದಲ್ಲಿ ರುಬಿಯಾ ಮಂಗಳೂರು ಉತ್ತರ ಪೊಲೀಸರಿಗೆ ದೂರು ನೀಡಿದ್ದಾರೆ.
ನಾನು ಬೇಕಾದಷ್ಟು ಜನರಿಗೆ ಜಾಮೀನು ನೀಡಿದ್ದೇನೆ. ನೀನು ಯಾವ ಲೆಕ್ಕದ ವಕೀಲರು. ನಿನ್ನನ್ನು ಕೋರ್ಟಿಗೆ ಬರದ ಹಾಗೆ ಮಾಡುವೆನು ಎಂದು ಆತ ಬಹಿರಂಗವಾಗಿ ಹೀನಾಯವಾಗಿ ಬೈದಿರುತ್ತಾನೆ ಎಂದು ವಕೀಲರಾದ ರುಬಿಯಾ ಪೊಲೀಸರಿಗೆ ನೀಡಿದ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.